ಪುರುಷೋತ್ತಮ್ ಕೈಬಿಟ್ಟ ಹಿನ್ನೆಲೆ ಬಿಚ್ಚಿಟ್ಟ ಪ್ರಿಯಾಂಕಾ ಉಪೇಂದ್ರ Online Desk
ಸಿನಿಮಾ ಸುದ್ದಿ

ಉಪೇಂದ್ರ ಪುತ್ರನ ಮೊದಲ ಸಿನಿಮಾದಿಂದ ನಿರ್ದೇಶಕ ಔಟ್: ಪುರುಷೋತ್ತಮ್ ಕೈಬಿಟ್ಟ ಹಿನ್ನೆಲೆ ಬಿಚ್ಚಿಟ್ಟ ಪ್ರಿಯಾಂಕಾ ಉಪೇಂದ್ರ; ಹೇಳಿದ್ದೇನು?

ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಆಯುಷ್ ಸಿನಿಮಾದಿಂದ ಮೊದಲ ಸಲ ಚಿತ್ರ ಖ್ಯಾತಿಯ ನಿರ್ದೇಶಕ ಪುರುಷೋತ್ತಮ್ ಅವರನ್ನು ಅರ್ಧದಲ್ಲೇ ಕೈಬಿಟ್ಟಿರುವುದು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮೊದಲ ಸಿನಿಮಾದಿಂದ ಮೊದಲ ಸಲ ಚಿತ್ರ ಖ್ಯಾತಿಯ ನಿರ್ದೇಶಕ ಪುರುಷೋತ್ತಮ್ ಅವರನ್ನು ಅರ್ಧದಲ್ಲೇ ಕೈಬಿಟ್ಟಿರುವುದು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಚಿತ್ರದ ಶೇ. 50ರಷ್ಟು ಶೂಟಿಂಗ್ ಮುಗಿದ ನಂತರ ನಿರ್ದೇಶಕರನ್ನು ಬದಲಾಯಿಸಲಾಗಿದ್ದು, ಈ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಿರ್ದೇಶಕರನ್ನು ಬದಲಾಯಿಸಲು ಕಾರಣವೇನು?

ಪ್ರಿಯಾಂಕಾ ಉಪೇಂದ್ರ ಅವರು ಸ್ಪಷ್ಟಪಡಿಸಿರುವ ಪ್ರಕಾರ, ಸಿನಿಮಾವನ್ನು ಉತ್ತಮವಾಗಿ ರಕ್ಷಿಸಲು, ತಮ್ಮ ಮಗನ ಚೊಚ್ಚಲ ಚಿತ್ರದ ವೃತ್ತಿಜೀವನವನ್ನು ಕಾಪಾಡಲು, ನಿರ್ಮಾಪಕರ ಹೂಡಿಕೆಯನ್ನು ಸಂರಕ್ಷಿಸಲು ಹಾಗೂ ಚಿತ್ರದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ಕಠಿಣ ನಿರ್ಧಾರವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ, ಆರಂಭದಲ್ಲಿ ಕಾಶ್ಮೀರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ನಡೆದಿತ್ತು. ಆದರೆ ಆ ಬಳಿಕ ದಿನಕಳೆದಂತೆ ನಿರ್ದೇಶಕರಲ್ಲಿ ಸೃಜನಾತ್ಮಕತೆ ಕೊರತೆ ಎದ್ದು ಕಾಣತೊಡಗಿತು. ಅವರಲ್ಲಿ ಚಿತ್ರದ ಬಗ್ಗೆ ಇದ್ದ ಉತ್ಸಾಹ ಮತ್ತು ಬದ್ಧತೆ ಕಡಿಮೆಯಾಗಿತ್ತು ಎಂದು ಆರೋಪಿಸಿರುವ ಪ್ರಿಯಾಂಕಾ ಉಪೇಂದ್ರ, ಚಿತ್ರೀಕರಣದ ದೃಶ್ಯಗಳು ನಿರೀಕ್ಷಿತ ಮಟ್ಟದಲ್ಲಿ ಬಾರದ ಹಿನ್ನೆಲೆಯಲ್ಲಿ, ನಷ್ಟವನ್ನು ತಪ್ಪಿಸಲು ಸ್ವತಃ ನಿರ್ಮಾಪಕರೇ ನಿರ್ದೇಶಕರನ್ನು ಬದಲಾಯಿಸಲು ನಿರ್ಧರಿಸಿದರು ಎಂದರು.

