ಬಿಗ್ ಬಾಸ್ ಸ್ಪರ್ಧಿಗಳಾದ ಗಿಲ್ಲಿ, ಕಾವ್ಯ ಮತ್ತು ಅಶ್ವಿನಿಗೌಡ 
ಸಿನಿಮಾ ಸುದ್ದಿ

ಬಿಗ್ ಬಾಸ್ 12: 'ಬಡವನಲ್ಲ' ಎಂದ ಅಶ್ವಿನಿಗೌಡಗೆ ತಿರುಗೇಟು ಕೊಟ್ಟ ಕಾವ್ಯಾ.. ಗಿಲ್ಲಿ ಪರ ಫುಲ್ ಬ್ಯಾಟಿಂಗ್!

ಅಶ್ವಿನಿಗೌಡ ಅವರು ನೀಡಿದ್ದ 'ಬಡವನಲ್ಲ' ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದಕ್ಕೆ ಮತ್ತೋರ್ವ ಸ್ಪರ್ದಿ ಕಾವ್ಯಾ ಶೈವಾ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯವಾಗಿದ್ದು, ಗಿಲ್ಲಿನಟ ವಿನ್ನರ್ ಆಗಿದ್ದಾರೆ. ಆದರೆ ಅವರ ಗೆಲುವನ್ನು ಸಹಸ್ಪರ್ಧಿಗಳೇ ಕೊಂಕಾಡುತ್ತಿದ್ದು, ಪ್ರಮುಖವಾಗಿ ಅಶ್ವಿನಿಗೌಡ ಅವರು ನೀಡಿದ್ದ 'ಬಡವನಲ್ಲ' ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದಕ್ಕೆ ಮತ್ತೋರ್ವ ಸ್ಪರ್ದಿ ಕಾವ್ಯಾ ಶೈವಾ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ಗಿಲ್ಲಿ ನಟನ ಗೆಲುವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಿಸುತ್ತಿದ್ದು, ಗಿಲ್ಲಿಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ಈ ಮಟ್ಟಿನ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ.

ಇನ್ನು ಈ ಗೆಲುವನ್ನು ಗಿಲ್ಲಿ ಅಭಿಮಾನಿಗಳು ಮಾತ್ರವಲ್ಲ, ಪ್ರತಿಸ್ಪರ್ಧಿಯಾಗಿ ಭಾರಿ ಗಮನಸೆಳೆದಿದ್ದ ಕಾವ್ಯ ಕೂಡ ಸಂಭ್ರಮಿಸಿದ್ದಾರೆ.

ಬಿಗ್ ಬಾಸ್ ಶೋ ಮುಕ್ತಾಯದ ಬೆನ್ನಲ್ಲೇ ಮನೆಗೆ ವಾಪಸ್ ಆಗಿರುವ ಕಾವ್ಯಾ ಇದೀಗ ಗಿಲ್ಲಿಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಅದೇ ಪೋಸ್ಟ್ ಮೂಲಕ ಗಿಲ್ಲಿ ಬಡವನಲ್ಲ ಎಂಬ ಅಶ್ವಿನಿಗೌಡ ಅವರ ಟೀಕೆಗೂ ಪರೋಕ್ಷ ಉತ್ತರ ನೀಡಿದಂತಿದೆ.

ಇಷ್ಟಕ್ಕೂ ಪೋಸ್ಟ್ ನಲ್ಲೇನಿದೆ?

ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಾವ್ಯಾಶೈವ, 'ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದು ಬರೆದುಕೊಂಡಿದ್ದಾರೆ. ಈ ಗೆಲುವಿಗೆ ಗಿಲ್ಲಿ ಅರ್ಹ, ಅಭಿನಂದನೆಗಳು ಎಂದು ಕಾವ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ಬಡತನದಿಂದ ಬಂದ ಪ್ರತಿಭೆ ಗಿಲ್ಲಿ ಬಿಗ್ ಬಾಸ್ ಟ್ರೋಫಿ ಗೆಲುವು ಅತ್ಯಂತ ಅರ್ಹತೆಯಿಂದ ಪಡೆದು ಗೆಲುವು' ಎಂದು ಬರೆದಿದ್ದಾರೆ.

ಜೀರೋ ಟು ಹೀರೋ.. ಇನ್ನಷ್ಟು ಬರಬೇಕಿದೆ. ಬೇಗ ಆ್ಯಕ್ಷನ್ ಕಟ್ ಹೇಳೋ ಹಾಗಾಗ್ಲಿ.. ತುಂಬಾ ತುಂಬಾ ಒಳ್ಳೇದಾಗ್ಲಿ ಎಂದು ಬರೆದು ಗಿಲ್ಲಿ ವಿನ್ನರ್ ಎಂದು ಘೋಷಿಸಿದ ಫೋಟೋ ಪೋಸ್ಟ್ ಮಾಡಿದ್ದಾರೆ.

