ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ 12' ಸದ್ಯ ಫಿನಾಲೆ ಹಂತಕ್ಕೆ ತಲುಪಿದ್ದು, ಈ ಬಾರಿ ಯಾರು ಟಾಪ್-5ರಲ್ಲಿ ಉಳಿತ್ತಾರೆ, ಕಪ್ ಯಾರು ಗೆಲ್ಲಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶನಿವಾರ ಮತ್ತು ಭಾನುವಾರ ಗ್ರಾಂಡ್ ಫಿನಾಲೆ ನಡೆಯಲಿದೆ.
ಈ ನಡುವೆ ಕಳೆದ ವಾರ ಸೀಸನ್ ಕೊನೆಯ ಕಿಚ್ಚನ ಚಪ್ಪಾಳೆ ಪಡೆದಿದ್ದ ಧ್ರುವಂತ್ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸದ್ಯ ಮನೆಯಲ್ಲಿ ಗಿಲಿ ನಟ, ರಘು, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ, ಧನುಶ್ ಹಾಗೂ ಧ್ರುವಂತ್ ಸೇರಿದಂತೆ ಏಳು ಮಂದಿ ಸ್ಪರ್ಧಿಗಳಿದ್ದಾರೆ. ಈ ಮಧ್ಯೆ ಫಿನಾಲೆ ಸ್ಪರ್ಧಿ ಎನ್ನಲಾಗುತ್ತಿದ್ದ ಧ್ರುವಂತ್ ಮನೆಯಿಂದ ಮಿಡ್ ನೈಟ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಎಲಿಮಿನೇಷನ್ ಬಗ್ಗೆ ಎಪಿಸೋಡ್ ಪ್ರಸಾರವಾದ ಮೇಲೆ ಅಧಿಕೃತವಾಗಿ ತಿಳಿದು ಬರಲಿದೆ.
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆ್ಯಕ್ಟಿವಿಡಿ ರೂಮ್‌ನಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸಲಾಗುತ್ತದೆ. ಹೊರಕಳುಹಿಸಲ್ಪಡುವ ಸದಸ್ಯರ ಪೈಕಿ ಮನೆಯ ಒಳಗಡೆ ಮರಳಿ ಬರುವವರು ಸೀಸನ್ 12ರ ಫಿನಾಲೆ ತಲುಪುತ್ತಾರೆ. ಮನೆಗೆ ಮರಳಿ ಬಾರದ ಒಬ್ಬ ಸದಸ್ಯ/ಸದಸ್ಯೆ ವಿದಾಯ ಹೇಳಿ ಹೊರ ನಡೆಯುತ್ತಾರೆ.
ಮಿಡ್ ವೀಕ್ ಎಲಿಮಿನೇಷನ್ ಸಾಲಿನಲ್ಲಿ ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ಕಾವ್ಯ, ಧ್ರುವಂತ್ ಇದ್ದಾರೆ. ಆಗೊಂದು ವೇಳೆ ಧ್ರುವಂತ್ ಡೊಡ್ಮನೆಯಿಂದ ಹೊರಗೆ ಬಂದರೆ ಉಳಿದ ಗಿಲ್ಲಿನಟ, ಅಶ್ವಿನಿ, ರಘು, ರಕ್ಷಿತಾ, ಕಾವ್ಯಾ ಮತ್ತು ಧನುಶ್ ಬಿಗ್ ಬಾಸ್ ಗೆಲ್ಲುವ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.