ಯಶ್, ಅಟ್ಲೀ 
ಸಿನಿಮಾ ಸುದ್ದಿ

ರಾಮಾಯಣ ಟ್ರೇಲರ್‌ನ ಮೊದಲ ವಿಮರ್ಶೆ: ರಾವಣನಾಗಿ ಯಶ್ ಅವತಾರಕ್ಕೆ ನಿರ್ದೇಶಕ ಅಟ್ಲಿ ಹೇಳಿದ್ದೇನು?

ಪೌರಾಣಿಕ ಚಿತ್ರ ರಾಮಾಯಣ ಭಾಗ 1 ಬಿಡುಗಡೆಗಾಗಿ ಸಿನಿಪ್ರಿಯರ ಕಾತುರದಿಂದ ಕಾಯುತ್ತಿದ್ದಾರೆ. ರಣಬೀರ್ ಕಪೂರ್ ಅಭಿನಯದ 4000 ಕೋಟಿಗಳ ಬೃಹತ್ ಬಜೆಟ್‌ನ ರಾಮಾಯಣ ಕುರಿತಂತೆ ಈಗಾಗಲೇ ಕುತೂಹಲ ಕೆರಳಿಸಿದೆ.

ಪೌರಾಣಿಕ ಚಿತ್ರ ರಾಮಾಯಣ ಭಾಗ 1 ಬಿಡುಗಡೆಗಾಗಿ ಸಿನಿಪ್ರಿಯರ ಕಾತುರದಿಂದ ಕಾಯುತ್ತಿದ್ದಾರೆ. ರಣಬೀರ್ ಕಪೂರ್ ಅಭಿನಯದ 4000 ಕೋಟಿಗಳ ಬೃಹತ್ ಬಜೆಟ್‌ನ ರಾಮಾಯಣ ಕುರಿತಂತೆ ಈಗಾಗಲೇ ಕುತೂಹಲ ಕೆರಳಿಸಿದೆ. ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ರಾಮಾಯಣ ಟ್ರೇಲರ್‌ಗೆ ಸಂಬಂಧಿಸಿದ ಹೊಸ ಸುದ್ದಿಗಳು ಹೊರಹೊಮ್ಮುತ್ತಿವೆ.

ಜುಲೈ 24ರಂದು ನಿರ್ಮಾಪಕರು ರಾಮಾಯಣ ಚಿತ್ರದ ಮೊದಲ ಭಾಗದ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಈ ಪೌರಾಣಿಕ ಚಿತ್ರದ ಮೊದಲ ಟ್ರೇಲರ್‌ನ ಒಂದು ನೋಟವನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ನಡೆಯುವ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಾಣಬಹುದು. ಆದಾಗ್ಯೂ, ತಯಾರಕರು ಈಗಾಗಲೇ ತರಣ್ ಆದರ್ಶ್ ಸೇರಿದಂತೆ ಆಯ್ದ ಕೆಲವು ಭಾರತೀಯ ಚಲನಚಿತ್ರ ವಿಮರ್ಶಕರಿಗೆ ಟ್ರೇಲರ್ ಅನ್ನು ತೋರಿಸಿದ್ದಾರೆ.

ನಾನು ಈಗಷ್ಟೇ ರಾಮಾಯಣ ಟ್ರೇಲರ್ ಅನ್ನು ನೋಡಿದೆ. ಅದನ್ನು ಒಂದೇ ಪದದಲ್ಲಿ ವಿವರಿಸುವುದಾದರೇ 'ಅದ್ಭುತ'. 'ಪ್ರಥಮ್ ಸಂಕಲ್ಪ' ಎಂಬ ಶೀರ್ಷಿಕೆಯ ನಾಲ್ಕು ನಿಮಿಷಗಳ ಟ್ರೇಲರ್ ನಿಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ಧಗೊಳಿಸುತ್ತದೆ. ಇದರ ನಿರೂಪಣೆ, ದೃಶ್ಯಗಳು, VFX ಮತ್ತು ಹಿನ್ನೆಲೆ ಸಂಗೀತವು ನಿಜವಾಗಿಯೂ ಅತ್ಯುತ್ತಮವಾಗಿದೆ. ಚಿತ್ರವು ಎಲ್ಲ ರೀತಿಯಲ್ಲೂ ಜಾಗತಿಕ ಸಿನಿಮೀಯ ಅನುಭವದಂತೆ ಭಾಸವಾಗುತ್ತದೆ ಎಂದರು. ರಣಬೀರ್ ಕಪೂರ್ ಭಗವಾನ್ ರಾಮನಾಗಿ ದೈವತ್ವ, ಅನುಗ್ರಹ ಮತ್ತು ಶಕ್ತಿಯನ್ನು ಹೊರಹಾಕುತ್ತಾರೆ. ಇನ್ನು ಯಶ್ ಅವರ ರಾವಣನ ಚಿತ್ರಣವು ಅತ್ಯುತ್ತಮವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ರೇಲರ್ ನೋಡಿ ಹೊಗಳಿದ ನಿರ್ದೇಶಕ ಅಟ್ಲೀ!

