ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಕನ್ನಡ ಜನಪ್ರಿಯ ಬಿಗ್ ಬಾಗ್ ಕನ್ನಡದ 12ನೇ ಆವೃತಿಯ ಮನೆಯಿಂದ ಕಾಕ್ರೊಚ್ ಸುಧಿ ಹೊರಗೆ ಬಂದಿದ್ದಾರೆ. ದೊಡ್ಮನೆಯಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಈ ಬಾರಿ ದುಷ್ಯಂತ್ ಮನೆಯಿಂದ ಹೊರ ಹೋಗಬಹುದೆಂದು ಮನೆಯ ಸದಸ್ಯರು ನಿರೀಕ್ಷೆ ಮಾಡಿದ್ದರು. ಆದರೆ, 49 ದಿನಗಳ ನಂತರ ಕಾಕ್ರೋಚ್ ಸುಧಿ ʻಬಿಗ್ ಬಾಸ್ʼ ಪಯಣ ಮನೆಯಿಂದ ಹೊರ ಬಂದಿದ್ದಾರೆ.
ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಶನಿವಾರ ಸೇವ್ ಆಗಿದ್ದರು. ಭಾನುವಾರ ಮೊದಲಿಗೆ ರಾಶಿಕಾ ಶೆಟ್ಟಿ ಹಾಗೂ ದುಷ್ಯಂತ್ ಸೇವ್ ಆದರು. ಕೊನೆಯಲ್ಲಿ ಕಾಕ್ರೋಚ್ ಸುಧಿ, ರಘು, ರಿಶಾ ಗೌಡ ಹಾಗೂ ಜಾಹ್ನವಿ ಉಳಿದುಕೊಂಡಿದ್ದರು. ನಾಲ್ಕು ಮಂದಿಯನ್ನು ಬಿಗ್ ಬಾಸ್ ಮನೆಯ ಬಾಗಿಲು ತೆರೆ ಹೊರಗಡೆ ಕಳುಹಿಸಿ, ಬಾಗಿಲು ಹಾಕಲಾಗಿತ್ತು. ಮತ್ತೆ ಬಾಗಿಲು ತೆರೆದಾಗ ಯಾರು ಇರುವುದಿಲ್ಲವೋ ಅವರು ಮನೆಯಿಂದ ಹೊರ ಬಂದಿದ್ದಾರೆಂದು ಅರ್ಥ ಎಂದು ಸುದೀಪ ಹೇಳಿ ಕಳುಹಿಸಿದ್ದರು.
ಬಿಗ್ ಬಾಸ್ ಮನೆಯ ಬಾಗಿಲು ವಾಪಾಸ್ ತೆರೆಯುತ್ತಿದ್ದಂತೆ ಕಾಕ್ರೋಚ್ ಸುಧಿ ಅಲ್ಲಿ ಇರಲಿಲ್ಲ. ರಘು, ರಿಶಾ ಗೌಡ ಹಾಗೂ ಜಾಹ್ನವಿ ಮಾತ್ರ ಉಳಿದಿಕೊಂಡಿದ್ದರು. ಇದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಶಾಕ್ ಕೊಟ್ಟಿತ್ತು. ಅಶ್ವಿನಿ ಗೌಡ, ಜಾಹ್ನವಿ, ರಘು ಹಾಗೂ ರಿಶಾ ಗೌಡ ಕಣ್ಣೀರು ಹಾಕಿದರು. ಜಾಹ್ನವಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸ್ಪೆಷಲ್ ಪವರ್ ಪಡೆದುಕೊಂಡಿದ್ದ ಕಾಕ್ರೋಚ್
ಮಿನಿ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ ಆಗಿ ಸ್ಪೆಷಲ್ ಪವರ್ ಪಡೆದುಕೊಂಡಿದ್ದರು. ಕಳೆದ ವಾರ ನಾಮಿನೇಟ್ ಆದಾಗ, ಆ ಪವರ್ ಅನ್ನು ಬಳಸಿ ಕಾಕ್ರೋಚ್ ಮನೆಯಲ್ಲೇ ಉಳಿದುಕೊಂಡರು. ಆದರೆ, ಈ ವಾರ ಸುಧಿಗೆ ಯಾವುದೇ ಪವರ್ ಇರಲಿಲ್ಲ. ಅಲ್ಲದೇ, ಈ ವಾರ ನಾನು ಪಕ್ಕಾ ಹೊರಗೆ ಹೋಗ್ತೀನಿ, ಹೊರಗೆ ಹೋಗ್ತೀನಿ ಅಂತಾನೇ ಸುಧಿ ಹೇಳಿಕೊಳ್ಳುತ್ತಿದ್ದರು. ಕೊನೆಗೂ ಹಾಗೆಯೇ ಅವರು ಹೊರಗೆ ಬಂದಿದ್ದಾರೆ.
ಅಶ್ವಿನಿ ನೆರಳಿನಿಂದ ಆಚೆ ಬಾರದ ಸುಧಿ! ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಜೊತೆಗೆ ಹೆಚ್ಚು ಕಾಕ್ರೋಜ್ ಕಾಲ ಕಳೆಯುತ್ತಿದ್ದದ್ದು ಅವರು ಹೊರಗೆ ಬರಲು ಪ್ರಮುಖ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಶ್ವಿನಿ ನೆರಳಿನಿಂದ ಆಚೆ ಬಂದು ಆಟ ಆಡಿದಿದ್ರೆ ಟಾಪ್ 5 ಲ್ಲಿ ಇರ್ತಿದ್ದರು. ಜಾಹ್ನವಿ, ಅಶ್ವಿನಿ ಸಹವಾಸ ಬಿಟ್ಟಿದಿದ್ರೆ ಸೇಫ್ ಆಗುತ್ತಿದ್ರು ಅಂತಾ ನೆಟ್ಟಿಗರು ಹೇಳುತ್ತಿದ್ದಾರೆ. ಸುಧಿ ಹೆಂಡ್ತಿ ಕೂಡಾ ಸುದೀಪ್ ಮುಂದೆ ಇದೇ ರೀತಿ ಹೇಳಿದರು.