ಕಿಚ್ಚ ಸುದೀಪ್  
ಸಿನಿಮಾ ಸುದ್ದಿ

Bigg Boss Kannada 12: ಗ್ರ್ಯಾಂಡ್ ಫಿನಾಲೆಗೂ ಮೊದಲು ಕಿಚ್ಚ ಸುದೀಪ್ ಅಚ್ಚರಿಯ ಪೋಸ್ಟ್, ಹೇಳಿದ್ದೇನು..?

ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ವಿನ್ನರ್‌ ಯಾರು ಎಂಬುದರ ಕುರಿತು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.

ಬೆಂಗಳೂರು: ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ವಿನ್ನರ್‌ ಯಾರು ಎಂಬುದರ ಕುರಿತು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಈ ನಡುವಲ್ಲೇ ಕಿಚ್ಚ ಸುದೀಪ್ ಅವರು ಅಚ್ಚರಿಯ ಪೋಸ್ಟ್'ವೊಂದನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, . ಬಿಗ್ ಬಾಸ್ ಬಗ್ಗೆ ತಮಗೆ ಅನಿಸಿರೋದನ್ನ ಬರೆದಿದ್ದಾರೆ. ಇಡೀ ಬಿಗ್ ಬಾಸ್‌ಗಾಗಿಯೇ ದುಡಿದವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಇಂದು ಬಿಗ್ ಬಾಸ್ ಸೀಸನ್ -12 ಗ್ರ್ಯಾಂಡ್ ಫಿನಾಲೆ ಇದೆ. ಇದು ನಿಜಕ್ಕೂ ಅದ್ಭುತ ಸೀಸನ್, ವೀಕ್ಷಕರಿಗೆ, ಇಡೀ ತಂಡಕ್ಕೆ ಧನ್ಯವಾದ ಹೇಳಿಗಳು. ಸೂರ್ಯಾಸ್ತದ ಹೊತ್ತಿಗೆ ಬಿಗ್ ಬಾಸ್ ಸೀಸನ್ -12 ಮುಕ್ತಾಯವಾಗಲಿದೆ. ಈ ಒಂದು ಶೋಗೆ ಬೆಂಬಲ ನೀಡಿದ ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಬಿಗ್ ಬಾಸ್‌ ಗೆದ್ದ ವಿಜೇತರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಇದ್ರೆ ಬಿಗ್ ಬಾಸ್ ಇಲ್ಲ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13 ಶುರು ಆಗುವ ತನಕ ಬಿಗ್ ಬಾಸ್ ವಿಶ್ರಾಂತಿ ಪಡೆಯಲಿ. ಈ ಸೂರ್ಯಾಸ್ತದ ವೇಳೆಗೆ ನಾವು ಬಾಗಿಲುಗಳನ್ನು ಗೌರವದಿಂದ ಮುಚ್ಚುತ್ತೇನೆ ಎಂದು ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಈ ಪೋಸ್ಟ್ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗೋಲ್ಡನ್ ಟೆಂಪಲ್‌ನ ಕೊಳದಲ್ಲಿ ಕೈ, ಕಾಲು ತೊಳೆದು ಬಾಯಿ ಮುಕ್ಕಳಿಸಿ ಅಪವಿತ್ರಗೊಳಿಸಿದ Muslim ವ್ಯಕ್ತಿ, Video!

Guillain-Barré Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ, ಮೂವರ ಬಂಧನ!

ಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿಗಳ ಆತಿಥ್ಯಕ್ಕೆ ಸಿದ್ಧವಾದ ಕುಂದಾಪುರ!

SCROLL FOR NEXT