ಕನ್ನಡದ ನಟ ಡೈನಾಮಿಕ್ ಸ್ಟಾರ್ ದೇವರಾಜ್ ಕಿರಿಯ ಮಗ ನಟ ಪ್ರಣಮ್ ದೇವರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ನಮಿತಾ ಗೋಪಾಲ್ ಅವರನ್ನ ಪ್ರಣಮ್ ಮದುವೆ ಆಗಿದ್ದಾರೆ.
ಬೆಂಗಳೂರಿನಲ್ಲಿಯೇ ಪ್ರಣಮ್ ದೇವರಾಜ್ ಅವರ ಮದುವೆ ಅದ್ಧೂರಿ ಆಗಿ ನಡೆಯಿತು. ದೇವರಾಜ್ ಅವರ ಆತ್ಮೀಯ ಗೆಳೆಯನ ಮಗಳು ನಮಿತಾ ಗೋಪಾಲ್ ಅವರನ್ನು ದೇವರಾಜ್ ತಮ್ಮ ಮನೆಯ ಸೊಸೆಯನ್ನಾಗಿ ಮನೆ ತುಂಬಿಸಿಕೊಂಡಿದ್ದಾರೆ.
ಪ್ರಣಮ್ ಮದುವೆಗೆ ಕನ್ನಡ ಸಿನಿಮಾರಂಗದ ಹಲವು ಕಲಾವಿದರು ಆಗಮಿಸಿದ್ದರು. ಹಿರಿಯ ನಟ ದೊಡ್ಡಣ್ಣ, ನಟಿ ಪೂಜಾ ಗಾಂಧಿ, ಕೃಷಿ ತಾಪಂಡ ಸೇರಿದಂತೆ ಹಲವು ಕಲಾವಿದರು ದಂಪತಿಗೆ ಶುಭ ಹಾರೈಸಿದರು. ಪ್ರಣಮ್ ಮತ್ತು ನಮಿತಾ ಗೋಪಾಲ್ ಅವರ ನಿಶ್ಚಿತಾರ್ಥ ಆಗಸ್ಟ್-26ರಂದು ಅದ್ಧೂರಿಯಾಗಿ ನಡೆದಿತ್ತು.