ಗಾಯಕ ರಘು ದೀಕ್ಷಿತ್ 
ಸಿನಿಮಾ ಸುದ್ದಿ

"ನನ್ನ ನಿಜವಾದ ಪಯಣ ಈಗ ಶುರು'; ವೃತ್ತಿ ಜೀವನದಲ್ಲಿ 25 ವರ್ಷ ಪೂರ್ಣಗೊಳಿಸಿದ ಗಾಯಕ ರಘು ದೀಕ್ಷಿತ್!

ನಾನು ನನ್ನನ್ನು 'ವಿಧಿಯ ಮಗು' (destiny’s child) ಎಂದು ಭಾವಿಸುತ್ತೇನೆ. ಆದರೆ ಈಗ, ನನ್ನ ದಿಕ್ಕು ಯಾವುದೆಂದು ನನಗೆ ತಿಳಿದಿದೆ ಎಂದು ಅವರು ಹೇಳುತ್ತಾರೆ.

ಸಂತ-ಕವಿ ಶಿಶುನಾಳ ಶರೀಫರ ತತ್ವಪದಕ್ಕೆ ಹೊಸ ಧ್ವನಿ ನೀಡಿದ 'ಗುಡುಗುಡಿಯ ಸೇದಿ ನೋಡು' ಹಾಡಿನ ಲಯಬದ್ಧ ತಾಳಗಳಿಂದ ಹಿಡಿದು, 2010ರ ದಶಕದಲ್ಲಿ ಪ್ರೇಮದಲ್ಲಿ ಬಿದ್ದ ಯುವಜನರ ಜೀವನದ ಹಿನ್ನೆಲೆಯ ಸಂಗೀತವಾದ 'ಮುಂಜಾನೆ ಮಂಜಲ್ಲಿ'ಯವರೆಗೆ, ರಘು ದೀಕ್ಷಿತ್ ಅನೇಕ ಸ್ಮರಣೀಯ ಹಾಗೂ ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. ಅವರು ಇಂದು ನಡೆಯಲಿರುವ ಸಂಗೀತ ಕಾರ್ಯಕ್ರಮದ ಮೂಲಕ ತಮ್ಮ ವೃತ್ತಿಜೀವನದ 25 ವರ್ಷಗಳನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನನ್ನ ಪಯಣ ನಿಜವಾಗಿ ಈಗ ಆರಂಭವಾಗುತ್ತಿದೆ ಅಂದುಕೊಂಡಿದ್ದೇನೆ. ಇದು ಏಳು-ಬೀಳುಗಳಿಂದ ಕೂಡಿದ ಪಯಣವಾಗಿತ್ತು. ನನ್ನ ಜೀವನದಲ್ಲಿ ಅಸಂಖ್ಯಾತ ಅಪರಿಚಿತರು ಬಂದು, ನಾನು ಸಾಗಬೇಕಾದ ದಿಕ್ಕಿನತ್ತ ನನ್ನನ್ನು ಮುನ್ನಡೆಸಿದ್ದರಿಂದ, ನಾನು ನನ್ನನ್ನು 'ವಿಧಿಯ ಮಗು' (destiny’s child) ಎಂದು ಭಾವಿಸುತ್ತೇನೆ. ಆದರೆ ಈಗ, ನನ್ನ ದಿಕ್ಕು ಯಾವುದೆಂದು ನನಗೆ ತಿಳಿದಿದೆ ಎಂದು ಅವರು ಹೇಳುತ್ತಾರೆ. ಅವರು ಹೀಗೆ ಹೇಳಲು ಕಾರಣವೇನೆಂದರೆ, ದೀಕ್ಷಿತ್ ಅವರ ಸಂಗೀತ ಪಯಣವನ್ನು ವ್ಯಾಖ್ಯಾನಿಸುವ ಪದಗಳೆಂದರೆ 'ಸಹಯೋಗಿಗಳು (collaboration) ಮತ್ತು ತತ್ವಪದಗಳು.

