ಪ್ರದೀಪ್ ರಂಗನಾಥನ್, ಶಿವರಾಜಕುಮಾರ್ 
ಸಿನಿಮಾ ಸುದ್ದಿ

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಸ್ಯಾಂಡಲ್ವುಡ್ ನ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಹೊಗಳಿದರು.

ಸ್ಯಾಂಡಲ್ವುಡ್ ನ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಹೊಗಳಿದರು. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ಹೇಗೆ ಗಮನ ಸೆಳೆದಿದ್ದಾರೆ ಎಂಬುದನ್ನು ಹಂಚಿಕೊಂಡರು. ಶಿವರಾಜಕುಮಾರ್ ಅವರು ನಟ ಪ್ರದೀಪ್ ರಂಗನಾಥನ್ ಅವರ ಚಿತ್ರಗಳಿಗೆ 'ಅಭಿಮಾನಿ' ಎಂದು ಹೇಳಿದರು.

ಆನಂದ ವಿಕಟನ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಭೈರತಿ ರಣಗಲ್ ನಟ, ಅಭಿಷನ್ ಜೀವಿಂತ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ನಿರ್ದೇಶನದ ಟೂರಿಸ್ಟ್ ಫ್ಯಾಮಿಲಿ ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತು. ಕುತೂಹಲಕಾರಿ ವಿಷವೆಂದರೇ ಟೂರಿಸ್ಟ್ ಫ್ಯಾಮಿಲಿ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಗೌತಮ್ ಶಿವರಾಮನ್ ಅವರ ಚೊಚ್ಚನ ನಿರ್ದೇಶನದ ಚಿತ್ರದಲ್ಲಿ ಅಭಿಷನ್ ಜೀವಿಂತ್ ಜೊತೆಗೆ ಶಿವರಾಜಕುಮಾರ್ ಸಹ ನಟಿಸುತ್ತಿದ್ದಾರೆ.

ಅಭಿಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವರಾಜ್‌ಕುಮಾರ್, ಗೌತಮ್ ಅವರ ಸ್ಕ್ರಿಪ್ಟ್ ಅನ್ನು ಅವರು ಹೇಗೆ ಇಷ್ಟಪಟ್ಟಿದ್ದಾರೆ ಮತ್ತು ಅಭಿಷನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುವುದು "ತುಂಬಾ ಮಜಾ" ಬರುತ್ತದೆ ಎಂದು ಹೇಳಿದರು. "ಟೂರಿಸ್ಟ್ ಫ್ಯಾಮಿಲಿ ನೋಡಿದ ನಂತರ ನನಗೆ ತುಂಬಾ ಸಂತೋಷವಾಯಿತು. ಅವರು ನಿರ್ದೇಶನ ಮಾಡಿದ್ದರೂ, ಅವರ ಪಾತ್ರ ಸುಂದರವಾಗಿತ್ತು. ಅದು ನನ್ನ ಹೃದಯವನ್ನು ಮುಟ್ಟಿತು. ಅವರ ನಿರ್ದೇಶನ ಶೈಲಿ ನನಗೆ ತುಂಬಾ ಇಷ್ಟವಾಯಿತು ಎಂದರು.

ಇದೇ ವೇಳೆ, ಶಿವರಾಜ್‌ಕುಮಾರ್ ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್‌ ಬಗ್ಗೆ ಮಾತನಾಡಿದರು. ಈ ವೇಳೆ ಅವರು ಪ್ರದೀಪ್ ರಂಗನಾಥನ್ ಗೆ ಸರ್ ಎಂದು ತಲೆ ಬಾಗಿ ನಮಸ್ಕರಿಸಿ ಮಾತನಾಡಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಮುಜುಗರ ತಂದಿದೆ ಎಂದು ಸ್ವತಃ ಅಭಿಮಾನಿಗಳು ಹಾಗೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನಟ ಧನುಷ್ ತನ್ನ ನೆಚ್ಚಿನ ನಟ, ನಿಮ್ಮನ್ನು ನೋಡಿದಾಗಲೆಲ್ಲ ಅವರನ್ನೇ ನೋಡಿದ ಹಾಗೆ ಎನಿಸುತ್ತದೆ. ನಾನು ನಿಮ್ಮ ಅಭಿಮಾನಿ ಎಂದು ತಲೆ ಬಾಗಿ ನಮಸ್ಕರಿಸಿದರು. ಈ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಲವು ಕನ್ನಡಿಗರು ನೀವು ಇಪ್ಪತ್ತು ಹಿಟ್ ಸಿನಿಮಾಗಳನ್ನು ಕೊಟ್ಟಾಗ ಹುಟ್ಟೇ ಇರದಿದ್ದ ಹೀರೊಗಳಿಗೆ ಏಕೆ ಸರ್ ಎನ್ನುತ್ತೀರ ಎಂದು ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!