ಸಾಯಿ ಪಲ್ಲವಿ, ರಣಬೀರ್​ ಕಪೂರ್​  
ಸಿನಿಮಾ ಸುದ್ದಿ

ಸೀತೆ ನಮ್ಮ ಮಾತೆ; ಯಾರ್‍ಯಾರನ್ನೋ ಆ ಪಾತ್ರಕ್ಕೆ ತಂದ್ರೆ ಜನ ಒಪ್ಪುತ್ತಾರಾ? ನಿತೇಶ್ ತಿವಾರಿ ರಾಮಾಯಣಕ್ಕೆ ಅನ್ನು ಕಪೂರ್ ಅಸಮಾಧಾನ

ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಮೊದಲ ಭಾಗವು 2026 ರ ಅಕ್ಟೋಬರ್​​ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.

ಮುಂಬೈ: ಬಹು ದಿನಗಳ ನಂತರ ಬಾಲಿವುಡ್​​ನಲ್ಲಿ ಭಾರತೀಯ ಪುರಾಣವನ್ನು ಆಧರಿಸಿದ ಸಿನಿಮಾವೊಂದು ತೆರೆಕಾಣಲು ಸಿದ್ಧವಾಗಿದೆ. ಭಾರತೀಯ ಪರಂಪರೆಯಲ್ಲಿ ಮಹಾಗ್ರಂಥವೆಂದೇ ಕರೆಯಲ್ಪಡುವ ರಾಮಾಯಣವನ್ನು ಆಧರಿಸಿಕೊಂಡು ನಿರ್ದೇಶಕ ನಿತೇಶ್​ ತಿವಾರಿ ಎರಡು ಭಾಗಗಳಲ್ಲಿ 'ರಾಮಾಯಣ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಮೊದಲ ಭಾಗವು 2026 ರ ಅಕ್ಟೋಬರ್​​ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಸಿನಿಮಾಗೆ ಪಾತ್ರಕ್ಕಾಗಿ ಆಯ್ದುಕೊಂಡ ಕಲಾವಿದರ ಬಗ್ಗೆ ಬಾಲಿವುಡ್​​ನ ಹಿರಿಯ ನಟ ಅನ್ನು ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೀತಾ ಮಾತೆ ಪಾತ್ರ ಹಾಗೂ ನಿರ್ದೇಶಕರ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿದ ಅನ್ನು ಕಪೂರ್​, ಈಗೆ ತೆರೆಕಾಣಲಿರುವ ರಾಮಾಯಣ ಎಂಬ ಸಿನಿಮಾ, ದಯಾನಂದ್​ ಸಾಗರ್​ ಅವರು ನಿರ್ಮಿಸಿದ್ದ ರಾಮಾಯಣವನ್ನು ದೃಶ್ಯ ಸಂಯೋಜನೆ ಹಾಗೂ ತಂತ್ರಜ್ಞಾನದಲ್ಲಿ ಹಿಂದೂಡಬಹುದು, ಆದರೆ ನೈತಿಕ ಮೌಲ್ಯಗಳನ್ನು ನಿಮ್ಮ ಸಿನಿಮಾ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅನ್ನು ಕಪೂರ್

ಭಾರತೀಯರು, ಅದರಲ್ಲೂ ಹಿಂದೂಗಳು ಶ್ರೀರಾಮನನ್ನು ಭಗವಾನ್​ ನಾರಾಯಣನ ಅವತಾರ ಎಂದು ಪೂಜಿಸುತ್ತಾರೆ, ಸೀತಾ ದೇವಿ ಭಾರತೀಯರಿಗೆ ತಾಯಿಯ ಸ್ಥಾನದಲ್ಲಿದ್ದಾರೆ, ಆದರೆ ನಿಮ್ಮ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಜನ ಅವರ ಪಾತ್ರವನ್ನು, ಅವರನ್ನು ಒಪ್ಪುತ್ತಾರೆಯೇ? ಎಂದು ಸಾಯಿ ಪಲ್ಲವಿಗೆ ಪರೋಕ್ಷವಾಗಿ ಕೌಂಟರ್​ ಕೊಟ್ಟಿದ್ದಾರೆ.

ಇನ್ನೂ ಈ ಸಿನಿಮಾದ ನಿರ್ದೇಶಕ ನಿತೇಶ್​ ತಿವಾರಿ ಯಾರೆಂದೇ ನನಗೆ ಗೊತ್ತಿಲ್ಲ. ಅವನು ಈ ಮೊದಲು ಯಾವ ಸಿನಿಮಾ ಮಾಡಿದ್ದಾನೆ ಎಂದೂ ನನಗೆ ತಿಳಿದಿಲ್ಲ. ಈ ರಾಮಾಯಣ ದಾಂ ದುಂ ಆಗಿ ತೆರೆಕಂಡರೂ ಜನರ ಮನಸ್ಸನ್ನು ಮುಟ್ಟುತ್ತದೆ ಎಂದು ನಾನು ಹೇಳಲಾರೆ. ಈ ಸಿನಿಮಾದಲ್ಲಿ ನಮ್ಮ ಪೌರಾಣಿಕ ಕನೆಕ್ಷನ್​ ಇಲ್ಲ ಎಂದು ಅನ್ನು ಕಪೂರ್​ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕನ ರಾಜೀನಾಮೆ; ಸುರಕ್ಷತಾ ಕಾರ್ಯನಿರ್ವಾಹಕರಿಂದಲೂ ಬೆಂಬಲ!

ಸಂಘರ್ಷ ಮತ್ತಷ್ಟು ತೀವ್ರ: ಇಂಧನ ಟ್ಯಾಂಕರ್ ಗಳ ಮೇಲಿನ ದಾಳಿಗೆ ಸೇಡು, ಅಮೆರಿಕದ Submarine ಸೀಜ್ ಮಾಡಿದ ಇರಾನ್!

ಸಂಸಾರ, ಸಿಮ್ ಕಾರ್ಡ್, CID ಬಲೆ: ನಾಪತ್ತೆಯಾಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರು 8 ತಿಂಗಳ ಬಳಿಕ ಪತ್ತೆ; ಒಬ್ಬಳು ಗರ್ಭಿಣಿ!

KBCಗೆ ಅಮಿತಾಬ್ ಬಚ್ಚನ್ ವಿದಾಯ? ಈ ಬಗ್ಗೆ ಬಿಗ್ ಬಿ ಹೇಳಿದ್ದೇನು?