ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಬಹು ಕೋಟಿ ವೆಚ್ಚದ ಬಹುನಿರೀಕ್ಷಿತ 'ವಾರಣಾಸಿ’ಯಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
'ಈಗ' ( (Eega) ಬಾಹುಬಲಿ ಬಳಿಕ ಇದೀಗ ವಾರಣಾಸಿ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ, ಈ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
ರಾಜಮೌಳಿ ಅವರ 'ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಇದೀಗ ರೂ.1,300 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸುದೀಪ್ ನಟನೆ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಂದಿಲ್ಲ.
ಬಾಹುಬಲಿ ಬಳಿಕ ಇದೀಗ ವಾರಣಾಸಿ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ, ಈ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
ಪಾತ್ರದ ಪ್ರಾಮುಖ್ಯತೆಯನ್ನ ಪರಿಗಣಿಸಿ ಸುದೀಪ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಸುದೀಪ್ ಒಪ್ಪಿಕೊಂಡರೆ, ವಿಶ್ವವೇ ತಿರುಗಿ ನೋಡುವಂತೆ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಚಿತ್ರದಲ್ಲಿ ಸುದೀಪ್ ಇರ್ತಾರೆ ಎಂಬುದು ಕನ್ನಡ ಹಾಗೂ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಸಂತಸಕ್ಕೆ ಕಾರಣವಾಗಲಿದೆ.
ಅಂದಹಾಗೆ ರಾಜಮೌಳಿ ಸುದೀಪ್‌ಗೆ ನಿರ್ದೇಶಿಸಿದ್ದ `ಈಗ’ ಸಿನಿಮಾ ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಚಿತ್ರವಾಗಿತ್ತು. ತದನಂತರ ರಾಜಮೌಳಿ ಅವರ ಬಾಹುಬಲಿ ಭಾಗ-1ರಲ್ಲಿ ಶೇಷ ಪಾತ್ರದಲ್ಲಿ ಸುದೀಪ್ ಅಭಿನಯಿಸಿದ್ದರು. ಬಾಹುಬಲಿ 2 ಚಿತ್ರದಲ್ಲಿ ಸುದೀಪ್ ಅಭಿನಯಿಸಿರಲಿಲ್ಲ.