ರವಿಚಂದ್ರನ್  
ಸಿನಿಮಾ ಸುದ್ದಿ

'ಶಿವಣ್ಣ ಇದ್ರೆ ನಾನು ಬರಲ್ಲ, ನಾನಿದ್ದ ಕಡೆ ಶಿವಣ್ಣ ಬರಲ್ಲ; ಯುದ್ಧ ಮಾಡದೇ ಇರುವ ಸ್ಟಾರ್‌ಗಳು ನಾವಿಬ್ಬರೇ'!

ಸದ್ಯದ ಸ್ಥಿತಿಯಲ್ಲಿ ಸಿನಿಮಾ ಹಿಟ್‌ ಆಗಲು ಏನು ಮಾಡಬೇಕೋ ಅದನ್ನು ಮಾಡುವುದು ಈಗಿನ ತುರ್ತು. ಎಲ್ಲರೂ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಹಿಂದೆ ಬಿದ್ದಿದ್ದಾರೆ.

ಬೆಂಗಳೂರು: ಸಾಮಾನ್ಯವಾಗಿ ನಾನಿದ್ದ ವೇದಿಕೆಗೆ ಶಿವಣ್ಣ ಬರುವುದಿಲ್ಲ. ಶಿವಣ್ಣ ಇದ್ದ ವೇದಿಕೆಗೆ ನಾನು ಹೋಗುವುದಿಲ್ಲ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.

ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಟ ರವಿಚಂದ್ರನ್ ಎಂದಿನಂತೆ ಒಂದಿಷ್ಟು ಹಾಸ್ಯದ ಜೊತೆಗೆ ಕಿವಿಮಾತು ಹೇಳಿದರು.

ನಾನಿದ್ದ ವೇದಿಕೆಗೆ ಶಿವಣ್ಣ ಬರುವುದಿಲ್ಲ. ಶಿವಣ್ಣ ಇದ್ದ ವೇದಿಕೆಗೆ ನಾನು ಹೋಗುವುದಿಲ್ಲ,ಏಕೆಂದರೆ ನಾನಿದ್ದರೆ ಅವರಿದ್ದ ಹಾಗೆ, ಅವರಿದ್ದರೆ ನಾನಿದ್ದ ಹಾಗೆ. ಪರಸ್ಪರ ಸ್ನೇಹವನ್ನು ಉಳಿಸಿಕೊಂಡಿದ್ದೇವೆ. ಯುದ್ಧ ಮಾಡದೇ ಇರುವ ಇಬ್ಬರೇ ಸ್ಟಾರ್‌ಗಳು ನಾವು. ನಾವಿಬ್ಬರೂ ಸಿನಿಮಾ ಕನಸು ಕಂಡವರು. ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದರೂ ಒಬ್ಬರಿಗೊಬ್ಬರು ಹಾರೈಸಿದವರು.
ವಿ. ರವಿಚಂದ್ರನ್, ನಟ

ನಾನಿದ್ದ ವೇದಿಕೆಗೆ ಶಿವಣ್ಣ ಬರುವುದಿಲ್ಲ. ಶಿವಣ್ಣ ಇದ್ದ ವೇದಿಕೆಗೆ ನಾನು ಹೋಗುವುದಿಲ್ಲ, ಏಕೆಂದರೆ ನಾನಿದ್ದರೆ ಅವರಿದ್ದ ಹಾಗೆ, ಅವರಿದ್ದರೆ ನಾನಿದ್ದ ಹಾಗೆ. ಪರಸ್ಪರ ಸ್ನೇಹವನ್ನು ಉಳಿಸಿಕೊಂಡಿದ್ದೇವೆ. ಯುದ್ಧ ಮಾಡದೇ ಇರುವ ಇಬ್ಬರೇ ಸ್ಟಾರ್‌ಗಳು ನಾವು. ನಾವಿಬ್ಬರೂ ಸಿನಿಮಾ ಕನಸು ಕಂಡವರು. ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದರೂ ಒಬ್ಬರಿಗೊಬ್ಬರು ಹಾರೈಸಿದವರು. ಶಿವರಾಜ್‌ಕುಮಾರ್‌ ಅವರ ಜೊತೆಗಿನ ಸ್ನೇಹವನ್ನು ಮೆಲುಕು ಹಾಕಿದರು. ‘ನನಗೆ ಶಿವಣ್ಣ ಬಂದಿರುವುದು ಖುಷಿ. ಅವರು ಬರುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದರು.

