ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ದಂಪತಿಯಾಗಿರುವ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಬುಧವಾರ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿ ಮೂಲಕ ಮಗು ಜನಿಸಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ದಂಪತಿಗೆ ಇದೀಗ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.
34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು. ಮಿಸ್ಟರ್ ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಆದರೆ, ದೀರ್ಘಕಾಲದವರೆಗೆ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿತ್ತು.
2025ರ ಮೇನಲ್ಲಿ, ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.
ವರುಣ್ ತೇಜ್ ಮೆರ್ಲಪಕ ಗಾಂಧಿ ನಿರ್ದೇಶನದ ಹಾರರ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಲಾವಣ್ಯ ತ್ರಿಪಾಠಿ ಈ ಶುಕ್ರವಾರ ಬಿಡುಗಡೆಯಾಗಲಿರುವ ಟನಲ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.