ನವದೆಹಲಿ: ನಟಿ ಸಮಂತಾ ರುತ್ ಪ್ರಭು ಆಗ್ಗಾಗ್ಗೆ ಪ್ರವಾಸ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಫೆದರ್‌ಡೇಲ್ ಸಿಡ್ನಿ ವನ್ಯಜೀವಿ ಉದ್ಯಾನಕ್ಕೆ ತೆರಳಿ ವವನ್ಯಜೀವಿಗಳೊಂದಿಗಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಈ ಚಿತ್ರಗಳನ್ನು ಯಾರು ತೆಗೆದಿದ್ದಾರೆ ಎನ್ನುವ ಕುರಿತು ಇದೀಗ ಅಭಿಮಾನಿಗಳು ಸಮಂತಾರನ್ನು ಪ್ರಶ್ನಿಸಿದ್ದಾರೆ. 'ಈ ಚಿತ್ರಗಳನ್ನು ಯಾರು ತೆಗೆದರು?' ಎಂದು ಕೇಳಿದ ಅಭಿಮಾನಿಗೆ ಸಮಂತಾ ಉತ್ತರ ನೀಡಿದ್ದಾರೆ. 'ನವೋಮಿ' ಎಂದು ಉತ್ತರಿಸಿದ್ದಾರೆ. ಅವರು ಪ್ರವಾಸದ ಸಮಯದಲ್ಲಿ ಅವರ ಮಾರ್ಗದರ್ಶಿಯಾಗಿದ್ದರು.
ಚಿತ್ರಗಳನ್ನು ಹಂಚಿಕೊಂಡಿರುವ ಸಮಂತಾ, 'ಪ್ರಕೃತಿ, ಪ್ರಾಣಿಗಳು ಮತ್ತು ಒಳ್ಳೆಯ ಭಾವನೆಗಳು! ಕಾಂಗರೂಗಳಿಗೆ ಆಹಾರ ನೀಡುವುದರಿಂದ ಹಿಡಿದು ನಿದ್ದೆ ಮಾಡುವ ಕೋಲಾಗಳನ್ನು ನೋಡುವವರೆಗೆ, ಇದು ತುಂಬಾ ಸುಂದರವಾದ ಸಮಯವಾಗಿತ್ತು! ಆಸ್ಟ್ರೇಲಿಯಾದ ವನ್ಯಜೀವಿಗಳಿಗಾಗಿ ಅವರು ಮಾಡುವ ಎಲ್ಲ ಅದ್ಭುತ ಪುನರ್ವಸತಿ ಕೆಲಸಗಳಿಗಾಗಿ @featherdalewildlifepark ತಂಡಕ್ಕೆ ಅಭಿನಂದನೆಗಳು' ಎಂದು ಬರೆದಿದ್ದಾರೆ.
ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಸಮಂತಾ ಅಥವಾ ರಾಜ್ ಇಲ್ಲಿಯವರೆಗೆ ತಮ್ಮ ಸಂಬಂಧದ ಕುರಿತು ಎದ್ದಿರುವ ವದಂತಿಗಳನ್ನು ನಿರಾಕರಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ.
ಸಮಂತಾ ರುತ್ ಪ್ರಭು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ (ಫೆಬ್ರುವರಿ 1) ವಿಶ್ವ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದರು. ಆಗ ಸಮಂತಾ ಮತ್ತು ರಾಜ್ ನಿಡಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ಪಿಕಲ್‌ಬಾಲ್ ತಂಡ ಚೆನ್ನೈ ಸೂಪರ್ ಚಾಂಪಿಯನ್ಸ್‌ನ ಮಾಲೀಕರಾಗಿದ್ದಾರೆ.
ಸಮಂತಾ ಈ ಹಿಂದೆ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಅವರು 2021 ರಲ್ಲಿ ವಿಚ್ಛೇದನ ಘೋಷಿಸಿದರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕಳೆದ ವರ್ಷ ಡಿಸೆಂಬರ್ 4 ರಂದು ವಿವಾಹವಾಗಿದ್ದಾರೆ. ಸಮಂತಾ ರುತ್ ಪ್ರಭು ಕೊನೆಯ ಬಾರಿಗೆ ಅಮೆಜಾನ್ ಪ್ರೈಮ್ ಒರಿಜಿನಲ್ ಸಿಟಾಡೆಲ್: ಹನಿ ಬನ್ನಿ ನಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಂಡರು.