ಪ್ರಿಯಾಂಕಾ ಚೋಪ್ರಾ, ರಾಜಮೌಳಿ  
ಸಿನಿಮಾ ಸುದ್ದಿ

'ವಾರಣಾಸಿ' ಒಪ್ಪಿಕೊಳ್ಳುವ ಮುನ್ನ ರಾಜಮೌಳಿಗೆ ಪ್ರಿಯಾಂಕಾ ಚೋಪ್ರಾ ಒಂದು ರಿಕ್ವೆಸ್ಟ್ ಮಾಡಿದ್ರಂತೆ! ಏನದು?

ಈ ಚಿತ್ರ ಒಪ್ಪಿಕೊಳ್ಳುವ ಮುನ್ನಾ ಪ್ರಿಯಾಂಕಾ ಚೋಪ್ರಾ, ರಾಜಮೌಳಿಗೆ ಒಂದು ಪ್ರಮುಖವಾದ ರಿಕ್ವೆಸ್ಟ್ ಮಾಡಿದ್ರಂತೆ. ಅದು ನಟ ಮಹೇಶ್ ಬಾಬು ಮೇಲೂ ಅನಿರೀಕ್ಷಿತ ಪರಿಣಾಮ ಬೀರಿದ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

SS ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಏಳು ವರ್ಷಗಳ ನಂತರ ಭಾರತೀಯ ಸಿನಿಮಾಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಚಿತ್ರ ಒಪ್ಪಿಕೊಳ್ಳುವ ಮುನ್ನಾ ಅವರು ರಾಜಮೌಳಿಗೆ ಒಂದು ಪ್ರಮುಖವಾದ ರಿಕ್ವೆಸ್ಟ್ ಮಾಡಿದ್ರಂತೆ. ಅದು ನಟ ಮಹೇಶ್ ಬಾಬು ಮೇಲೂ ಅನಿರೀಕ್ಷಿತ ಪರಿಣಾಮ ಬೀರಿದ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಹೌದು. ಡ್ಯಾನ್ಸ್ ಮೂಲಕ ಭಾರತೀಯ ಪ್ರೇಕ್ಷಕರೊಂದಿಗೆ ಮತ್ತೆ ಕನೆಕ್ಟ್ ಆಗಲು ಉತ್ಸುಕರಾಗಿದ್ದ ಪ್ರಿಯಾಂಕಾ ಚೋಪ್ರಾ, ವಾರಣಾಸಿ ಆಫರ್ ಬಂದ ಕೂಡಲೇ ರಾಜಮೌಳಿಯೊಂದಿಗೆ ಮಾತನಾಡುವಾಗ, ಆರು ವರ್ಷಗಳಿಂದ ಸಿನಿಮಾ ಮಾಡಿಲ್ಲ. ಹೀಗಾಗಿ ನನಗೆ ಒಂದು ಡ್ಯಾನ್ಸ್ ಮಾಡಿಸಿ ಅಂತಾ ಮನವಿ ಮಾಡಿದ್ರಂತೆ. ತದನಂತರ ನಾನು ಹಾಗೆ ಕೇಳಬಾರದಿತ್ತು. ಏಕೆಂದರೆ ಇಬ್ಬರು ಸೇರಿ ಡ್ಯಾನ್ಸ್ ಮಾಡುವ ಅಗತ್ಯವಿದ್ದರಿಂದ ಆ ರೀತಿ ಹೇಳಬಾರದಿತ್ತು ಎಂದರು.

ಮಹೇಶ್ ಬಾಬು ಮಾತನಾಡಿ, ಇದು ಸೆನ್ಸೆಷನಲ್. ಈಗಾಗಲೇ ಒಂದು ಹಾಡನ್ನು ಚಿತ್ರೀಕರಿಸಿದ್ದು, ಅದು ನಮ್ಮ ಮನಸ್ಸಿನಲ್ಲಿ ಪ್ಲೇ ಆಗುತ್ತಲೇ ಇರುತ್ತದೆ. ಪ್ರಿಯಾಂಕಾ ಅದನ್ನು ಎಲ್ಲಾ ಸಮಯದಲ್ಲೂ ಹಾಡುತ್ತಲೇ ಇರುತ್ತಾರೆ. ಆಕೆ ಡ್ಯಾನ್ಸ್ ಮಾಡಲು ಬಯಸಿದ್ದರಿಂದ ಆ ಹಾಡು ಮಾಡಲಾಗಿದೆ ಎಂದು ಹೇಳಿದರು.

ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮಂದಾಕಿನಿ, ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಮಹೇಶ್ ಬಾಬು ರುದ್ರನಾಗಿ ರಾಮನ ಪಾತ್ರದಲ್ಲಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ನಿರ್ದೇಶಕರು ಖಚಿತಪಡಿಸಿದ್ದಾರೆ. ಏಪ್ರಿಲ್ 7, 2027 ರಂದು ವಾರಣಾಸಿಯನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಕೊಲ್ಲಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಕಣಿವೆಗೆ ತಳ್ಳಿ ಕೊಲೆಗೈದ ಬಾಯ್​ಫ್ರೆಂಡ್​!

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video