ಶಾರುಖ್ ಖಾನ್ ಅಭಿನಯದ ಸಾರ್ವಕಾಲಿಕ ಬ್ಲಾಕ್ಬಸ್ಟರ್ "ಜವಾನ್" ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಅಟ್ಲೀ ಕೂಡ ರಾಮಾಯಣ ಟ್ರೇಲರ್ ಅನ್ನು ಹೊಗಳಿದ್ದಾರೆ. ಯಶ್ ಭಾಯ್ ಡೇಂಜರಸ್ ಆಗಿ ಕಾಣಿಸಿದ್ದಾರೆ. ರಣಬೀರ್ ಕಪೂರ್ ಭಾಯ್ ಅದ್ಭುತವಾಗಿದ್ದಾರೆ. ಸಾಯಿ ಪಲ್ಲವಿ ಸಂಪೂರ್ಣವಾಗಿ ದೈವಿಕವಾಗಿ ಕಾಣುತ್ತಿದ್ದಾರೆ. ಪ್ರತಿ ಫ್ರೇಮ್ ಸುಂದರವಾಗಿ, ಹೊಸದಾಗಿ ಮತ್ತು ಮಾಂತ್ರಿಕವಾಗಿ ಕಾಣುತ್ತದೆ. ಇಡೀ ತಂಡಕ್ಕೆ ಬ್ಲಾಕ್ಬಸ್ಟರ್ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಇದು ನಿಜಕ್ಕೂ ಮಹಾಕಾವ್ಯದ ಚಿತ್ರದಂತೆ ಕಾಣುತ್ತದೆ ಎಂದು ಅಟ್ಲೀ ಮತ್ತಷ್ಟು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest LIVE Updates | ಮುಂದುವರೆದ CJP ಪ್ರತಿಭಟನೆ: ನಿಮ್ಮನ್ನು ರಕ್ಷಿಸಲು ಇನ್ನಷ್ಟು ಮಾಡಬಹುದಿತ್ತು; ಗಾಯಗೊಂಡ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಅಭಿಜೀತ್ ದೀಪ್ಕೆ

ನಾಳೆ ಸಂಪುಟ ವಿಸ್ತರಣೆ ಬಹುತೇಕ ಫಿಕ್ಸ್?: ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಮೂವರು ನಾಯಕರು; Video

ಮೈಸೂರು: ಯುವತಿ ಅಪಹರಿಸಿ, ಲಾಡ್ಜ್‌ಗೆ ಕರೆದೊಯ್ದು ಗ್ಯಾಂಗ್ ರೇಪ್: ಮೂವರ ಬಂಧನ; ಆದ್ರೆ ಆರೋಪಿಗಳು ಹೇಳುವುದೇ ಬೇರೆ!

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗದಲ್ಲಿ ಸ್ಫೋಟ-ಭೂಕುಸಿತ; 10 ಕಾರ್ಮಿಕರ ಸಾವು, 27 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ..!

ಹಳಿ ತಪ್ಪಿದ ಗೂಡ್ಸ್ ರೈಲು; ಸಂಚಾರ ಭಾರೀ ಅಸ್ತವ್ಯಸ್ತ; 85ಕ್ಕೂ ಹೆಚ್ಚು ರೈಲುಗಳು ರದ್ದು, ಮಾರ್ಗ ಬದಲಾವಣೆ!