ಮೊದಲನೆಯದಾಗಿ, ಅವರು ಸ್ಥಾಪಿಸಿದ 'ದಿ ರಘು ದೀಕ್ಷಿತ್ ಪ್ರಾಜೆಕ್ಟ್' ಎಂಬ ಫೋಕ್-ರಾಕ್ (ಜಾನಪದ-ರಾಕ್) ಬ್ಯಾಂಡ್, ಬದಲಾಗುವ ಕಲಾವಿದರ ತಂಡವನ್ನು ಒಳಗೊಂಡಿರುವ ಉದ್ದೇಶದಿಂದ ರೂಪುಗೊಂಡಿತ್ತು. "ಇತರ ಯಾವುದೇ ಕಲಾ ಪ್ರಕಾರದವರು ಬಂದು ನನ್ನೊಂದಿಗೆ ಸಹಕರಿಸಲು ಮುಕ್ತ ವೇದಿಕೆಯಾಗಬೇಕೆಂಬ ಕಲ್ಪನೆಯೊಂದಿಗೆ ಇದು ಪ್ರಾರಂಭವಾಯಿತು. ಆದರೆ ಕಾಲಕ್ರಮೇಣ, ಇದು ಇತರ ಬ್ಯಾಂಡ್‌ಗಳಂತೆಯೇ ಆಯಿತು. ತಂಡದಲ್ಲಿ ಜನರನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು ಮತ್ತು ತಂಡದ ಸದಸ್ಯರೊಬ್ಬರು ಹೊರಹೋದಾಗ ಭಾವನಾತ್ಮಕವಾಗಿ ತುಂಬಾ ನೋವಾಗುತ್ತಿತ್ತು ಎಂದು ದೀಕ್ಷಿತ್ ಹಂಚಿಕೊಳ್ಳುತ್ತಾರೆ.

ಸಹಯೋಗಿಗಳಷ್ಟೇ ತತ್ವಪದ ಪ್ರಮುಖ ಪಾತ್ರ ವಹಿಸಿದೆ. ಸ್ನೇಹಿತರೊಬ್ಬರ ಮನೆಯಲ್ಲಿ 19ನೇ ಶತಮಾನದ ಕವಿ ಶಿಶುನಾಳ ಶರೀಫರ ತತ್ವಪದಗಳನ್ನು ನೋಡಿದ ನಂತರವೇ ದೀಕ್ಷಿತ್ ಕನ್ನಡದಲ್ಲಿ ಹಾಡಲು ಪ್ರಾರಂಭಿಸಿದರು. "ಮನೆಗೆ ಮರಳುವ ದಾರಿಯುದ್ದಕ್ಕೂ ಆ ಸಾಲುಗಳನ್ನು ನನಗೇ ಗುನುಗಿಕೊಳ್ಳುತ್ತಿದ್ದೆ. ನಾನು ಅದರ ಸಂಯೋಜನೆಯನ್ನು ಪೂರ್ಣಗೊಳಿಸಿ 'ವಾಕ್‌ಮ್ಯಾನ್'ನಲ್ಲಿ ಧ್ವನಿಮುದ್ರಿಸಿಕೊಂಡೆ. ನಾನು ಕನ್ನಡದಲ್ಲಿ ಹಾಡಿದ್ದು ಅದೇ ಮೊದಲ ಬಾರಿ. ನನ್ನದೇ ಭಾಷೆಯಲ್ಲಿ ಹಾಡುವಾಗ ನನಗೆ ಅಪಾರವಾದ ಮುಕ್ತತೆಯ ಭಾವನೆ ಉಂಟಾಯಿತು ಎಂದು ಅವರು ಹೇಳುತ್ತಾರೆ.

ಅವರ ಜನಪ್ರಿಯ ಹಾಡುಗಳಾದ 'ಸೊರುತ್ತಿಹುದು ಮನೆಯ ಮಾಳಿಗೆ' ಮತ್ತು 'ಗುಡುಗುಡಿಯ'ದಲ್ಲಿ ಆ ಸಂತನ (ಪುರಂದರದಾಸರ) ಸಾಹಿತ್ಯವನ್ನು ಬಳಸಲಾಗಿದ್ದರೂ, 'ತರವಲ್ಲ ತಗಿ ನಿನ್ನ' ಎಂಬ ಹಾಡು ಇನ್ನೂ ಒಂದು ಸವಾಲಾಗಿ ಉಳಿದಿದೆ. "ಡಾ. ಸಿ. ಅಶ್ವಥ್ ಅವರ ಆವೃತ್ತಿಯು ನನ್ನ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಅದನ್ನು ಹಾಡುವ ಧೈರ್ಯವನ್ನು ನಾನು ಇನ್ನೂ ಮಾಡಲಾಗಿಲ್ಲ ಎಂದು ಅವರು ಹೇಳುತ್ತಾರೆ. ಅಂದಿನಿಂದ, ಅವರು ಡಿ.ಆರ್. ಬೇಂದ್ರೆ ಅವರ ಸಾಹಿತ್ಯದತ್ತ ಆಕರ್ಷಿತರಾಗಿದ್ದು, ಆ ಕವಿಯ ಕೃತಿಗಳನ್ನು ಆಧರಿಸಿದ ಒಂದು ಸಂಕಲನ ಆಲ್ಬಂ ಅನ್ನು ರೂಪಿಸುವ ಆಶಯವನ್ನು ಹೊಂದಿದ್ದಾರೆ.

ಗ್ರಾಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗಿನ ವಿವಾಹವಾಗಿ ಸುಮಾರು ಒಂದು ವರ್ಷ ಕಳೆದಿದೆ. ಹೀಗಿರುವಾಗ, ಇವರಿಬ್ಬರ ನಡುವೆ ಯಾವುದಾದರೂ ಸಂಗೀತ ಸಹಯೋಗದ ಯೋಜನೆ ಇದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಘು ದೀಕ್ಷಿತ್, ಅಂತಹ ಯಾವುದೇ ಉದ್ದೇಶ ನಮಗಿಲ್ಲ. ತಮ್ಮ ಕ್ಷೇತ್ರದಲ್ಲಿ ಅವರು ಅತ್ಯಂತ ಪ್ರತಿಭಾವಂತರು; ಸಂಗೀತದ ಕುರಿತಾದ ಅವರ ವಿಧಾನವನ್ನು ಗಮನಿಸಿಯೇ ನಾನು ಬಹಳಷ್ಟನ್ನು ಕಲಿತಿದ್ದೇನೆ. ಅಲ್ಲದೆ, ನನ್ನ ಹಾಡುಗಳನ್ನು ಆಲಿಸಲು ಮತ್ತು ನನಗೆ ಹೊಸ ದಾರಿಗಳನ್ನು ತೋರಿಸಲು ಅವರು ಯಾವಾಗಲೂ ಸಿದ್ಧರಿರುತ್ತಾರೆ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ತೈಲ ಖರೀದಿಗೆ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು: ಭಾರತ ಸೇರಿ 5 ದೇಶಗಳ ಮೇಲೆ ಶೇ.100ರಷ್ಟು ಸುಂಕ ಹೇರಿಕೆ ಶಾಕ್

ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾ ದಾಳಿ: ಮಗು ಸೇರಿದಂತೆ ಮೂವರು ಸಾವು!

ಸಿದ್ದರಾಮಯ್ಯ ಜತೆ ಮುನಿಸಿಲ್ಲ: ನನಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್‌ಗೆ ಅವರು ಹೇಳಿಲ್ಲ; ಜಮೀರ್ ಸ್ಪಷ್ಟನೆ

ಸಚಿವನಾಗಿದ್ದೇನೆ, ಈಗೇನು ಮಾಡುತ್ತೀಯಪ್ಪಾ ಜಗದ್ಗುರು?

ಮುಂಬೈ: ಸಲ್ಮಾನ್ ಖಾನ್ ಬಾಂದ್ರಾ ನಿವಾಸದ ಹೊರಗೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹಠಾತ್ ಸಾವು!