ಕನ್ನಡ ಬಿಗ್‌ಬಾಸ್ ಸೀಸನ್-12 ಪ್ರೇಕ್ಷಕರ ಮನಗೆದ್ದು ಇಂದು ಗ್ರ್ಯಾಂಡ್ ಫಿನಾಲೆ ಪ್ರಸಾರವಾಗುತ್ತಿದೆ. ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಂತಿಮವಾಗಿ ಆರು ಸ್ಪರ್ಧಿಗಳು ಫಿನಾಲೆ ಅಂಗಳದಲ್ಲಿದ್ದಾರೆ. 'ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲೋದು ಗಿಲ್ಲಿನೇ' ಎಂದು ಅನೇಕರು ಹೇಳುತ್ತಿದ್ದಾರೆ, ಅವರ ಗೆಲುವಿಗೆ ಮಂಡ್ಯ, ಬೆಂಗಳೂರು ಸೇರಿದಂತೆ ನಾನಾ ಕಡೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ಕ್ರೇಜ್ ಎಲ್ಲೆಡೆ ಇದೆ.
ಕಿಚ್ಚ ಸುದೀಪ್ ಒಬ್ಬ ಸ್ಪರ್ಧಿಗೆ ಈ ಬಾರಿ ದಾಖಲೆಯ ವೋಟಿಂಗ್ ಆಗಿದೆ ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸದ್ಯ ಎಲ್ಲರ ಕಣ್ಣು ಗಿಲ್ಲಿ ಮೇಲಿದ್ದರೆ, ಖ್ಯಾತ ಜ್ಯೋತಿಷಿಯೊಬ್ಬರು 'ಗಿಲ್ಲಿ ಈ ಬಾರಿ ಬಿಗ್‌ಬಾಸ್ ಗೆಲ್ಲಲ್ಲ' ಎಂಬ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಿಲ್ಲಿ ಗೆಲುವಿನ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ (Prashanth Kini) ಕಳೆದ ಡಿಸೆಂಬರ್ ನಲ್ಲಿ ಭವಿಷ್ಯ ಹೇಳಿದ್ದರು. ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಅದೇ ಮಾತನ್ನು ಹೇಳಿದ್ದಾರೆ.
'ಗಿಲ್ಲಿ ನಿಜಕ್ಕೂ ಅರ್ಹ ಸ್ಪರ್ಧಿ' ಪ್ರಶಾಂತ್ ಕಿಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ನಾನು ಗಿಲ್ಲಿ ಬಿಗ್‌ಬಾಸ್ ಗೆಲ್ಲುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೇನೆ. ಇದರರ್ಥ ಗಿಲ್ಲಿ ವಿರುದ್ಧ ನನಗೆ ಯಾವುದೇ ದ್ವೇಷವಿದೆ ಎನ್ನುವುದಲ್ಲ. ಗಿಲ್ಲಿ ನಿಜಕ್ಕೂ ಅತ್ಯಂತ ಅರ್ಹ ಸ್ಪರ್ಧಿ' 'ಆದರೆ ಈ ಹಿಂದೆಯೂ ಸಹ ಅತ್ಯಂತ ಅರ್ಹ ಸ್ಪರ್ಧಿಗಳಲ್ಲಿ ಅನೇಕರು ಬಿಗ್‌ಬಾಸ್ ಗೆಲ್ಲಲು ಸಾಧ್ಯವಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.