ಸಮಂತಾ ರುತ್ ಪ್ರಭು 
ಸಿನಿಮಾ ಸುದ್ದಿ

ಗರ್ಭಾವಸ್ಥೆಯಲ್ಲೂ ನಟಿ ಸಮಂತಾ ರುತ್ ಪ್ರಭು ಜಿಮ್ ನಲ್ಲಿ ವರ್ಕ್ ಔಟ್! Video ವೈರಲ್, ವೈದ್ಯರು ಏನಂತಾರೆ?

ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ವೈದ್ಯರ ಸಲಹೆ ಮತ್ತು ಸೂಕ್ತ ಮಾರ್ಗದರ್ಶನವಿಲ್ಲದೆ ಗರ್ಭಿಣಿಯರು ಇಂತಹ ಕಠಿಣ ವ್ಯಾಯಾಮ ಮಾಡಬಾರದು ಎಂದು ಬರೆದುಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು, ತಮ್ಮ ಗರ್ಭಾವಸ್ಥೆಯ ಸಮಯದಲ್ಲೂ ಫಿಟ್ ನೆಸ್ ಗೆ ಆದ್ಯತೆ ನೀಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ವೈದ್ಯರ ಸಲಹೆ ಮತ್ತು ಸೂಕ್ತ ಮಾರ್ಗದರ್ಶನವಿಲ್ಲದೆ ಗರ್ಭಿಣಿಯರು ಇಂತಹ ಕಠಿಣ ವ್ಯಾಯಾಮ ಮಾಡಬಾರದು ಎಂದು ಬರೆದುಕೊಂಡಿದ್ದಾರೆ.

ನಾನು ಹಲವು ವರ್ಷಗಳಿಂದ ವೇಟ್ ಲಿಫ್ಟಿಂಗ್ ಸೇರಿದಂತೆ ಹಲವು ಕಠಿಣ ವ್ಯಾಯಾಮ ಮಾಡುವ ಮೂಲಕ ದೇಹವನ್ನು ಗಟ್ಟಿಗೊಳಿಸುತ್ತಿದೆ. ಈಗ ವೈದ್ಯರ ಸಲಹೆ ಮೇರೆಗೆ ನನ್ನ ಗರ್ಭಾವಸ್ಥೆಯ ಸಮಯದಲ್ಲೂ ಇದನ್ನು ಮುಂದುವರೆಸುತ್ತಿದ್ದೇನೆ. ಗರ್ಭಿಣಿಯರು ನನ್ನ ವರ್ಕೌಟ್ ನ್ನು ನಕಲು ಮಾಡಬೇಡಿ, ಗರ್ಭಾವಸ್ತೆಯಲ್ಲಿ ವ್ಯಾಯಾಮ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ ಎಂದಿದ್ದಾರೆ.

ಗರ್ಭಧಾರಣೆ ಹೊಂದಿರುವ ಮಹಿಳೆಯರು ವ್ಯಾಯಾಮ ಮಾಡುವುದರಿಂದ ಹಲವು ಪ್ರಯೋಜನ ಆಗುತ್ತದೆ ಎನ್ನಲಾಗಿದ್ದು, ಗರ್ಭಾವಸ್ಥೆಯಲ್ಲೂ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ಸಮಂತಾ ಬಗ್ಗೆ ಹಲವು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿಯರು ವರ್ಕ್ ಔಟ್ ಮಾಡಬಹುದೇ? ವೈದ್ಯರ ಸಲಹೆ ಇಂತಿದೆ: ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ನಿರ್ದೇಶಕಿ ಡಾ. ಅಂಜನಾ ಸಿಂಗ್ ಅವರ ಪ್ರಕಾರ, ಸರಳ ಗರ್ಭಧಾರಣೆಯ ಸಮಯದಲ್ಲಿ ತರಬೇತಿಯನ್ನು ಸೂಕ್ತವಾಗಿ ಮಾರ್ಪಡಿಸಿದಾಗ ಸಾಮಾನ್ಯವಾಗಿ ಸುರಕ್ಷಿತ ಮತ್ತು ಪ್ರಯೋಜನಕಾರಿಯಾಗಬಹುದು.

ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯ ವ್ಯಾಯಾಮಗಳೂ ಸೂಕ್ತವಲ್ಲ. ಬೀಳುವ ಅಥವಾ ಹೊಟ್ಟೆಯ ಭಾಗಕ್ಕೆ ಪೆಟ್ಟು ಬೀಳುವ ಹೆಚ್ಚಿನ ಅಪಾಯವಿರುವ ಚಟುವಟಿಕೆಗಳನ್ನು ತಪ್ಪಿಸುವಂತೆ ಡಾ. ಸಿಂಗ್ ಅವರು ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ. ಹೊಟ್ಟೆಯ ಭಾಗಕ್ಕೆ ನೇರವಾದ ಪೆಟ್ಟು ಬೀಳುವ ಸಾಧ್ಯತೆಯಿರುವ ವ್ಯಾಯಾಮಗಳು ಅನಗತ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

ಮಳೆ ಕೊರತೆ ನೀಗಿಸಲು ಕರ್ನಾಟಕ ಸರ್ಕಾರದ ಮಾಸ್ಟರ್ ಪ್ಲ್ಯಾನ್; cloud seeding ಗೆ 2 ಸಮಿತಿಗಳ ರಚನೆ

ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!

ಬಿಎಸ್ ಯಡಿಯೂರಪ್ಪಗೆ ಬಿಗ್ ಶಾಕ್: BJP ಸಂಸದೀಯ ಮಂಡಳಿಯಿಂದ ಕೊಕ್ ಸಾಧ್ಯತೆ

RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಸಚಿವ ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್!