ಬೆಂಗಳೂರು: Biggboss ಮನೆಯಲ್ಲಿ ಜಗಳ, ರಂಪಾಟ, ಕಾಮಿಡಿ ಅತಿರೇಕದ ವರ್ತನೆ ಎಲ್ಲವೂ ನಡೆಯುತ್ತಿರುತ್ತದೆ. ಕಾಮಿಡಿ ಮಾಡುತ್ತಾ ಎಲ್ಲರನ್ನೂ ರೇಗಿಸುತ್ತ ಗಿಲ್ಲಿ ನಟ ಮನೆ ತುಂಬಾ ಓಡಾಡಿಕೊಂಡಿರುತ್ತಾರೆ. ಆದರೆ ಒಂದು ದಿನ ಪ್ರತಿಸ್ಪರ್ಧಿ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಕೆಟ್ ನೀರು ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು.
ಸ್ನಾನಕ್ಕೆ ಹೋಗುವ ಮುನ್ನ ರಿಷಾಳನ್ನು ಗಿಲ್ಲಿ ನಟ ಬಕೆಟ್ ನೀರು ಕೊಡುವಂತೆ ಕೇಳಿದ್ದನು. ಆದರೆ ರಿಷಾ ನೀರು ಕೊಡದೆ ಸ್ನಾನ ಮಾಡಲು ಮುಂದಾದರು. ಸ್ವಲ್ಪ ಸಮಯ ನಂತರ ಗಿಲ್ಲಿ ನಟ ಈಗಲೇ ಬಕೆಟ್ ನೀರು ಕೊಡುವಂತೆ ಒತ್ತಾಯಿಸಿದರು. ಆಗ ರಿಷಾ ಸ್ನಾನ ಮಾಡುತ್ತಿದ್ದೇನೆ. ಸ್ನಾನವಾದ ನಂತರ ನೀರು ಕೊಡುತ್ತೇನೆ ಎಂದರು. ಅದಕ್ಕೆ ಗಿಲ್ಲಿ ನಟ ಮಲಗುವ ಕೋಣೆಗೆ ಬಂದು ರಿಷಾಳ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಸ್ನಾನದ ಕೋಣೆಯ ಬಳಿ ಹಾಕಿದ್ದನು.
ಸ್ನಾನ ಮಾಡಿ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಆಕ್ರೋಶಗೊಂಡು ಗಲ್ಲಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ನೀನು ಈಗೇ ಮಾಡುತ್ತೀಯಾ ಅಂದುಕೊಂಡಿರಲಿಲ್ಲ. ನೀನು ಮಾಡಿದ್ದು ಸರಿಯಿಲ್ಲ ಎಂದು ಗಿಲ್ಲಿ ನಟನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಈ ಘಟನೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದು ಮಹಿಳಾ ಆಯೋಗದ ಮೆಟ್ಟಿಲೇರಿದೆ. ಗಿಲ್ಲಿ ನಟ ರಿಷಾಳ ಬಟ್ಟೆಗಳನ್ನು ಮುಟ್ಟಿದ್ದು ಸರಿಯಲ್ಲ. ಗಿಲ್ಲಿ ನಟ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹೆಚ್ ಸಿ ಕುಶಲ ಎಂಬುವರು ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ.