ಅರವಿಂದ್ ರೆಡ್ಡಿ - ಕೃಷಿ ತಾಪಂಡ 
ಸಿನಿಮಾ ಸುದ್ದಿ

'ನಾನು ಬದುಕಬೇಕು, ಸಾಯೋದಕ್ಕೆ ಇಷ್ಟ ಇಲ್ಲ': ಕೃಷಿ ತಾಪಂಡ ವಿಚಾರದಲ್ಲಿ ಮೌನ ಮುರಿದ ಅರವಿಂದ್ ರೆಡ್ಡಿ; ಶಾಕಿಂಗ್ ಹೇಳಿಕೆ

ಈ ಘಟನೆಗೂ ಕೆಲವು ತಿಂಗಳ ಹಿಂದೆ ಉದ್ಯಮಿ ಅರವಿಂದ್​ ರೆಡ್ಡಿ ಅವರು ನಟಿ ಕೃಷಿ ತಾಪಂಡ ಅವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.

ಬೆಂಗಳೂರು: ಇತ್ತೀಚಿಗೆ ನಟಿ ಹಾಗೂ ಬಿಗ್​​ಬಾಸ್​​ನ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರ ಆತ್ಮೀಯ ಗೆಳಯ, ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಈ ಘಟನೆಗೂ ಕೆಲವು ತಿಂಗಳ ಹಿಂದೆ ಉದ್ಯಮಿ ಅರವಿಂದ್​ ರೆಡ್ಡಿ ಅವರು ನಟಿ ಕೃಷಿ ತಾಪಂಡ ಅವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.

ಇದೀಗ ವೈಶಾಖ್ ಆತ್ಮಹತ್ಯೆ ಪ್ರಕರಣದ ನಂತರ ಮೊದಲ ಬಾರಿ ಮೌನ ಮುರಿದಿರುವ ಸ್ಯಾಂಡಲ್‌ವುಡ್ ನಿರ್ಮಾಪಕ ಅರವಿಂದ್ ರೆಡ್ಡಿ ಅವರು, ಈ ವಿಚಾರದಲ್ಲಿ ಇನ್ನು ಮುಂದೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ತಮ್ಮ ಹಾಗೂ ನಟಿ ಕೃಷಿ ತಾಪಂಡ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಕುರಿತ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ವೈರಲ್ ಆಗುತ್ತಿರುವ ವಿಡಿಯೋದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ರೆಡ್ಡಿ, ಕೃಷಿ ತಾಪಂಡ ನನ್ನ ಜೀವನಕ್ಕೆ ಬರೋದು ಬೇಡ. ನಾನು ಬದುಕಬೇಕು ಅಂತ ಇದ್ದೇನೆ, ಸಾಯೋದಕ್ಕೆ ಇಷ್ಟ ಇಲ್ಲ. ಈಗ ನಾನು ಬದುಕಿದ್ದೇ ನನಗೆ ಖುಷಿ. ಈ ವಿಷಯದ ಬಗ್ಗೆ ನಾನು ಯಾಕೆ ಮಾತಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಕೃಷಿ ತಾಪಂಡ ಯಾರು ಅಂತ ನನಗೆ ಗೊತ್ತೇ ಇಲ್ಲ. ಅವರನ್ನು ನಾನು ಮರೆತಿದ್ದೇನೆ. ಈ ಪ್ರಕರಣ ಈಗ ಕೋರ್ಟ್‌ನಲ್ಲಿದೆ. ಆದ್ದರಿಂದ ಈ ಬಗ್ಗೆ ನಾನು ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ

5 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರಿನ ಬಜಪೆ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!