ಮಂಗ್ಲಿ 
ಸಿನಿಮಾ ಸುದ್ದಿ

ಹೈದರಾಬಾದ್‌: 10 ಕೋಟಿ ರೂ ವಂಚನೆ ಆರೋಪ; ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲು

ಗಾಯಕಿ ಮಂಗ್ಲಿ, ಅವರ ಸಹೋದರ ಶಿವ ಹಾಗೂ ಇತರರು ಸೇರಿಕೊಂಡು ಹೂಡಿಕೆ ಹೆಸರಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100 ಮಂದಿಯಿಂದ ಭಾರಿ ಹಣವನ್ನು ಸಂಗ್ರಹಿಸಿ, ಬಹಳ ಸಮಯ ಕಳೆದರೂ ಲಾಭವನ್ನೂ ನೀಡಿಲ್ಲ.

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತನ್ನದೇ ಜನಪದ ಮತ್ತು ಸಿನಿಮಾ ಹಾಡುಗಳಿಂದ ಖ್ಯಾತಿಗಳಿಸಿರುವ ಗಾಯಕಿ ಮಂಗ್ಲಿ ವಿರುದ್ಧ ವಂಚನೆ ಮತ್ತು ಸಂತ್ರಸ್ತರ ಪರ ವಕೀಲರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು ಪ್ರಕರಣ ದಾಖಲಾಗಿದೆ.

ವಕೀಲ ಸುಬ್ಬರಾವ್ ಅವರು ನೀಡಿದ ದೂರಿನನ್ವಯ, ಹೈದಾರಾಬಾದ್​ನ ಪಂಜಗುಟ್ಟ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಗಾಯಕಿ ಮಂಗ್ಲಿ, ಶಿವ, ನಿರ್ದೇಶ ವೇಣು ಉಡುಗುಲ ಹಾಗೂ ಇತರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ಗಾಯಕಿ ಮಂಗ್ಲಿ, ಅವರ ಸಹೋದರ ಶಿವ ಹಾಗೂ ಇತರರು ಸೇರಿಕೊಂಡು ಹೂಡಿಕೆ ಹೆಸರಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100 ಮಂದಿಯಿಂದ ಭಾರಿ ಹಣವನ್ನು ಸಂಗ್ರಹಿಸಿ, ಬಹಳ ಸಮಯ ಕಳೆದರೂ ಲಾಭವನ್ನೂ ನೀಡದೇ ಮತ್ತು ಮೂಲ ಹಣವನ್ನು ಹಿಂತಿರುಗಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ವೇಳೆ ನ್ಯಾಯ ಕೋರಿ ಹಣ ಕಳೆದುಕೊಂಡ ಸಂತ್ರಸ್ತರು, ವಕೀಲ ಸುಬ್ಬರಾವ್ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ವಕೀಲರು ಸಂತ್ರಸ್ತರ ಹಣ ಹಿಂದಿರುಗಿಸುವಂತೆ ಪ್ರತಿಭಟಿಸಿದಾಗ ಗಾಯಕಿ ಮಂಗ್ಲಿ, ಅವರ ಸಹೋದರ ಶಿವ ಹಾಗೂ ನಿರ್ದೇಶಕ ವೇಣು ಉಡುಗುಲ ತಮಗೆ ಕರೆ ಮಾಡಿ ತೀವ್ರ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

SCROLL FOR NEXT