ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದ್ದು, ಈ ನಡುವಲ್ಲೇ ಕಮಲ್ ಹಾಸನ್ ಪರ ನಟಿ ರಮ್ಯಾ ಅವರು ಬ್ಯಾಟ್ ಬೀಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿರುವ ಅವರು, 'ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ? ಹಾಗಂದ ಮಾತ್ರಕ್ಕೆ ಅವರ ಸಿನಿಮಾ ನಿಷೇಧಿಸುವುದು ಸ್ವಲ್ಪ ಅತಿರೇಕ ಅನಿಸುವುದಿಲ್ಲವೇ? ನಾವೆಲ್ಲ ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು. ಆದರೆ, ಅದಕ್ಕೂ ಮುನ್ನ ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕು' ಎಂದು ಹೇಳಿದ್ದಾರೆ.
ದ್ರಾವಿಡ ಭಾಷೆಗಳ ಚಾರ್ಟ್'ನ್ನೂ ಪೋಸ್ಟ್ ಮಾಡಿರುವ ಅವರು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಂಡಿಯಡಿಯಲ್ಲಿ ಬರುತ್ತವೆ. ಆದರೆ, ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ – ಆರ್ಯನ್ ಭಾಷೆ. ನಾವು ದ್ರಾವೀಡರು, ಎರಡೂ ಪರಸ್ಪರ ಭಿನ್ನ.
ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ? ಆದರೆ, ಚಿತ್ರವನ್ನ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅನಿಸುವುದಿಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಅದಕ್ಕಾಗಿ ನಾವು ಮೊದಲು ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.