ರಾಧಿಕಾ ಮತ್ತು ಯಶ್ 
ಸಿನಿಮಾ ಸುದ್ದಿ

ಸೆಲಿಬ್ರಿಟಿಗಳ ಮೆಚ್ಚಿನ ಪ್ರವಾಸಿ ತಾಣ ‘ಅಲಿಬಾಗ್’ ಬಳಿ ಬರೋಬ್ಬರೀ 24 ಕೋಟಿ ರು. ಮೌಲ್ಯದ ಆಸ್ತಿ ಖರೀದಿಸಿದ ಯಶ್- ರಾಧಿಕಾ

ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ‘ಕಿಹಿಮ್ ಬೀಚ್‘ ಪಕ್ಕದ ಕೃಷಿ ಭೂಮಿಯನ್ನು ಯಶ್ ಅವರು ಬರೋಬ್ಬರಿ 24 ಕೋಟಿ ರೂ ನೀಡಿ ಖರೀದಿಸಿದ್ದಾರೆ. ಈ ಭೂಮಿಗೆ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ 60 ಸಾವಿರ ರೂ. ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ.

ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿತಾಣ ಅಲಿಬಾಗ್‌. ಇಲ್ಲಿರುವ ‘ಕಿಹಿಮ್ ಬೀಚ್’ ಬಳಿ ರಾಕಿಂಗ್‌ ಸ್ಟಾರ್‌ ಯಶ್‌ ದಂಪತಿ ಜಮೀನು ಖರೀದಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ‘ಮನಿ ಕಂಟ್ರೋಲ್‌’ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಲಿಯಾಸೆಸ್ ಫೋರಾಸ್​ಗೆ ದೊರೆತ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರು ರಾಯಗಡ ಜಿಲ್ಲೆಯ ಅಲಿಬಾಗ್ ತಾಲೂಕಿನ ಕಾಮತ್ ಗ್ರಾಮದಲ್ಲಿ 24 ಕೋಟಿ ರೂ.ಗಳಿಗೆ ಎರಡು ಕೃಷಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ‘ಕಿಹಿಮ್ ಬೀಚ್‘ ಪಕ್ಕದ ಕೃಷಿ ಭೂಮಿಯನ್ನು ಯಶ್ ಅವರು ಬರೋಬ್ಬರಿ 24 ಕೋಟಿ ರೂ ನೀಡಿ ಖರೀದಿಸಿದ್ದಾರೆ. ಈ ಭೂಮಿಗೆ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ 60 ಸಾವಿರ ರೂ. ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಈ ಕೃಷಿ ಭೂಮಿ ಸುಮಾರು 5,289 ಚದರ ಮೀಟರ್ (1.306 ಎಕರೆ ) ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ತಿಯಲ್ಲಿ ಒಂದು ಮನೆ ಕೂಡ ಸೇರಿದೆ.

ಈಗಾಗಲೇ ಈ ಜಮೀನನ್ನು ಸೆಕ್ಷನ್ 7ರ ಅಡಿಯಲ್ಲಿ 'ಕೃಷಿ ಭೂಮಿ' ಎಂದು ನೋಂದಣಿ ಮಾಡಿಸಲಾಗಿದೆ ಎಂದು ವರದಿಯಾಗಿದೆ. ಇಲ್ಲಿ ಮನೆಯನ್ನು ಕೂಡಾ ಕಟ್ಟಬಹುದು. ಬಹಳಷ್ಟು ಸೆಲೆಬ್ರಿಟಿಗಳು ಅಲಿಭಾಗ್​ನಲ್ಲಿ ಕೃಷಿಭೂಮಿ ಹೊಂದಿದ್ದಾರೆ. ಕಿಹಿಮ್ ಬೀಚ್‌ಗೆ ಹೊಂದಿಕೊಂಡಿರುವ ಕರಾವಳಿ ಪ್ರದೇಶವಾದ ಇದು ಬೀಚ್ ತೀರದ ಜಾಗ ಎನ್ನಲಾಗಿದೆ. ಪೂರ್ವ ಭಾಗದಲ್ಲಿ ಹಳ್ಳಿಯ ರಸ್ತೆ ಮತ್ತು ಪಶ್ಚಿಮ ಭಾಗದಲ್ಲಿ ಸಮುದ್ರದಿಂದ ಸುತ್ತುವರೆದಿರುವುದರಿಂದ ಯಶ್ ಖರೀದಿ ಮಾಡಿರುವ ಈ ಆಸ್ತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದುಬಾರಿ ಮೌಲ್ಯವನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DK Shivakumar and cabinet swearing-in LIVE updates | ಡಿ.ಕೆ ಶಿವಕುಮಾರ್ ಪ್ರಮಾಣವಚನ: ಪರಮೇಶ್ವರ್ ಡಿಸಿಎಂ; 13 ಶಾಸಕರಿಗೆ ಮಂತ್ರಿಗಿರಿ

ನೂತನ ಸಿಎಂ ಆಗಿ DK Shivakumar ಪ್ರಮಾಣ ವಚನ: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ UT Khader ರಾಜೀನಾಮೆ

ಡಿಕೆ ಶಿವಕುಮಾರ್ ಪ್ರಮಾಣವಚನ: 13 ಶಾಸಕರಿಗೆ ಮಂತ್ರಿ ಸ್ಥಾನ, ಯಾರಿಗೆಲ್ಲಾ ಸಚಿವಗಿರಿ? ಇಲ್ಲಿದೆ ಪಟ್ಟಿ

ದೆಹಲಿ: ಲೆಮನ್‌ ಗ್ರೀನ್‌ ರೆಸ್ಟೋರೆಂಟ್‌ ನಲ್ಲಿ ಭಾರೀ ಅಗ್ನಿ ಅವಘಡ; ಹಲವು ವಿದೇಶಿ ಪ್ರವಾಸಿಗರು ಸೇರಿ 21 ಮಂದಿ ಸಜೀವ ದಹನ; ಪ್ರಧಾನಿ ಮೋದಿ ಸಂತಾಪ

ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್: ಏಕೈಕ ಡಿಸಿಎಂ ಆಗಿ ಜಿ ಪರಮೇಶ್ವರ ಆಯ್ಕೆ!

SCROLL FOR NEXT