ವರುಣ್ ತೇಜ್ - ಲಾವಣ್ಯ ತ್ರಿಪಾಠಿ 
ಸಿನಿಮಾ ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಟಾಲಿವುಡ್ ನಟ ವರುಣ್ ತೇಜ್, ಲಾವಣ್ಯ ತ್ರಿಪಾಠಿ

34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು.

ನವದೆಹಲಿ: ಟಾಲಿವುಡ್ ಸ್ಟಾರ್ ದಂಪತಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ.

ದಂಪತಿ ಮಂಗಳವಾರ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ದಂಪತಿ ಪರಸ್ಪರ ಕೈ ಹಿಡಿದುಕೊಂಡು, ಪುಟ್ಟ ಮಗುವಿನ ಶೂಗಳನ್ನು ಹಿಡಿದಿರುವ ಫೋಟೊ ಹಂಚಿಕೊಂಡಿದ್ದಾರೆ.

'ಜೀವನದ ಅತ್ಯಂತ ಸುಂದರವಾದ ಪಾತ್ರ, ಶೀಘ್ರದಲ್ಲೇ ಬರಲಿದೆ' ಎಂಬ ಶೀರ್ಷಿಕೆ ನೀಡಲಾಗಿದೆ.

34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು.

ವರುಣ್ ತೇಜ್ ಇತ್ತೀಚೆಗೆ 2024 ರಲ್ಲಿ ಬಿಡುಗಡೆಯಾದ 'ಮಟ್ಕಾ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಲಾವಣ್ಯ ಅವರು 'ಮಿಸ್ ಪರ್ಫೆಕ್ಟ್' ಎಂಬ ಹಾಸ್ಯ ಸರಣಿಯಲ್ಲಿ ನಟಿಸಿದ್ದರು. ಈ ತೆಲುಗು ಸರಣಿಯು 2024ರಲ್ಲಿ ಬಿಡುಗಡೆಯಾಯಿತು ಮತ್ತು ಇದನ್ನು ವಿಶ್ವಕ್ ಖಂಡೇರಾವ್ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್