ರಜನಿಕಾಂತ್, ಎಂಕೆ ಸ್ಟಾಲಿನ್  
ಸಿನಿಮಾ ಸುದ್ದಿ

ಅನಿರುದ್ಧ್ ರವಿಚಂದರ್- ಕಾವ್ಯ ಮಾರನ್ ವಿವಾಹ: ಗ್ರೀಸ್‌ಗೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್, ಎಂಕೆ ಸ್ಟಾಲಿನ್! video

ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹಲವಾರು ಪ್ರಮುಖ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕರಾದ ಕಾವ್ಯ ಮಾರನ್ ಈ ವಾರ ಗ್ರೀಸ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.

ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹಲವಾರು ಪ್ರಮುಖ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತಿತರರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನೂ ಹಲವು ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಅನಿರುದ್ಧ್ ರವಿಚಂದರ್, ಕಾವ್ಯ ಮಾರನ್ ವಿವಾಹದ ವಿವರಗಳು: ಅನಿರುದ್ಧ್ ರವಿಚಂದರ್ ಮತ್ತುಐಪಿಎಲ್ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಮತ್ತು ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಕಾವ್ಯ ಅವರು ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ವಿವಾಹವಾಗಲಿದ್ದಾರೆ. ನಂತರ ನವೆಂಬರ್ 21 ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.

ಚೆನ್ನೈ ಆರತಕ್ಷತೆಯ ದಿನಾಂಕವನ್ನು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಅಕ್ಟೋಬರ್‌ನಲ್ಲಿ ದೃಢಪಡಿಸಿತ್ತು. ಕಾವ್ಯಾಳ ಪೋಷಕರಾದ ಕಲಾನಿಧಿ ಮತ್ತು ಕಾವೇರಿ ಮಾರನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ, ಅವರನ್ನು ವೈಯಕ್ತಿಕವಾಗಿ ಆರತಕ್ಷತೆಗೆ ಆಹ್ವಾನಿಸಿದ್ದರು.

ಆರತಕ್ಷತೆಯಲ್ಲಿ ಮನರಂಜನೆ, ಕ್ರಿಕೆಟ್, ವ್ಯವಹಾರ ಮತ್ತು ರಾಜಕೀಯ ಜಗತ್ತಿನ ಹಲವಾರು ಪ್ರಮುಖ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಹಲವಾರು ಪ್ರಮುಖ ಸೆಲೆಬ್ರಿಟಿಗಳನ್ನು ರಿಸೆಪ್ಷನ್ ಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!

ಕರ್ನಾಟಕದ ಬೆನ್ನಲ್ಲೇ ಕೇರಳದಲ್ಲೂ ಪೆಟ್ರೋಲ್ ಪರೀಕ್ಷೆ; ಎಥೆನಾಲ್ ಪ್ರಮಾಣ ಪತ್ತೆಗೆ ದಿಢೀರ್ ದಾಳಿ! ತನಿಖೆ ಆರಂಭ

ರಜನಿಕಾಂತ್‌ ಸ್ಟೈಲ್​ನಲ್ಲೇ ದೀಪಾವಳಿ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ! Video ವೈರಲ್

ದೀಪಾವಳಿ ಸಂಭ್ರಮದ ನಡುವೆ ಸೂತಕ: ಕೈಯಲ್ಲೇ ರಾಕೆಟ್ ಸ್ಫೋಟ, 10 ವರ್ಷದ ಬಾಲಕ ಸಾವು!

ಚೀನಾ 'Spy' ಜೊತೆಗಿನ ಪ್ರೇಮ ಪ್ರಕರಣ ಒಪ್ಪಿಕೊಂಡ Nvidia ಸಿಇಒ! ಕುಟುಂಬ ಹಾಗೂ ಉದ್ಯೋಗಿಗಳ ಕ್ಷಮೆ ಕೋರಿದ AI ದಿಗ್ಗಜ ಜೆಂಸೆನ್ ಹುವಾಂಗ್; ಅಮೆರಿಕದಲ್ಲಿ ತೀವ್ರ ಸಂಚಲನ