ರಶ್ಮಿಕಾ-ವಿಜಯ್ ರಿಸೆಪ್ಷನ್ ನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿ  
ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಗ್ರ್ಯಾಂಡ್ ರಿಸೆಪ್ಷನ್: ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿ; Photos

ಮಾರ್ಚ್ 4ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನ ತಾಜ್ ಕೃಷ್ಣ ಹೊಟೇಲ್ ನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ.

ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕ ತೆಲುಗು ಮತ್ತು ಕೊಡವ ವಿಧಿವಿಧಾನಗಳೊಂದಿಗೆ ತೀರಾ ಖಾಸಗಿಯಾಗಿ ವಿವಾಹವಾದ ನಂತರ ಮಾರ್ಚ್ 4ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನ ತಾಜ್ ಕೃಷ್ಣ ಹೊಟೇಲ್ ನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ.

ಇಬ್ಬರ ಉಡುಗೆಗಳು ಅವರವರ ರಾಜ್ಯವನ್ನು ಪ್ರತಿನಿಧಿಸುತ್ತಿತ್ತು. ನಟಿ ರಶ್ಮಿಕಾ, ಮೈಸೂರು ರೇಷ್ಮೆ ಸೀರೆ ಧರಿಸಿದ್ದರೆ ವಿಜಯ್ ದೇವರಕೊಂಡ ತೆಲಂಗಾಣದ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿದ್ದರು.ವಿಜಯ್ ದೇವರಕೊಂಡ ಅವರು ಸಾಂಪ್ರದಾಯಿಕ ಸಿಲ್ವರ್ ಬಾರ್ಡರ್ ವೆಸ್ಟಿ ಮತ್ತು ವಿ ನೆಕ್ ಅರ್ಧ ತೋಳಿನ ಶರ್ಟ್ ಧರಿಸಿದ್ದರು. ರಶ್ಮಿಕಾ ಗಾಢ ಕೆಂಪು ಮೈಸೂರು ರೇಷ್ಮೆ ಸೀರೆಯನ್ನು ಧರಿಸಿದ್ದರು. ಬಾರ್ಡರ್ ನಲ್ಲಿ ಚಿನ್ನದ ಝರಿಯ ಕುಸುರಿಯಿತ್ತು.

ಹಲವು ಬಾಲಿವುಡ್-ಕಾಲಿವುಡ್ ತಾರೆಯರು ಆಗಮಿಸಿ ಸಮಾರಂಭಕ್ಕೆ ಮೆರುಗು ತುಂಬಿದರು.

ಕುರ್ತಾ ಧರಿಸಿ ಬಂದ ಅಲ್ಲು ಅರ್ಜುನ್ ಜೋಡಿಗೆ ಮನತುಂಬಿ ವಿಶ್ ಮಾಡಿ ಫೋಟೋಗೆ ಫೋಸ್ ಕೊಟ್ಟರು.

ಹೂಗುಚ್ಛದೊಂದಿಗೆ ಆಗಮಿಸಿದ ರಾಮ್ ಚರಣ್ ದಂಪತಿ, ಮಹೇಶ್ ಬಾಬು ಕುಟುಂಬ ಸಹ ಮನಸ್ಪೂರ್ತಿ ಹಾರೈಸಿದರು.

ರಾಜಕೀಯ ವಲಯದಿಂದ ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ತೆಲಂಗಾಣ ಮಾಜಿ ಸಚಿವ ಕೆ ಟಿ ರಾಮ ರಾವ್ ಹಾಜರಿದ್ದರು.

ಬಾಲಿವುಡ್‌ ನಿಂದ ಕರಣ್ ಜೋಹರ್, ಕೃತಿ ಸನೋನ್ ಕೂಡ ಹಾಜರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಂಡ ಕ್ಷಣಗಳು ವೈರಲ್ ಆಗಿದ್ದು, ರಶ್ಮಿಕಾ ವಿಜಯ್ ಅವರನ್ನು “ನನ್ನ ಗಂಡ” ಎಂದು ಕರೆಯುವ ದೃಶ್ಯಗಳಿಂದ ಹಿಡಿದು, ಪರಸ್ಪರ ಸಿಹಿ ತಿನ್ನಿಸುವ ಮಧುರ ಕ್ಷಣಗಳವರೆಗೆ ಎಲ್ಲವೂ ಗಮನ ಸೆಳೆದವು.

ರಶ್ಮಿಕಾ ಮಂದಣ್ಣ ಬಹುತೇಕ ತಾಯಿ ರೀತಿಯಲ್ಲೇ ಇದ್ದಾರೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು, ರಶ್ಮಿಕಾ ಅವರ ಸಹೋದರಿ ಶಿಮಾನ್ ಮಂದಣ್ಣ ಕೂಡ ಗಮನ ಸೆಳೆದರು.

ಕುಟುಂಬದ ಫೋಟೋ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಇಡೀ ಕುಟುಂಬ ಒಂದೇ ಕಡೆ ಸೇರಿತ್ತು. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!