ನಿರ್ದೇಶಕ ಪುರುಷೋತ್ತಮ್ ಅವರ ಅಳಲೇನು?

ಮತ್ತೊಂದೆಡೆ, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವ ನಿರ್ದೇಶಕ ಪುರುಷೋತ್ತಮ್, ಸುಮಾರು ಒಂದೂವರೆ ವರ್ಷಗಳ ಕಾಲ ಈ ಕಥೆಯ ಮೇಲೆ ಕೆಲಸ ಮಾಡಿದ್ದೇನೆ. ಅರ್ಧ ಸಿನಿಮಾ ಮುಗಿದ ನಂತರ ಯಾವುದೇ ಸರಿಯಾದ ಕಾರಣ ನೀಡದೆ ನನ್ನನ್ನು ಹೊರಹಾಕಿದ್ದಾರೆ. ನನ್ನ ಕಥೆ ಮತ್ತು ನಾನು ಚಿತ್ರೀಕರಿಸಿದ ದೃಶ್ಯಗಳನ್ನು ಅವರು ಬಳಸಬಾರದು ಮತ್ತು ನನ್ನ ಕೆಲಸಕ್ಕೆ ತಕ್ಕ ಸಂಭಾವನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಚಿತ್ರದಿಂದ ತಮ್ಮನ್ನು ಮತ್ತು ಸಿನಿಮಾಟೋಗ್ರಾಫರ್ ವೇಣು (ನಟಿ ತಾರಾ ಪತಿ) ಅವರನ್ನು ಕೈಬಿಡಲಾಗಿದ್ದು, ತಾವು ಮಾಡಿದ ಕೆಲಸಕ್ಕೆ ಸರಿಯಾದ ಸಂಭಾವನೆ ನೀಡಬೇಕು ಹಾಗೂ ತಮ್ಮ ಕಥೆಯನ್ನು ಬಳಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಸದ್ಯ ಈ ವಿವಾದವು ಫಿಲ್ಮ್ ಚೇಂಬರ್ ತಲುಪಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ 'Spy' ಜೊತೆಗಿನ ಪ್ರೇಮ ಪ್ರಕರಣ ಒಪ್ಪಿಕೊಂಡ Nvidia ಸಿಇಒ! ಕುಟುಂಬ ಹಾಗೂ ಉದ್ಯೋಗಿಗಳ ಕ್ಷಮೆ ಕೋರಿದ AI ದಿಗ್ಗಜ ಜೆಂಸೆನ್ ಹುವಾಂಗ್; ಅಮೆರಿಕದಲ್ಲಿ ತೀವ್ರ ಸಂಚಲನ

ದೆಹಲಿಯಲ್ಲಿ ವಿಷಗಾಳಿಯ ಪ್ರಕೋಪ: ಅಪಾಯಕಾರಿ ಮಟ್ಟಕ್ಕೆ ತಲುಪಿದ ವಾಯುಮಾಲಿನ್ಯ; 1,331ಕ್ಕೆ ಏರಿದ AQI, ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ಸೀತೆ vs ಸೀತೆ: '300 Ramayana ಆವೃತ್ತಿ' 'ರಾಕ್ಷಸರ ವಿರುದ್ಧ ಕತ್ತಿ ಹಿಡಿದು ಹೋರಾಡಿದ್ದು ನೆನಪಿಲ್ಲ'; ಸಾಯಿ ಪಲ್ಲವಿ ಕುರಿತು ದೀಪಿಕಾ ಚಿಖ್ಲಿಯಾ ಹೇಳಿಕೆ

ಅಮಾವಾಸ್ಯೆ ರಾತ್ರಿ ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕಾರಿಗೆ ಬೆಂಕಿ ಹೊತ್ತು 6 ಮಂದಿ ಸಜೀವ ದಹನ!

12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ-ಕೊಲೆ; ಆರೋಪಿ ಪೊಲೀಸ್ ಎನ್ಕೌಂಟರ್ ನಲ್ಲಿ ಹತ!