ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿ ರುಕ್ಮಿಣಿ ವಸಂತ್ - ರಿಷಭ್ ಶೆಟ್ಟಿ 
ಸಿನಿಮಾ ಸುದ್ದಿ

ಇತಿಹಾಸ ಬರೆದ ಕಾಂತಾರ ಚಾಪ್ಟರ್ 1; ಇಂಗ್ಲೀಷ್ ಗೂ ಡಬ್ ಆದ ಭಾರತದ ಮೊಟ್ಟ ಮೊದಲ ಚಿತ್ರ!

ಬಿಡುಗಡೆಯಾಗಿ 21ನೇ ದಿನಕ್ಕೆ ಕಾಲಿಟ್ಟಿರುವ ಈ ಸಿನಿಮಾ ಇನ್ನು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಸಾಹಸಕ್ಕೆ ಕೈ ಹಾಕಿದೆ.

ಬೆಂಗಳೂರು: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಚಿತ್ರ ದೇಶಾದ್ಯಂತ ಭರ್ಜರಿ ಪ್ರದರ್ಶನದ ಮೂಲಕ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದ್ದು, ಇದೀಗ ಐತಿಹಾಸಿಕ ದಾಖಲೆಗೆ ಪಾತ್ರವಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಮೂರು ವಾರಗಳ ಹಿಂದೆ ರಿಲೀಸ್ ಆಗಿರುವ 'ಕಾಂತಾರ ಚಾಪ್ಟರ್ 1' ದೇಶ-ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಚಿತ್ರವು ಬಾಕ್ಸಾಫೀಸ್ ನಲ್ಲಿ ಬರೊಬ್ಬರಿ 800 ಕೋಟಿ ಗೂ ಅಧಿಕ ಗಳಿಕೆ ಕಂಡಿದೆ. ಕನ್ನಡದಲ್ಲಿ ಕೆಜಿಎಫ್ 2 ದಾಖಲೆಯನ್ನೂ ಮುರಿದಿದೆ.

ಹೊಂಬಾಳೆ ಮತ್ತೊಂದು ಸಾಹಸ, ಇಂಗ್ಲಿಷ್ ಭಾಷೆಯಲ್ಲಿ 'ಕಾಂತಾರ ಚಾಪ್ಟರ್ 1'

ಇನ್ನು ಸಿನಿಮಾ ಬಿಡುಗಡೆಯಾಗಿ 21ನೇ ದಿನಕ್ಕೆ ಕಾಲಿಟ್ಟಿರುವ ಈ ಸಿನಿಮಾ ಇನ್ನು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಸಾಹಸಕ್ಕೆ ಕೈ ಹಾಕಿದೆ.

ಈಗಾಗಲೇ ಹಲವು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ, ಇದೀಗ ಇಂಗ್ಲೀಷ್ ಭಾಷೆಯಲ್ಲೂ ತೆರೆಕಾಣಲು ಸಿದ್ಧವಾಗಿದೆ. ಇಂಗ್ಲಿಷ್‌ಗೆ ಡಬ್ ಮಾಡಿ ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶೀಘ್ರದಲ್ಲೇ ಕನ್ನಡ ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಲಿದೆ.

ರಿಲೀಸ್ ಯಾವಾಗ?

ಇದೇ ಅಕ್ಟೋಬರ್ 31ಕ್ಕೆ ಕಾಂತಾರ ಚಾಪ್ಟರ್ 1 ಚಿತ್ರದ ಇಂಗ್ಲಿಷ್ ಅವತರಣಿಕೆಯ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಚಿತ್ರತಂಡ ಜಾಗತಿಕ ಮಟ್ಟದಲ್ಲಿ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ. ವರ್ಲ್ಡ್‌ವೈಡ್ ಆಡಿಯನ್ಸ್ ರೀಚ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಏನು ಪ್ಲ್ಯಾನ್ ಮಾಡಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು.

ಕೆಲ ಬದಲಾವಣೆ!

ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವಾಗ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇಂಗ್ಲೀಷ್ ಅವತರಣಿಕೆಯಲ್ಲಿ ಹಾಡುಗಳಿಗೆ ಕತ್ತರಿ ಹಾಕಿ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಪ್ರತ್ಯೇಕ ಸೆನ್ಸಾರ್ ಆದಾಗಲೂ ಕೆಲವು ದೃಶ್ಯಗಳಿಗೆ ಕತ್ತರಿ ಬೀಳುತ್ತೆ. ಹೀಗಾಗಿ ರನ್ ಟೈಮ್ 2.14 ಗಂಟೆ ಇದೆಯೆಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!