ಉರ್ಫಿ ಜಾವೇದ್ 
ಸಿನಿಮಾ ಸುದ್ದಿ

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದ ಉರ್ಫಿ ಜಾವೇದ್ ಇದೀಗ ಭವಿಷ್ಯದಲ್ಲಿ ತಾಯಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ತಮ್ಮ ವಿಚಿತ್ರ ಫ್ಯಾಷನ್ ಸೆನ್ಸ್ ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವ ನಟಿ ಹಾಗೂ ಇನ್ಫ್ಲ್ಯೂಯೆನ್ಸರ್ ಉರ್ಫಿ ಜಾವೇದ್ ಅವರು ಸದ್ಯ ಸಿಂಗಲ್ ಆಗಿದ್ದಾರೆ. ಆದರೆ ಮುಂದೆ ಮದ್ವೆ ಆಗ್ತೀನೋ ಅಥವಾ ಇಲ್ಲವೋ ಅನ್ನೋ ಗ್ಯಾಂಟಿನೂ ಅವರಿಗೆ ಇಲ್ಲ. ಆದರೆ ಭವಿಷ್ಯದಲ್ಲಿ ತಾಯಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.

ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದ ಉರ್ಫಿ ಜಾವೇದ್ ಇದೀಗ ಭವಿಷ್ಯದಲ್ಲಿ ತಾಯಿ ಆಗುವ ಆಸೆ ಹೊಂದಿದ್ದು, ಅದಕ್ಕಾಗಿ ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿಸುವ ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತು ಉರ್ಫಿ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಮಾತನಾಡಿದ್ದಾರೆ. ʻನಾನು ಸದ್ಯ ಮದುವೆಯಾಗುತ್ತಿಲ್ಲ. ಹಾಗಾಗಿ ನನ್ನ ಅಂಡಾಣುಗಳನ್ನು ಫ್ರೀಜ್ ಮಾಡಿಸಲು ನಿರ್ಧರಿಸಿದ್ದೇನೆ. 30 ವರ್ಷ ವಯಸ್ಸಿನ ನಂತರ ಅಂಡಾಣುಗಳ ಗುಣಮಟ್ಟ ವೇಗವಾಗಿ ಕುಸಿಯುತ್ತದೆ ಎಂದು ನಾನು ಓದಿದ್ದೇನೆ. ನಾನು ಇತ್ತೀಚೆಗಷ್ಟೇ 30 ವರ್ಷಕ್ಕೆ ಕಾಲಿಟ್ಟಿದ್ದೇನೆ. ಈಗ ಅಂಡಾಣುಗಳನ್ನ ಫ್ರೀಜ್‌ ಮಾಡದೇ ಇದ್ದರೇ ಮತ್ತೆ ಎಂದಿಗೂ ಸಾಧ್ಯವಾಗದಿರಬಹುದು ಅನ್ನಿಸಿತು ಎಂದು ಹೇಳಿದ್ದಾರೆ.

ʻನನ್ನ ಮದುವೆ ಯಾವಾಗ ಆಗುತ್ತದೆ? ನಾನು ಯಾವಾಗ ಮಕ್ಕಳನ್ನು ಹೊಂದಲು ನಿರ್ಧರಿಸುತ್ತೇನೆ? ಅಂತ ಯೋಚಿಸಿಕೊಂಡೇ ಕೂತಿರೋಕೆ ಆಗಲ್ಲ. ಆ ಸಮಯದಲ್ಲಿ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗಬಹುದು. ಆದ್ದರಿಂದ ಅಂಡಾಣುಗಳನ್ನು ಫ್ರೀಜ್‌ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆಂದು ಉರ್ಫಿ ತಿಳಿಸಿದ್ದಾರೆ.

ನನ್ನ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಇನ್ನೂ ಸಾಕಷ್ಟು ಸಾಧಿಸಬೇಕು. ಸದ್ಯ ನನ್ನ ಸಂಪೂರ್ಣ ಸಮಯ ಮತ್ತು ಶಕ್ತಿ ನನ್ನ ವೃತ್ತಿಜೀವನದ ಮೇಲೆಯೇ ಕೇಂದ್ರೀಕೃತವಾಗಿದೆ. ಆದರೆ ಬಯಾಲಾಜಿಕಲ್ ಕ್ಲಾಕ್ ಯಾವಾಗಲೂ ನನ್ನ ಮನಸ್ಸಿನಲ್ಲಿ ಓಡುತ್ತಿರುತ್ತದೆ. ಅಂಡಾಣುಗಳನ್ನ ಫ್ರೀಜ್ ಮಾಡಿಸಿಕೊಂಡರೆ ನನಗೆ ನೆಮ್ಮದಿ ಸಿಗುತ್ತದೆ. ನನ್ನ ಹೆಗಲ ಮೇಲಿದ್ದ ದೊಡ್ಡ ಭಾರವೊಂದು ಇಳಿದಂತಾಗುತ್ತದೆ ಎಂದು ಉರ್ಫಿ ಹೇಳಿದ್ದಾರೆ.

ಭವಿಷ್ಯದಲ್ಲಿ ತಾಯಿಯಾಗುವ ಆಸೆ ಹೊಂದಿರುವುದಾಗಿ ಸ್ಪಷ್ಟಪಡಿಸಿದ ನಟಿ, ʻಈಗ ನಾನು ಕಾಲದೊಂದಿಗೆ ಓಡುತ್ತಿಲ್ಲ. ಈಗ ನಾನು ನೆಮ್ಮದಿಯಿಂದ ನನ್ನ ವೃತ್ತಿಜೀವನದ ಮೇಲೆ ಗಮನ ಹರಿಸಬಹುದು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಗತ್ಯವೂ ಇಲ್ಲ ಎಂದಿದ್ದಾರೆ ಉರ್ಫಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