ಆರ್ಯವರ್ಧನ್ ಗುರೂಜಿ, ಯಶ್ 
ಸಿನಿಮಾ ಸುದ್ದಿ

ನಿಮ್ಮ ಜಾತಕ ನಿಮಗೊತ್ತಿಲ್ವಾ?: Toxic ಆವರೇಜ್‌ ಎಂದ ಆರ್ಯವರ್ಧನ್‌ ಗುರೂಜಿಗೆ ಹಿಗ್ಗಾಮುಗ್ಗಾ ಜಾಡಿಸಿದ Yash ಅಭಿಮನಿಗಳು!

'ಲಕ್ಷ್ಮಿ' ದೇವಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ಹಿಂದೂಗಳ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಆರ್ಯವರ್ಧನ್ ಗೂರೂಜಿ ಇದೀಗ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರು: 'ಲಕ್ಷ್ಮಿ' ದೇವಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ಹಿಂದೂಗಳ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಆರ್ಯವರ್ಧನ್ ಗೂರೂಜಿ ಇದೀಗ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೆಜಿಎಫ್ ಬಳಿಕ ಯಶ್ ಅಭಿನಯದ Toxic ಚಿತ್ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮುಂದಿನ ಆಗಸ್ಟ್ 26ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಚಿತ್ರದ ಕಲೆಕ್ಷನ್ ಬಗ್ಗೆ ಯಶ್ ಅಭಿಮಾನಿಗಳು ಬಹುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಜಿಎಫ್ ನಂತೆ ಟಾಕ್ಸಿಕ್ ಸಹ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯಲಿದೆ ಎಂದು ನಂಬಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಬಾಕ್ಸ್ ಆಫೀಸ್ ಭವಿಷ್ಯದ ಕುರಿತು ಮಾಜಿ Biggboss ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಹೇಳಿಕೆ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕಿರಿಕ್ ಕೀರ್ತಿ ಅವರ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದ ಆರ್ಯವರ್ಧನ್ ಗುರೂಜಿ ಟಾಕ್ಸಿಕ್ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗುರೂಜಿ ಟಾಕ್ಸಿಕ್ ಸಿನಿಮಾ ಆವರೇಜ್ ಅಷ್ಟೇ. ಇದರಿಂದ ನಿರ್ಮಾಪಕರಿಗೆ ನಷ್ಟವೂ ಆಗಲ್ಲ, ಲಾಭವೂ ಆಗಲ್ಲ ಎಂದರು. ಸಿನಿಮಾ ಭಾರೀ ತಡವಾಗಿ ಬರುತ್ತಿದೆ. ಹೀಗಾಗಿ ನಿರೀಕ್ಷೆಗಳು ಸಹ ಸ್ವಾಭಾವಿಕವಾಗಿ ಕಡಿಮೆಯಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಟಾಕ್ಸಿಕ್ ಸಿನಿಮಾ ಇಷ್ಟೋತಿಗಾಗಲೇ ಬಂದಿದ್ದರೇ ಅದಕ್ಕೆ ಸಿಗುತ್ತಿದ್ದ ನಿರೀಕ್ಷೆ ಬರೇ ಇರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮಾರ್ಕೆಟಿಂಗ್‌ನಲ್ಲೇ ಗಿಮಿಕ್ ನಡೆಯುತ್ತಿದೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ಗಳನ್ನ ಹಣ ಕೊಟ್ಟು ಖರೀದಿಸಿ ಸಿನಿಮಾ ಬಗ್ಗೆ ಹೈಪ್ ಕ್ರಿಯೆಟ್ ಮಾಡಿಸುತ್ತಾರೆ. ಇದನ್ನು ನೋಡಿದ ಜನ ಸೂಪರ್ ಅಂತಾ ಥಿಯೇಟರ್ ಗೆ ಹೋದರೆ ತಲೆನೋವು ಬರುತ್ತೆ. ಈಗ ಎಲ್ಲವೂ ಕಮರ್ಷಿಯಲ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಗುರೂಜಿ ವಿರುದ್ಧ ವ್ಯಾಪಕ ಟ್ರೋಲ್ ಆರಂಭವಾಗಿದ್ದು, ಯಶ್ ಫ್ಯಾನ್ಸ್ ಖಡಕ್ ತಿರುಗೇಟು ನೀಡುತ್ತಿದ್ದಾರೆ.

ಬೇರೆಯವರ ಸಿನಿಮಾ ಬಗ್ಗೆ ಭವಿಷ್ಯ ನುಡಿಯುತ್ತಿರುವ ಗುರೂಜಿ ಅವರೇ, ನಿಮ್ಮ ಜಾತಕ ನಿಮಗೆ ಸರಿಯಾಗಿ ಗೊತ್ತಿದ್ದಿದ್ದರೆ ಬಿಗ್ ಬಾಸ್ ಮನೆಯಿಂದ ಅಷ್ಟೊಂದು ಬೇಗ ಯಾಕೆ ಹೊರಗೆ ಬರ್ತಿದ್ರಿ? ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸ್ ಧೂಳೀಪಟವಾಗೋದನ್ನ ಕಣ್ಣಾರೆ ನೋಡಿ ನಮ್ಮ ಮುಂದೆ ಬನ್ನಿ ಎಂದು ಅಭಿಮಾನಿಗಳು ಸವಾಲು ಹಾಕುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

'ಅಹಿಂದ ಯಾರ ಆಸ್ತಿಯೂ ಅಲ್ಲ'.. ಕರೆಯದೇ ಹೇಗೆ ಹೋಗಲಿ?: ಗುರುವಿನ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗರಂ!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