ಸದ್ಯದ ಸ್ಥಿತಿಯಲ್ಲಿ ಸಿನಿಮಾ ಹಿಟ್‌ ಆಗಲು ಏನು ಮಾಡಬೇಕೋ ಅದನ್ನು ಮಾಡುವುದು ಈಗಿನ ತುರ್ತು. ಎಲ್ಲರೂ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಹಿಂದೆ ಬಿದ್ದಿದ್ದಾರೆ. ಚಿತ್ರಮಂದಿರಕ್ಕೆ ಜನರು ಬರುವಂತೆ ಸಿನಿಮಾ ಹೇಗೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿರಬೇಕು. ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವುದು ಬಹಳ ಮುಖ್ಯ. ಸಿನಿಮಾಗೆ ಬನ್ನಿ ಬನ್ನಿ ಎಂದು ಕರೆಯುವುದಲ್ಲ. ಸಿನಿಮಾವೇ ಜನರನ್ನು ಚಿತ್ರಮಂದಿರದತ್ತ ಕರೆಯಬೇಕು.

ನಾನು, ಶಿವಣ್ಣ ಬಂದ ತಕ್ಷಣ ಜನರು ಸಿನಿಮಾಗೆ ಬರುತ್ತಾರೆ ಎನ್ನುವುದು ಸುಳ್ಳು. ಚಿತ್ರದ ಪ್ರೋಮೊಗಳಿಗೆ, ಪ್ರಚಾರಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತೀರೋ, ಕಥೆ ಬರೆಯುವಾಗಲೂ ಅಷ್ಟೇ ಸಮಯ ನೀಡಿ. ಆ ಕಥೆಯ ಮೇಲೆ ನಂಬಿಕೆ ಇಟ್ಟು ಮುಂದುವರಿದರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ. ಸ್ಕ್ರಿಪ್ಟ್‌ ತಯಾರಿ ಸಂದರ್ಭದಲ್ಲಿ ಹೆಚ್ಚಿನ ಕೆಲಸ ಮಾಡಿ. ನಾವು ಹಿಂದೆ ಸಿನಿಮಾ ಮಾಡುವ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಜನರು ಬಂದು ಸಿನಿಮಾ ವೀಕ್ಷಿಸಿ ಅದನ್ನು ಗೆಲ್ಲಿಸುತ್ತಿದ್ದರು ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೆಲಂಗಾಣ ರಸ್ತೆ ಭೀಕರ ಅಪಘಾತ ಪ್ರಕರಣ: ಸಾವಿನ ಸಂಖ್ಯೆ 24ಕ್ಕೆ ಏರಿಕೆ; ದುರಂತಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

ಮತ್ತೊಂದು ಭೀಕರ ದುರಂತ: ಪ್ರಯಾಣಿಕ ಬಸ್ ಗೆ ಟ್ರಕ್ ಢಿಕ್ಕಿ, 18 ಮಂದಿ ಸಾವು

ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿ

ಮಹಿಳಾ ವಿಶ್ವಕಪ್ ಫೈನಲ್: ದ.ಆಫ್ರಿಕಾದಿಂದ ಗೆಲುವು ಕಸಿದ ಅದ್ಭುತ ಕ್ಯಾಚ್...! Video

Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರ ತಂಡಕ್ಕೆ ಬಹುಮಾನ ಘೋಷಿಸಿದ BCCI, ಮೊತ್ತ ಎಷ್ಟು ಗೊತ್ತಾ?

SCROLL FOR NEXT