ಗಿಲ್ಲಿ ಅಭಿಮಾನಿಗಳ ಸಂಭ್ರಮ

ಕಾವ್ಯ ಶೈವ ಮಾಡಿದ ಪೋಸ್ಟ್‌ನಿಂದ ಗಿಲ್ಲಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಲು ಕಾರಣವೂ ಇದೆ. ಈ ಪೋಸ್ಟ್‌ನ ಕೊನೆಯಲ್ಲಿ ಆದಷ್ಟು ಬೇಗ ಆ್ಯಕ್ಷನ್ ಕಟ್ ಹೇಳೋ ಆಗೆ ಆಗಲಿ ಎಂದು ಕಾವ್ಯ ಶುಭಹಾರೈಸಿದ್ದಾರೆ. ಈ ಮೂಲಕ ಗಿಲ್ಲಿ ನಟ ಆದಷ್ಟು ಬೇಗ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಹಾಗೆ ಆಗಲಿ ಎಂದಿದ್ದಾರೆ. ಅಲ್ಲದೆ ಗಿಲ್ಲಿ ಚಿತ್ರರಂಗದಲ್ಲಿ ನಿರ್ದೇಶಕನಾಗುವ ಆಸೆಯಿಂದ ಬಂದಿದ್ದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರ ಮುಂದಿನ ಹೆಜ್ಜೆ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಗಿಲ್ಲಿ ಬಡವನಲ್ಲ ಎಂದಿದ್ದ ಅಶ್ವಿನಿಗೌಡ

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಜೊತೆಗಿನ ಜಗಳಕ್ಕೆ ಖ್ಯಾತಿಗಳಿಸಿದ್ದ ನಟಿ ಅಶ್ವಿನಿಗೌಡ ಮನೆಯಿಂದ ಹೊರಬಂದ ಬಳಿಕ ಬಿಗ್ ಬಾಸ್ ಮತ್ತು ಗಿಲ್ಲಿ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. 'ಬಡವನ ಗೆಟಪ್‌ನಲ್ಲಿ ಗಿಲ್ಲಿ ವಿನ್ನರ್‌ ಆದ್ರು. ಅಷ್ಟೇ ಬಿಟ್ರೆ, ಬಡವ ಅಂತ ಹೇಳಿದ್ರೆ ತಪ್ಪಾಗುತ್ತೆ. ಅದನ್ನ ನಾವು ಯಾವತ್ತೂ ಸ್ಟ್ರ್ಯಾಟಜಿ ಕಾರ್ಡ್‌ ಆಗಿ ಬಳಸಬಾರದು.

ಇದು ಕಾಮೆಡಿ ಶೋ ಅಲ್ಲ. ವ್ಯಕ್ತಿತ್ವದ ಆಟ. ಇನ್ನೊಬ್ಬರನ್ನು ಕೆಳಗಿಟ್ಟು ಇನ್ನೊಬ್ಬರ ವ್ಯಕ್ತಿತ್ವವನ್ನು ಕೆಳಗಿಟ್ಟು ಕಪ್ಪು ಒಬ್ಬರಿಗೆ ಕೊಡ್ತೀನಿ ಅಂದ್ರೆ.. ಒಂದು ಟಾಸ್ಕ್ ಆಡುವುದಿಲ್ಲ, ಒಂದು ಏನು ಮಾಡುವುದಿಲ್ಲ, ಮನೆಯಲ್ಲೂ ಒಂದು ವ್ಯಕ್ತಿತ್ವದ ಪ್ರದರ್ಶನ ಇರುವುದಿಲ್ಲ, ಅವರಿವರನ್ನು ಕೆಳಗಿಟ್ಟು ಮಾತಾಡೋದು ಅಷ್ಟೇ' ಎಂದು ಅಶ್ವಿನಿಗೌಡ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2030 ರ ವೇಳೆಗೆ ಭಾರತ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆ! SBI ವರದಿ ಹೇಳಿದ್ದೇನು?

ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ 'ನನ್ನ ಹೆಸರೇ' ಆಸರೆ! ಪ್ರಿಯಾಂಕ್ ಖರ್ಗೆ ಕಿಡಿ

BCCI ಆಟಗಾರರ ಒಪ್ಪಂದಕ್ಕೆ ಮೇಜರ್ ಸರ್ಜರಿ: Virat Kohli, Rohit Sharmaಗೆ ಡಿಮೋಷನ್, ವೇತನ ಕಡಿತ!

ಬಸ್ಸಿನಲ್ಲಿ ಲೈಂಗಿಕ ಕಿರುಕುಳ, ದೀಪಕ್ ದುರಂತ ಸಾವು: ಆರೋಪ ಮಾಡಿದ್ದ ಮಹಿಳೆ ವಿರುದ್ಧ ಕೇಸ್ ಜಡಿದ ಪೊಲೀಸರು!

ಕಚೇರಿಯಲ್ಲಿ 'ರಾಸಲೀಲೆ' ವಿಡಿಯೋ ವೈರಲ್: ಡಿಜಿಪಿ ರಾಮಚಂದ್ರರಾವ್ ತಲೆದಂಡ, ಸರ್ಕಾರ ಅಮಾನತು ಆದೇಶ

SCROLL FOR NEXT