ರಣಬೀರ್ ಕಪೂರ್ ಮತ್ತು ಸಲ್ಮಾನ್ ಖಾನ್ 
ಸಿನಿಮಾ ಸುದ್ದಿ

'4 ಸಾವಿರ ಕೋಟಿ ಬಜೆಟ್, VFX ಬದಿಗಿಡಿ, ರಾಮ-ಸೀತೆಯ ಬಗ್ಗೆ ಮಾತಾಡಿ: 'ಮಾತೃಭೂಮಿ' ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆಯಿದೆ'

ಸಿನಿಮಾಗೆ ಎಷ್ಟು ಕೋಟಿ ಖರ್ಚು ಮಾಡಿದೆ, ಗ್ರಾಫಿಕ್ಸ್ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ, ಕಥೆ ಮತ್ತು ಅದರಲ್ಲಿನ ರಾಮ-ಸೀತೆ-ರಾವಣನ ಪಾತ್ರಗಳು ಹಾಗೂ ಅವು ಸಾರುವ ಮೌಲ್ಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಲ್ಮಾನ್ ಸ್ಪಷ್ಟವಾಗಿ ಹೇಳಿದ್ದಾರೆ.

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದ ರೂ.4 ಸಾವಿರ ಕೋಟಿ ಬಜೆಟ್ ಹಾಗೂ ಭರ್ಜರಿ ವಿಎಫ್‌ಎಕ್ಸ್ (VFX) ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಬಾಲಿವುಡ್ ನಟ ಸಲ್ಮಾನ್ ಖಾನ್ ವಿಭಿನ್ನ ಹಾಗೂ ಮಹತ್ವದ ಅಭಿಪ್ರಾಯ ಹೊರಹಾಕಿದ್ದಾರೆ.

ಸಿನಿಮಾಗೆ ಎಷ್ಟು ಕೋಟಿ ಖರ್ಚು ಮಾಡಿದೆ, ಗ್ರಾಫಿಕ್ಸ್ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ, ಕಥೆ ಮತ್ತು ಅದರಲ್ಲಿನ ರಾಮ-ಸೀತೆ-ರಾವಣನ ಪಾತ್ರಗಳು ಹಾಗೂ ಅವು ಸಾರುವ ಮೌಲ್ಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಲ್ಮಾನ್ ಸ್ಪಷ್ಟವಾಗಿ ಹೇಳಿದ್ದಾರೆ.

ತಮ್ಮ ಮುಂಬರುವ ಚಿತ್ರ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ರಾಮಾಯಣದ ಚರ್ಚೆ ರಾಮಾಯಣದ ಮೇಲೆಯೇ ಆಗಬೇಕು ಹೊರತು ವಿಎಫ್‌ಎಕ್ಸ್ ಅಥವಾ 4 ಸಾವಿರ ಕೋಟಿ ಬಜೆಟ್ ಬಗ್ಗೆಯಲ್ಲ.

ರೂಪಾಯಿ 4 ಸಾವಿರ ಕೋಟಿ ವೆಚ್ಚ, ವಿಎಫ್‌ಎಕ್ಸ್… ವಿಎಫ್‌ಎಕ್ಸ್ ಅಂತಲೇ ಬಿಲ್ಡಪ್ ಕೊಡುವುದು ಸರಿಯಲ್ಲ ಎಂದೆನಿಸುತ್ತದೆ. ರಾಮ, ಸೀತೆ ಹಾಗೂ ರಾವಣನ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಶ್ರೀರಾಮನ ಗುಣಗಳನ್ನು ಸ್ಮರಿಸಿದ ಸಲ್ಮಾನ್ ಖಾನ್, ತಮ್ಮ ‘ಮಾತೃಭೂಮಿ’ ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆ ಮಾಡಿದ್ದಾರೆ. ‘ಶ್ರೀರಾಮನಲ್ಲಿ ಶ್ರೇಷ್ಠ ಪತಿ, ಶ್ರೇಷ್ಠ ಮಗ, ಶ್ರೇಷ್ಠ ಸಹೋದರ ಹಾಗೂ ಅತ್ಯುತ್ತಮ ಯೋಧನ ಗುಣಗಳಿದ್ದವು. ನನ್ನ ಮುಂಬರುವ ಸಿನಿಮಾದ ಪಾತ್ರದಲ್ಲೂ ಸಹ ಇಂತಹದೇ ಅದ್ಭುತ ಗುಣಗಳನ್ನು ಕಾಣಬಹುದು’ ಎಂದು ಸಲ್ಮಾನ್ ಖಾನ್ ವಿವರಿಸಿದ್ದಾರೆ.

ತಾಂತ್ರಿಕ ಆಡಂಬರಗಳ ನಡುವೆ ಮಹಾಕಾವ್ಯದ ಮೂಲ ಸತ್ವ ಕಳೆದುಹೋಗಬಾರದು ಎಂಬ ಸಲ್ಮಾನ್ ಖಾನ್ ಅವರ ಈ ನೇರ ನುಡಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಸೆಂಬರ್ 2 ಬೆಳಗಾವಿ ಅಧಿವೇಶನಕ್ಕೆ ಮುನ್ನ ಮಹಿಳೆಗೆ ಸಚಿವ ಸ್ಥಾನ: ಸಿಎಂ ಡಿಕೆ ಶಿವಕುಮಾರ್; Video

ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ! Video ಸಂದೇಶದಲ್ಲಿ ಹೇಳಿದ್ದು ಏನು?

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIRಗೆ ಸಂಬಂಧ ಚುನಾವಣಾ ಆಯೋಗ ಮಹತ್ವದ ಆದೇಶ!

ನಾಲ್ವರು IAS ಅಧಿಕಾರಿಗಳ ದಿಢೀರ್ ವರ್ಗಾವಣೆ: GBAಗೆ ವಿಶೇಷ ಆಯುಕ್ತರ ನೇಮಕ!

ಅತ್ಯುತ್ತಮ ಪ್ರತಿಕ್ರಿಯೆಗಳ ಬೆನ್ನಲ್ಲೇ ರಾಮಾಯಣಕ್ಕೆ ಭರ್ಜರಿ ರೆಸ್ಪಾನ್ಸ್: Bookmyshowನಲ್ಲೇ ಗಂಟೆಗೆ 80 ಸಾವಿರ ಟಿಕೆಟ್ ಮಾರಾಟ!