ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು ನಡೆದಿದ್ದು ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದ ಕೆಲ ಸ್ಪರ್ಧಿಗಳು ಇಂದಿನ ಶೋಗೆ ಬಂದಿದ್ದಾರೆ. ಈ ಪೈಕಿ ಸ್ಪರ್ಧಿ ಡಾಗ್ ಸತೀಶ್ ಸಹ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಕೆಲವೇ ವಾರ ಆಗಿದ್ದರಿಂದ ದೊಡ್ಮನೆಯಲ್ಲಿ ಸುದ್ದಿ ಆಗಿರಲಿಲ್ಲ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಸಾಕಷ್ಟು ಹೇಳಿಕೆಗಳು ಕೊಡುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಕರಿ ಬಣ್ಣದ ಗ್ಲಾಸ್ ಹಾಕಿದ್ದ ಸತೀಶ್ ಅವರು ಯಾವುದೇ ಕಾರಣಕ್ಕೂ ಗ್ಲಾಸ್ ತೆಗೆಯಲ್ಲ. ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗುತ್ತಿಲ್ಲ ಎಂಬುದು ಬೇಸರ ಎಂದು ಸುದೀಪ್ ಹೇಳಿದರು. ಡಾಗ್ ಸತೀಶ್ ಅವರು, ನಾನು ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದೆ. ಆದರೆ, ರೆಕೋಗ್ನೈಸೇಷನ್ ಇರಲಿಲ್ಲ. ಬಿಗ್ ಬಾಸ್ನಿಂದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.