ನಟಿ ತ್ರಿಷಾ ಹಾಗೂ ನಟ ವಿಜಯ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ: ನಟಿ ತ್ರಿಷಾ ಪೋಸ್ಟ್ ವೈರಲ್, ಏನಿದರ ಅರ್ಥ..?

ಪೋಸ್ಟ್‌ನಲ್ಲಿ ನಟಿ ತ್ರಿಷಾ ಅವರು ವ್ಯಕ್ತಪಡಿಸಿರುವ ಭಾವನೆಗಳನ್ನು ಅಭಿಮಾನಿಗಳು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದು, ಕೆಲವರು ಇದನ್ನು ಅವರ ವೈಯಕ್ತಿಕ ಬದುಕಿನ ವಿಚಾರಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್‌ ಭಾರೀ ವೈರಲ್ ಆಗಿದೆ.

ಹೃದಯಸ್ಪರ್ಶಿ ಸಾಲುಗಳನ್ನು ಒಳಗೊಂಡಿರುವ ಈ ಸಂದೇಶ ನೆಟ್ಟಿಗರ ಗಮನ ಸೆಳೆದಿದ್ದು, ವಿವಿಧ ರೀತಿಯ ಅರ್ಥಗಳಿಗೆ ಎಡೆಮಾಡಿಕೊಟ್ಟಿದೆ.

ಪೋಸ್ಟ್‌ನಲ್ಲಿ ನಟಿ ತ್ರಿಷಾ ಅವರು ವ್ಯಕ್ತಪಡಿಸಿರುವ ಭಾವನೆಗಳನ್ನು ಅಭಿಮಾನಿಗಳು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದು, ಕೆಲವರು ಇದನ್ನು ಅವರ ವೈಯಕ್ತಿಕ ಬದುಕಿನ ವಿಚಾರಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದರ ನಡುವೆ, ಅಭಿಮಾನಿಗಳು ತ್ರಿಷಾ ಅವರ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹಾಗೂ ಲೈಕ್‌ಗಳನ್ನು ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #Trisha ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ.

ಪೋಸ್ಟ್ ನಲ್ಲಿರುವುದೇನು..?

ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗಿದ್ದು, ತ್ರಿಷಾ ಅವರು ವಿಜಯ್​ ಉದ್ದೇಶಿಸಿಯೇ ಈ ಮಾತನ್ನು ಹೇಳಿದ್ದಾರೆಂದು ಪೋಸ್ಟ್'ನ್ನು ವೈರಲ್​ ಮಾಡಲಾಗುತ್ತಿದೆ. ಆದರೆ, ಈ ಸ್ಟೋರಿ ಅಸಲಿಯೋ? ನಕಲಿಯೋ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.

ಈ ನಡುವೆ ಕಳೆದ ವರ್ಷ ಮಾರ್ಚ್ 29 ರಂದು ನಟಿ ತ್ರಿಷಾ ಪ್ರೀತಿಯ ಬಗ್ಗೆ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್ ಕೂಡ ಇದೀಗ ವೈರಲ್ ಆಗಿದೆ.

ಆ ಪೋಸ್ಟ್‌ನಲ್ಲಿ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂದು ಉಲ್ಲೇಖಿಸಿದ್ದ ತ್ರಿಷಾ, ವಧುವಿನ ಅಲಂಕಾರದಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿ "ಅಲೈಪಾಯುಡೆ" ಚಿತ್ರದ "ಸೀಕ್ರೆಟ್ ಫ್ರೆಂಡ್" ಹಾಡನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು, ಓಹ್..ಆ ಸೀಕ್ರೆಟ್ ಫ್ರೆಂಡ್ ಯಾರೆಂದು ನನಗೆ ಈಗ ಅರ್ಥವಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಳೆಯ ಪೋಸ್ಟ್​ ಅನ್ನು ಪ್ರಸ್ತುತ ಪರಿಸ್ಥಿತಿಗೆ ಹೋಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು, ಭಯೋತ್ಪಾದಕ ಕೃತ್ಯ ಶಂಕೆ..!

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ದುಬೈನಲ್ಲಿ ಇರಾನ್ ಡಬಲ್ ಸ್ಟ್ರೈಕ್: US ಆರ್ಮಿ ಕಟ್ಟಡ, ಆಸ್ಟ್ರೇಲಿಯಾದ ವಾಯುನೆಲೆ ಮೇಲೆ ದಾಳಿ!

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

SCROLL FOR NEXT