ಸಿನಿಮಾ ಸುದ್ದಿ

BBK12 ಫಿನಾಲೆಗೂ ಮುನ್ನ ನಟ ಸುದೀಪ್ ಮನೆಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ದಿಢೀರ್ ಭೇಟಿ!

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಈ ಭಾನುವಾರ ನಡೆಯಲಿದೆ. ಮೀಡ್ ವೀಕ್ ನಲ್ಲಿ ಯಾರು ಹೊರಗೆ ಬರುತ್ತಾರೆ ಎಂಬ ಕುತೂಹಲವು ಕೆರಳಿಸಿದೆ. ಇನ್ನು ಈ ಬಾರಿ ಟ್ರೋಫಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಈ ಭಾನುವಾರ ನಡೆಯಲಿದೆ. ಮೀಡ್ ವೀಕ್ ನಲ್ಲಿ ಯಾರು ಹೊರಗೆ ಬರುತ್ತಾರೆ ಎಂಬ ಕುತೂಹಲವು ಕೆರಳಿಸಿದೆ. ಇನ್ನು ಈ ಬಾರಿ ಟ್ರೋಫಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡರು, Biggboss ನಿರೂಪಕ, ನಟ ಸುದೀಪ್ ನಿವಾಸಕ್ಕೆ ಭೇಟಿ ನೀಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಗ್‌ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸಹ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಅಶ್ವಿನಿ ಗೌಡ ನಾರಾಯಣ ಗೌಡರ ಶಿಷ್ಯೆ ಎಂದು ಹೇಳಲಾಗುತ್ತಿದೆ. ಇನ್ನು ಫಿನಾಲೆ ಹಂತದಲ್ಲಿರುವ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಕೋರಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಅಶ್ವಿನಿಗೌಡ ಬಿಗ್‌ಬಾಸ್ ಮನೆಯಲ್ಲಿ ನಾರಾಯಣ ಗೌಡರನ್ನು ನೋಡಬೇಕು. ಅವರ ಅಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದ್ದರು.

ಇದೀಗ ಸುದೀಪ್ ಅವರನ್ನು ನಾರಾಯಣಗೌಡರು ಭೇಟಿಯಾಗಿದ್ದಾರೆ. ನಾರಾಯಣ ಗೌಡ್ರು ತಮ್ಮ ಪುತ್ರನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಲು ಸುದೀಪ್ ನಿವಾಸಕ್ಕೆ ತೆರಳಿದ್ದು ಮಗನ ಮದುವೆಗೆ ಆಹ್ವಾನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪ್ರಬಲ ಸ್ಫೋಟ: ಮೂವರು ಸಾವು, ಇಬ್ಬರು ಗಂಭೀರ ಗಾಯ

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!

ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ ಆರ್‌ಎಸ್‌ಎಸ್‌ಗೆ ಏನು ಕೆಲಸ?: ಪ್ರಿಯಾಂಕ್ ಖರ್ಗೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್ ಐಟಿಯಿಂದ TDB ಮಾಜಿ ಸದಸ್ಯ ಶಂಕರ್ ದಾಸ್ ಬಂಧನ!

ವಾಲ್ಮೀಕಿ ನಿಗಮ ಹಗರಣ: ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್ ! ಷರತ್ತು ಬದ್ಧ ಜಾಮೀನು ಮಂಜೂರು

SCROLL FOR NEXT