2024 ರಲ್ಲಿ ತೆರೆಕಂಡ 'ಬಘೀರಾ' ಚಿತ್ರದ ಯಶಸ್ಸಿನ ನಂತರ, ನಟ ಶ್ರೀಮುರಳಿ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಸದ್ದಿಲ್ಲದೆ ಗಮನ ಹರಿಸುತ್ತಿದ್ದಾರೆ. ಪುನೀತ್ ರುದ್ರನಾಗ್ ನಿರ್ದೇಶನದ ಮಹಾತ್ವಕಾಂಕ್ಷೆಯ ಸಿನಿಮಾಗೆ ಶ್ರೀಮುರುಳಿ ನಾಯಕನಾಗಿದ್ದಾರೆ
'ಬಘೀರಾ' ಮತ್ತು ಇತ್ತೀಚಿನ 'ಎಕ್ಕಾ' ಸೇರಿದಂತೆ ವಿವಿಧ ಚಿತ್ರಗಳಲ್ಲಿ ಪುನೀತ್ ರುದ್ರನಾಗ್ ನಟಿಸಿದ್ದಾರೆ. ಕೆಜಿಎಫ್ 1 ರಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಮುರಳಿಯನ್ನು ಹಲವು ವರ್ಷಗಳಿಂದ ಬಲ್ಲ ಪುನೀತ್ ರುದ್ರನಾಗ್, ಮುರುಳಿಗೆ ಹೊಂದಿಕೆಯಾಗುವ ಕಥೆಯನ್ನು ರಚಿಸಿದ್ದಾರೆ. ಈ ಚಿತ್ರವು 500 ವರ್ಷಗಳ ಹಿಂದೆ ನಡೆದ ಕಥೆಯಾಗಿದೆ, ಇದುವರೆಗೂ ಈ ರೀತಿ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ನಟ ಮತ್ತು ನಿರ್ದೇಶಕ ಇಬ್ಬರೂ ಸದ್ದಿಲ್ಲದೆ ಕಥೆ ಹೆಣೆಯುತ್ತಿದ್ದಾರೆ. ಶ್ರೀಮುರಳಿ ಐತಿಹಾಸಿಕ ಸೆಟ್ಟಿಂಗ್‌ಗೆ ಅನುಗುಣವಾಗಿ ಹೊಸ ಪ್ರಯೋಗ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುರಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಯರಾಮ್ ದೇವಸಮುದ್ರ ಈ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ.
ಸಂಕೇತ್ (ಮೈಸ್) ಚಿತ್ರದ ಛಾಯಾಗ್ರಹಣ ನೋಡಿಕೊಳ್ಳುತ್ತಿದ್ದರೆ, ಅಮರ್ ಕಲಾ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಸಲಾರ್ ಚಿತ್ರದ ದೃಶ್ಯ ಪರಿಣಾಮಗಳನ್ನು ನಿರ್ವಹಿಸಿದ ನಿರ್ಮಲ್ ಕುಮಾರ್ ಕೂಡ ಈ ಪ್ರಾಜೆಕ್ಚ್ ಗೆ ಸಹಕರಿಸಲಿದ್ದಾರೆ. ಸಂಗೀತ ನಿರ್ದೇಶಕ ಮತ್ತು ಪ್ರಮುಖ ಕಲಾವಿದರನ್ನು ನಿರ್ದೇಶಕರು ಇನ್ನೂ ಅಂತಿಮಗೊಳಿಸಿಲ್ಲ.
ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ, ಅದಕ್ಕೂ ಮೊದಲು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗಿದೆ. ಶ್ರೀಮುರಳಿ ಪ್ರಸ್ತುತ ಪರಾಕ್ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ.