ರಜನಿಕಾಂತ್,ಶಮ್ಲಾ ಕಾಸಿಮ್ 
ಸಿನಿಮಾ ಸುದ್ದಿ

ರಜನಿಕಾಂತ್ ರ 'ಜೈಲರ್ 2' ಹಾಡು ವೈರಲ್; ಶಮ್ನಾ ಕಾಸಿಮ್ ಮಸ್ತ್ ಸ್ಟೆಪ್! ಅಭಿಮಾನಿಗಳು ಏನಂತಿದ್ದಾರೆ ಗೊತ್ತಾ? Video

ನಿನ್ನೆ ಮೊದಲಿಗೆ ಬಿಡುಗಡೆಯಾದ 'ಅಲಾ ಬೊಲೆಲೋ' (Ala Bolelo) ಹಾಡಿನ 32 ಸೆಕೆಂಡುಗಳ ಪ್ರೊಮೋದಲ್ಲಿ ಮಲಯಾಳಂ ಉಚ್ಚಾರಣೆಯು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಇದೀಗ ಬಿಡುಗಡೆಯಾದ ಪೂರ್ಣ ಹಾಡನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ 'ಜೈಲರ್ 2' ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಗಳು ಹುಟ್ಟಿಕೊಂಡಿವೆ. 2023ರಲ್ಲಿ ಬಿಡುಗಡೆಯಾದ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.

ನಿನ್ನೆ ಮೊದಲಿಗೆ ಬಿಡುಗಡೆಯಾದ 'ಅಲಾ ಬೊಲೆಲೋ' (Ala Bolelo) ಹಾಡಿನ 32 ಸೆಕೆಂಡುಗಳ ಪ್ರೊಮೋದಲ್ಲಿ ಮಲಯಾಳಂ ಉಚ್ಚಾರಣೆಯು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಇದೀಗ ಬಿಡುಗಡೆಯಾದ ಪೂರ್ಣ ಹಾಡನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಶಮ್ನಾ ಕಾಸಿಮ್ ಅವರ ಮಸ್ತ್ ಸ್ಟೆಪ್ ಹಾಗೂ ಅತ್ಯುತ್ತಮ ನೃತ್ಯ ಸಂಯೋಜನೆಯು ನೆಟ್ಟಿಗರ ಗಮನ ಸೆಳೆಯುತ್ತಿದೆ. ಕಾವಾಲಾ' ಮತ್ತು 'ಟೈಗರ್ ಮುತ್ತುವೇಲ್ ಪಾಂಡಿಯನ್ ಇನ್ವೆಸ್ಟಿಗೇಷನ್' ಹಾಡುಗಳಂತೆಯೇ, ಈ ಚಿತ್ರವೂ ಥಿಯೇಟರ್‌ಗಳಲ್ಲಿ ಭರ್ಜರಿ ಸಂಭ್ರಮವನ್ನು ಸೃಷ್ಟಿಸಲಿದೆ" ಎಂದು ನೆಟ್ಟಿಗರೊಬ್ಬರು ಬರೆದುಕೊಡಿದ್ದಾರೆ.

ಎಂತಹ ಉತ್ಸಾಹಭರಿತ ಹಾಡು! ಭವ್ಯವಾದ ನಿರ್ಮಾಣ ಮತ್ತು ಅದ್ಭುತ ದೃಶ್ಯ ವೈಭವ. ಇದು ಖಂಡಿತವಾಗಿಯೂ ಸೂಪರ್ ಹಿಟ್ ಆಗಲಿದೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್ ಮತ್ತು ಶಮ್ನಾ ಕಾಸಿಮ್ ಅಭಿನಯದ 'ಅಲಾ ಬೊಲೆಲೋ' (Ala Bolelo) ಹಾಡಿನ 32 ಸೆಕೆಂಡುಗಳ ಪ್ರೊಮೋ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಪೂರ್ಣ ಹಾಡು ನಿನ್ನೆ ಬಿಡುಗಡೆಯಾಗಿದೆ. 'ಜೈಲರ್ 2' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅರುಣರಾಜ ಕಾಮರಾಜ್, ನಿರಂಜನಾ ರಮಣ್, ಅಪರ್ಣಾ ಹರಿಕಮಾರ್ ಮತ್ತು ದೀಪ್ತಿ ಸುರೇಶ್ ಅವರೊಂದಿಗೆ ಸೇರಿ ಸಾಹಿತ್ಯವನ್ನು ಬರೆದಿದ್ದಾರೆ. ಶಮ್ನಾ ಕಾಸಿಮ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಇದರಲ್ಲಿ ರಜನಿಕಾಂತ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಸನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರವು 2026ರ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್‌ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ, ಪ್ರತೀಕಾರದ ಎಚ್ಚರಿಕೆ ನೀಡಿದ Carney..!

'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ ಅಸ್ತ್ರ; ಇದು ಆರ್ಥಿಕ ಭಯೋತ್ಪಾದನೆ-‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ

Toxic: ಮಗಳು ತೆಗಳಿಕೆ, ಅಪ್ಪ ಹೊಗಳಿಕೆ! ಯಶ್ 'ಕೊಹಿನೂರು ವಜ್ರ' ಎಂದ ಖ್ಯಾತ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು!