ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

Toxic Box Office Collection: ಕುಸಿತದ ನಡುವೆ 5ನೇ ದಿನ 200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’

ಟಾಕ್ಸಿಕ್ ಸಿನಿಮಾ ಐದನೇ ದಿನ ಭಾರತದಾದ್ಯಂತ 23 ಕೋಟಿ ರೂ. ಕಲೆಕ್ಷನ್ ದಾಖಲಿಸಿದೆ. ಭಾನುವಾರ ಒಟ್ಟು 16,241 ಪ್ರದರ್ಶನಗಳಿಂದ 23.00 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಐದನೇ ದಿನವಾದ ಭಾನುವಾರವೂ ಥಿಯೇಟ್ರಿಕಲ್ ಪ್ರದರ್ಶನ ಮುಂದುವರೆಸಿದೆ. ಆದರೆ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಸಿನಿಮಾ ಭರ್ಜರಿ ಓಪನಿಂಗ್ ಪಡೆದರೂ, ಬಳಿಕ ಮಿಶ್ರ ಪ್ರತಿಕ್ರಿಯೆಯಿಂದ ಕಲೆಕ್ಷನಲ್ಲಿ ಕುಸಿತವಾಗಿದೆ.

ಟಾಕ್ಸಿಕ್ ಸಿನಿಮಾ ಐದನೇ ದಿನ ಭಾರತದಾದ್ಯಂತ 23 ಕೋಟಿ ರೂ. ಕಲೆಕ್ಷನ್ ದಾಖಲಿಸಿದೆ. ಭಾನುವಾರ ಒಟ್ಟು 16,241 ಪ್ರದರ್ಶನಗಳಿಂದ 23.00 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದರೊಂದಿಗೆ ಕಲೆಕ್ಷನ್ ಕುಸಿತದ ನಡುವೆಯೂ ಭಾರತದಲ್ಲಿ ಐದೇ ದಿನಕ್ಕೆ ಒಟ್ಟು 200 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಮೂಲಕ ಯಶ್ ಸಿನಿಮಾ 200 ಕೋಟಿ ಕ್ಲಬ್ ಸೇರಿದೆ.

ಟಾಕ್ಸಿಕ್ ಒಟ್ಟು 255.95 ಕೋಟಿ ರೂ. ಗಳಿಸಿದ್ದರೆ, ದೇಶೀಯವಾಗಿ 214.10 ಕೋಟಿ ರೂ. ಕಲೆಕ್ಷನ್ ದಾಖಲಿಸಿದೆ. ಬಿಡುಗಡೆಯಾದ ಎರಡನೇ ದಿನದಿಂದಲೇ ಗಳಿಕೆಯಲ್ಲಿ ಕುಸಿತ ಕಂಡಿದ್ದ ಸಿನಿಮಾವು ರವಿವಾರದಂದು 23 ಕೋಟಿ ರೂ.ಗಳನ್ನು ಗಳಿಸಿದೆ. ಭಾರತದಲ್ಲಿ ನಿವ್ವಳ 214 ಕೋಟಿ ರೂ. ಗಳಿಸಿದೆ.

ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ ಸಿನಿಮಾ ಒಟ್ಟು 255.95 ಕೋಟಿ ರೂ. ಮತ್ತು ನಿವ್ವಳ 214.10 ಕೋಟಿ ರೂ. ಗಳಿಕೆ ದಾಖಲಿಸಿದೆ. ವಿದೇಶಗಳಲ್ಲಿ ಈ ಚಿತ್ರವು ರವಿವಾರದಂದು 5 ಕೋಟಿ ರೂ. ಗಳಿಸಿದೆ. ಹೀಗಾಗಿ ವಿಶ್ವಾದ್ಯಂತ ಒಟ್ಟು ಗಳಿಕೆ 293.20 ಕೋಟಿ ರೂ.ಗೆ ತಲುಪಿದೆ.

‘ಟಾಕ್ಸಿಕ್’ ತನ್ನ ಮೊದಲ ದಿನದಂದು 101.10 ಕೋಟಿ ರೂ. ಗಳಿಸಿತ್ತು. ಬಿಡುಗಡೆಯಾದ 2ನೇ, 3ನೇ ಮತ್ತು 4ನೇ ದಿನದಂದು ಕ್ರಮವಾಗಿ 37.65 ಕೋಟಿ ರೂ., 27.20 ಕೋಟಿ ರೂ. ಮತ್ತು 25.15 ಕೋಟಿ ರೂ. ಗಳಿಕೆ ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ!

ತಾಯಿ ಸ್ಮರಣಾರ್ಥ ಸುದೀಪ್ ಮಹತ್ವದ ಕಾರ್ಯ: ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಆಟೋ ನೀಡಿದ ಕಿಚ್ಚ!

ಕೆಆರ್‌ಐಡಿಎಲ್‌ ಗುತ್ತಿಗೆದಾರರಿಂದ 7% ಕಮಿಷನ್ ಕಲೆಕ್ಷನ್: ಪುತ್ತೂರು ಕಾಂಗ್ರೆಸ್‌ ಶಾಸಕನಿಂದ ಗಂಭೀರ ಆರೋಪ; ಸಿಎಂ ಗೆ ಪತ್ರ!

Duleep Trophy: 57 ವರ್ಷಗಳ ದಾಖಲೆ ಮುರಿದು, ಕೇವಲ 8 ರನ್ ಅಂತರದಲ್ಲಿ ಎಡವಿದ Vaibhav Sooryavanshi!