ಅಲ್ಲು ಸಿರಿಶ್ ಮತ್ತು ನಯನಿಕಾ ಜೋಡಿ 
ಸಿನಿಮಾ ಸುದ್ದಿ

ಮತ್ತೊಂದು ಸೆಲೆಬ್ರಿಟಿ ಮದುವೆ: ಅಣ್ಣ ಅಲ್ಲು ಅರ್ಜುನ್ ವಿವಾಹ ದಿನದಂದೇ ನಯನಿಕಾ ಕೈ ಹಿಡಿದ ನಟ Allu Sirish

ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಮತ್ತು ಪ್ರಮುಖ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರರಾಗಿರುವ ಸಿರೀಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ತೆಲುಗು ನಟ ಅಲ್ಲು ಸಿರೀಶ್ ತಮ್ಮ ದೀರ್ಘಕಾಲದ ಗೆಳತಿ ನಯನಿಕಾ ರೆಡ್ಡಿ ಅವರನ್ನು ವಿವಾಹವಾದರು.

ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಮತ್ತು ಪ್ರಮುಖ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರರಾಗಿರುವ ಸಿರೀಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ಮದುವೆಯ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಅಣ್ಣನ ಮದುವೆ ದಿನವೇ ತಮ್ಮನ ಮದುವೆ

2011ರಲ್ಲಿ ಅರ್ಜುನ್ ಸ್ನೇಹಾ ರೆಡ್ಡಿ ಅವರನ್ನು ವಿವಾಹವಾದ ಅದೇ ದಿನಾಂಕದಂದು, ಮಾರ್ಚ್ 6 ರಂದು ಅಲ್ಲು ಸಿರಿಶ್ ಮತ್ತು ನಯನಿಕಾ ಜೋಡಿ ವಿವಾಹವಾದರು. ಸಿರೀಶ್ ಮತ್ತು ನಯನಿಕಾ 2023 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಅಕ್ಟೋಬರ್ 31, 2025 ರಂದು ನಿಶ್ಚಿತಾರ್ಥ ಮಾಡಿಕೊಂಡರು.

ವಿಶೇಷ ಉಡುಗೆ

ನಟ ಅಲ್ಲು ಸಿರಿಶ್ ದಂತದ ಶೇರ್ವಾನಿ ಧರಿಸಿದ್ದರು. ಅದು ಸಂಕೀರ್ಣವಾದ ಕಸೂತಿ ಕಲೆಗಳಿಂದ ಅಲಂಕರಿಸಲ್ಪಟ್ಟಿತು ಮತ್ತು ಅದಕ್ಕೆ ಹೊಂದಿಕೆಯಾಗುವ ಧೋತಿಯನ್ನು ಅವರು ಧರಿಸಿದ್ದರು.

ನಯನಿಕಾ ಚಿನ್ನದ ಮತ್ತು ಗುಲಾಬಿ ಛಾಯೆಗಳನ್ನು ಹೊಂದಿರುವ ತಿಳಿ ಸೀರೆಯನ್ನು ಧರಿಸಿದ್ದರು ಮತ್ತುಅಪರೂಪದ ವಿನ್ಯಾಸದ ಆಭರಣಗಳನ್ನುಧರಿಸಿದ್ದರು.

ಈ ಅದ್ಧೂರಿ ವಿವಾಹಕ್ಕೆ ನಟ ರಾಮ್ ಚರಣ್, ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ವರುಣ್ ತೇಜ್ ಸೇರಿದಂತೆ ಹಲವಾರು ನಟರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?