ತಮಿಳು ನಟ ಆರ್. ಮಾಧವನ್, ವಿಜಯ್ 
ಸಿನಿಮಾ ಸುದ್ದಿ

ವಿಜಯ್ ರಂತೆ ಮತ್ತೊಬ್ಬ ತಮಿಳು ನಟ ಆರ್. ಮಾಧವನ್ ರಾಜಕೀಯಕ್ಕೆ ಎಂಟ್ರಿ ಆಗ್ತಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ....

'ಬಿಹೈಂಡ್‌ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನಟ ಆರ್. ಮಾಧವನ್ ಅವರ ಮುಂದಿನ ತಮಿಳು ಸಿನಿಮಾ 'GDN'ಬಿಡುಗಡೆಗೆ ಸಜ್ಜಾಗಿದೆ. ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಆರ್. ಮಾಧವನ್ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೃಷ್ಣಕುಮಾರ್ ರಾಮ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ, ಮಾಧವನ್ ಅವರು ಖ್ಯಾತ ಎಂಜಿನಿಯರ್ ಜಿ.ಡಿ. ನಾಯ್ಡು ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

'ಬಿಹೈಂಡ್‌ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಟನಿಂದ ರಾಜಕಾರಣಿಯಾಗಿ ಬದಲಾದ ದಳಪತಿ ವಿಜಯ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ಗಾರೆ.

ರಾಜ್ಯದ ಪ್ರಸ್ತುತ ರಾಜಕೀಯ ವಾತಾವರಣದ ಬಗ್ಗೆ ಕೇಳಿದಾಗ, "ಅನೇಕ ಒಳ್ಳೆಯ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದ ಆರ್. ಮಾಧವನ್, ವಿಜಯ್ ಅವರ ರಾಜಕೀಯ ಏಳಿಗೆಯನ್ನು ಉಲ್ಲೇಖಿಸುತ್ತಾ, ದಿಢೀರ್ ಬದಲಾವಣೆ ನಮ್ಮಲ್ಲಿಯೂ ಆತ್ಮವಿಶ್ವಾಸವನ್ನು ಮೂಡಿಸಿದೆ. ವಿಜಯ್ ನನಗೆ ಚೆನ್ನಾಗಿ ಗೊತ್ತು. ವಾಸ್ತವವಾಗಿ, ಈಗ ಅವರನ್ನು 'ಸಿಎಂ ವಿಜಯ್' (ಮುಖ್ಯಮಂತ್ರಿ ವಿಜಯ್) ಎಂದೇ ಕರೆಯಬೇಕು ಎಂದು ಅವರು ನುಡಿದರು.

ತಮಿಳುನಾಡಿನಲ್ಲಿ ವಿಜಯ್ ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸುತ್ತಿರುವ ಈ ಸಂದರ್ಭದಲ್ಲಿ ಮಾಧವನ್ ಅವರ ಈ ಹೇಳಿಕೆಗಳು ಗಮನ ಸೆಳೆದಿವೆ. ವಿಜಯ್ ಅವರ ರಾಜಕೀಯ ಪಯಣವನ್ನು ಶ್ಲಾಘಿಸಿದರೂ, ತಾನು ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ ಎಂದು ಮಾಧವನ್ ಸ್ಪಷ್ಟಪಡಿಸಿದರು.

ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟ, "ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ. ರಾಜಕೀಯಕ್ಕೆ ಪ್ರವೇಶಿಸಲು ಜನರಿಗೆ ಸೇವೆ ಸಲ್ಲಿಸುವ ನಿಜವಾದ ಉತ್ಸಾಹವಿರಬೇಕು, ಮತ್ತು ಆ ಭಾವನೆ ನನ್ನಲ್ಲಿದೆ ಎಂದು ನನಗೆ ಅನ್ನಿಸುವುದಿಲ್ಲ. ಸಮಾಜಕ್ಕೆ ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ನಾನು ಬಯಸುತ್ತೇನೆ. ರಾಜಕೀಯ ಎರಡು ಹಲಗೆಯ ಕತ್ತಿ ಇದ್ದಂತೆ. ಅದರ ಬಗ್ಗೆ ನನಗೆ ಸಾಕಷ್ಟು ತಿಳುವಳಿಕೆಯಿಲ್ಲ ಎಂದು ಹೇಳಿದರು.

ವೃತ್ತಿಜೀವನದ ವಿಷಯಕ್ಕೆ ಬಂದರೆ, ಮಾಧವನ್ ಕೊನೆಯದಾಗಿ ರಣವೀರ್ ಸಿಂಗ್ ಅವರ 'ಧುರಂಧರ್: ದಿ ರಿವೆಂಜ್' (Dhurandhar: The Revenge) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಯೋಗಿ ಬಾಬು, ಸತ್ಯರಾಜ್ ಮತ್ತು ಪ್ರಿಯಾಮಣಿ ಅವರೊಂದಿಗೆ 'GDN' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವು ಆಗಸ್ಟ್ 7 ರಂದು ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 'GDN' ಹೊರತಾಗಿ, ಮಾಧವನ್ ಅವರ ಕೈಯಲ್ಲಿ 'ಅಧಿರಾಷ್ಟ್ರಶಾಲಿ' (Adhirashtasali) ಮತ್ತು 'ಸರ್ಕಲ್' (Circle) ಚಿತ್ರಗಳೂ ಇವೆ; ಇವೆರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೊಂದು ಶಾಕ್; ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ವಿನಯ್, ರವಿಶಂಕರ್!

ಪೆಟ್ರೋಲ್ ಬಳಿಕ ಡೀಸೆಲ್‌ನಲ್ಲೂ ಎಥೆನಾಲ್ ಮಿಶ್ರಣ?; ಸದ್ಯಕ್ಕೆ ಹೊಸ ವಾಹನ ಖರೀದಿಸದಂತೆ ಜನರಿಗೆ ಕೇಜ್ರಿವಾಲ್ ಮನವಿ!

FCRA: 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ, ಸಾಮಾನ್ಯ ಭಾರತೀಯರೇ ದೊಡ್ಡ ಬೆಲೆ ತೆರಬೇಕಾಗುತ್ತದೆ': Shashi Tharoor

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ 'ಗಂಗಾ ಸಾಮ್ರಾಜ್ಯದ ಅನಾವರಣ': ಸಿಎಂ ಡಿಕೆ ಶಿವಕುಮಾರ್ ಚಾಲನೆ!