ಶಿಹಾನ್‌ ಹುಸೇನಿ 
ಸಿನಿಮಾ ಸುದ್ದಿ

ತಮಿಳು ಖ್ಯಾತ ‌ನಟ, ಕರಾಟೆ ದಂತಕಥೆ ಶಿಹಾನ್‌ ಹುಸೇನಿ ಕ್ಯಾನ್ಸರ್‌ಗೆ ಬಲಿ!

ಹುಸೇನಿ ಅವರಿಗೆ ಪ್ರತಿದಿನ ಎರಡು ಯೂನಿಟ್ ರಕ್ತದ ಅವಶ್ಯಕತೆ ಇದ್ದು, ವೈದ್ಯಕೀಯ ವೆಚ್ಚವನ್ನು ಭರಿಸಲು ತಮ್ಮ ತರಬೇತಿ ಕೇಂದ್ರವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.

ಚೆನ್ನೈ: ತಮಿಳು ನಟ, ಕರಾಟೆ ದಂತಕಥೆ ಶಿಹಾನ್‌ ಹುಸೇನಿ ಅವರು ಇಂದು (ಮಂಗಳವಾರ) ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹುಸೇನಿ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಲ್ಯುಕೇಮಿಯಾದೊಂದಿಗೆ ಹೋರಾಟ ನಡೆಸಿದ್ದ ಹುಸೇನಿಯ ದೇಹವನ್ನು ಹೆಚ್ಚಿನ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಗಿದೆ ಎಂದು ಅಯ್ಯರ್ ತಿಳಿಸಿದ್ದಾರೆ.

ಕರಾಟೆ ತರಬೇತುದಾರರಾಗಿ ಹುಸೇನಿ ಖ್ಯಾತಿಯನ್ನು ಗಳಿಸಿದ್ದರು. 1986ರಲ್ಲಿ ಕಮಲ್ ಹಾಸನ್ ಅವರ ಪುನ್ನಗೈ ಮನ್ನನ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ರಜನಿಕಾಂತ್ ಅವರ ವೆಲೈಕರಣ್ ಚಿತ್ರದಲ್ಲಿ ನಟಿಸಿದ್ದರು.

ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಹುಸೇನಿ ಅವರಿಗೆ ಇತ್ತೀಚೆಗೆ ಲ್ಯುಕೇಮಿಯಾ ಇರುವುದು ಪತ್ತೆಯಾಗಿತ್ತು. ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ತಮ್ಮ ಮಾಜಿ ವಿದ್ಯಾರ್ಥಿಗಳಾದ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ತಮಿಳು ಸ್ಟಾರ್ ಹೀರೋ ವಿಜಯ್ ಅವರನ್ನು ಸಹಾಯ ಮಾಡುವಂತೆ ಕೋರಿದ್ದರು.

ಹುಸೇನಿ ಅವರಿಗೆ ಪ್ರತಿದಿನ ಎರಡು ಯೂನಿಟ್ ರಕ್ತದ ಅವಶ್ಯಕತೆ ಇದ್ದು, ವೈದ್ಯಕೀಯ ವೆಚ್ಚವನ್ನು ಭರಿಸಲು ತಮ್ಮ ತರಬೇತಿ ಕೇಂದ್ರವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Russian strike: ಉಕ್ರೇನ್‌ ರೈಲು ನಿಲ್ದಾಣದಲ್ಲಿ ರಷ್ಯಾ 'ಡ್ರೋನ್' ದಾಳಿ; ಓರ್ವ ಸಾವು, 30 ಮಂದಿಗೆ ಗಾಯ! Video

ಬೆಂಗಳೂರು: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ; Oyo ರೂಂನಲ್ಲಿ ಮಹಿಳೆ ಆತ್ಮಹತ್ಯೆ!

ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆಯಲ್ಲಿ, ಕೈ ಮುಗಿದು ಕುಳಿತ ನಿತೀಶ್ ಕುಮಾರ್; ವ್ಯಾಪಕ ಟೀಕೆ!: Video

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT