ಮುಂಬೈ: 17ನೇ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) 2026ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಕನ್ನಡದ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಮಲಯಾಳಂ ನಟ ದುಲ್ಕರ್ ಸಲ್ಮಾನ್ ಸೇರಿದಂತೆ ಹಲವು ನಟ-ನಟಿಯರು ಪ್ರತಿಷ್ಟಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಭಾರತೀಯ ಚಿತ್ರರಂಗದ ಜಾಗತಿಕ ಪ್ರಭಾವ ಮತ್ತು ವೈವಿಧ್ಯತೆಯನ್ನು IFFM 2026 ಸಂಭ್ರಮಿಸಿದೆ. ಮುಖ್ಯವಾಹಿನಿ ಸಿನಿಮಾಗಳಿಂದ ಹಿಡಿದು ಸ್ಟ್ರೀಮಿಂಗ್, ಸ್ವತಂತ್ರ ಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ಈ ಬಾರಿ ಗೌರವಿಸಲಾಗಿದೆ.
ಕಾಂತಾರಾ ಖ್ಯಾತಿಯ ನಟ ರಿಷಬ್ ಶೆಟ್ಟಿ, ಕೀರ್ತಿ ಕುಲ್ಹರಿ, ವಿಜಯ್ ವರ್ಮಾ ಹಾಗೂ ರಸಿಕಾ ದುಗ್ಗಲ್ ಸೇರಿದಂತೆ ಹಲವು ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
‘Lokah Chapter 1: Chandra’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದ್ದು, ‘Kaantha’ ಚಿತ್ರದ ಅಭಿನಯಕ್ಕಾಗಿ ದುಲ್ಕರ್ ಸಲ್ಮಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘Full Plate’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಕೀರ್ತಿ ಕುಲ್ಹರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ Excellence in Cinema ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಟ ಪಂಕಜ್ ತ್ರಿಪಾಠಿ ಅವರಿಗೆ Artist of Distinction ಗೌರವ ಲಭಿಸಿದೆ. ಇನ್ನು ನಟಿ ರಾಣಿ ಮುಖರ್ಜಿ ಅವರ ಚಿತ್ರರಂಗದ 30 ವರ್ಷಗಳ ವೃತ್ತಿಜೀವನವನ್ನು ಗುರುತಿಸಿ ವಿಶೇಷ ಗೌರವ ನೀಡಲಾಗಿದೆ.
ಕನ್ನಡಕ್ಕೆ ಡಬಲ್ ಖುಷಿ
ಇನ್ನು ಕನ್ನಡದ ‘Kantara: A Legend - Chapter 1’ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರ ಜೊತೆಗೆ ಅವರಿಗೆ Leadership in Cinema ಗೌರವವೂ ದೊರೆತಿದೆ.
ವೆಬ್ ಸೀರಿಸ್ ವಿಭಾಗದಲ್ಲೂ ಭಾರತೀಯರ ಪಾರುಪತ್ಯ
ಸ್ಟ್ರೀಮಿಂಗ್ ವಿಭಾಗದಲ್ಲಿ ‘Matka King’ ಸರಣಿಗಾಗಿ ವಿಜಯ್ ವರ್ಮಾ ಅತ್ಯುತ್ತಮ ನಟ (Series) ಪ್ರಶಸ್ತಿ ಪಡೆದಿದ್ದಾರೆ. ‘Delhi Crime 3’ಗಾಗಿ ರಸಿಕಾ ದುಗ್ಗಲ್ ಅತ್ಯುತ್ತಮ ನಟಿ (Series) ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘Freedom At Midnight Season 2’ ಅತ್ಯುತ್ತಮ ಸರಣಿ ಪ್ರಶಸ್ತಿ ಗೆದ್ದಿದೆ.
IFFM 2026 ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಅತ್ಯುತ್ತಮ ಚಿತ್ರ: Lokah Chapter 1: Chandra
ಅತ್ಯುತ್ತಮ ಚಿತ್ರ – ವಿಶೇಷ ಉಲ್ಲೇಖ: The Great Shamshuddin Family
ಅತ್ಯುತ್ತಮ ಇಂಡಿ ಚಿತ್ರ: Not a Hero – ರಿಮಾ ದಾಸ್
ಇಂಡಿ ಚಿತ್ರ – ವಿಶೇಷ ಉಲ್ಲೇಖ: Kikkran De Phull (Flowers of Acacia)
ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ – Kantara: A Legend - Chapter 1
ಅತ್ಯುತ್ತಮ ನಟ: ದುಲ್ಕರ್ ಸಲ್ಮಾನ್ – Kaantha
ಅತ್ಯುತ್ತಮ ನಟಿ: ಕೀರ್ತಿ ಕುಲ್ಹರಿ – Full Plate
ಉಪಖಂಡದ ಅತ್ಯುತ್ತಮ ಚಿತ್ರ: No Good Men – ಶಹರ್ಬಾನು ಸಾದತ್
ಅತ್ಯುತ್ತಮ ಸಾಕ್ಷ್ಯಚಿತ್ರ: Flying Tigers – ಮಧುಶ್ರೀ ದತ್ತ
People’s Choice Award: Saiyaara
Equality in Cinema Award: Sitaare Zameen Par
Equality in Cinema – ವಿಶೇಷ ಉಲ್ಲೇಖ: ಸಿಮ್ರನ್ ಮಂಗೇಶ್ಕರ್ – Sitaare Zameen Par
Rainbow Storyteller Award: Lala and Poppy
ಅತ್ಯುತ್ತಮ ಆಸ್ಟ್ರೇಲಿಯನ್ ಕಿರುಚಿತ್ರ: The Weight of Soil
ಅತ್ಯುತ್ತಮ ಭಾರತೀಯ ಕಿರುಚಿತ್ರ: Jo’s Turn
ಅತ್ಯುತ್ತಮ ನಟ (Series): ವಿಜಯ್ ವರ್ಮಾ – Matka King
ಅತ್ಯುತ್ತಮ ನಟಿ (Series): ರಸಿಕಾ ದುಗ್ಗಲ್ – Delhi Crime 3
ಅತ್ಯುತ್ತಮ ಸರಣಿ: Freedom At Midnight Season 2
Artist of Distinction: ಪಂಕಜ್ ತ್ರಿಪಾಠಿ
ವಿಶೇಷ ಗೌರವ: ರಾಣಿ ಮುಖರ್ಜಿ – ಚಿತ್ರರಂಗದಲ್ಲಿ 30 ವರ್ಷ
Leadership in Cinema: ರಿಷಬ್ ಶೆಟ್ಟಿ
Excellence in Cinema: ರೇಖಾ