ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ನಟನೆಯ 2 ಹೊಸ ಸಿನಿಮಾ ಘೋಷಣೆ Online Desk
ಸಿನಿಮಾ ಸುದ್ದಿ

ಮಾಸ್ ಇಮೇಜ್ ಬಿಟ್ಟು ಕ್ಲಾಸ್ ಅವತಾರಕ್ಕೆ ಆ್ಯಕ್ಷನ್ ಪ್ರಿನ್ಸ್: ನಭಾ ಜೊತೆ 'ಕೆಮಿಸ್ಟ್ರಿ', ನಂದಕಿಶೋರ್ ಜೊತೆ 'ವಸುದೈವ ಕುಟುಂಬಕಂ' ಘೋಷಣೆ

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರ ಬಹುನಿರೀಕ್ಷಿತ 'ವಸುದೈವ ಕುಟುಂಬಕಂ' ಮತ್ತು ನಟಿ ನಭಾ ನಟೇಶ್ ಜೊತೆಗಿನ 'ಕೆಮಿಸ್ಟ್ರಿ' ಎಂಬ ಎರಡೆರಡು ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿವೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರ ಬಹುನಿರೀಕ್ಷಿತ 'ವಸುದೈವ ಕುಟುಂಬಕಂ' ಮತ್ತು ನಟಿ ನಭಾ ನಟೇಶ್ ಜೊತೆಗಿನ 'ಕೆಮಿಸ್ಟ್ರಿ' ಎಂಬ ಎರಡೆರಡು ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿವೆ. ಇದುವರೆಗೆ ಮಾಸ್ ಆ್ಯಕ್ಷನ್ ಹಾಗೂ ಭರ್ಜರಿ ಡೈಲಾಗ್‌ಗಳ ಮೂಲಕವೇ ಸೌಂಡ್ ಮಾಡಿದ್ದ ಧ್ರುವ ಸರ್ಜಾ, ಈ ಬಾರಿ ತಮ್ಮ ಎಂದಿನ ಮಾಸ್ ಇಮೇಜ್‌ನಿಂದ ಹೊರಬಂದು ಕೌಟುಂಬಿಕ ಹಾಗೂ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಆ ಕುರಿತ ವರದಿ ಇಲ್ಲಿದೆ:

ನಭಾ ಜೊತೆ ಧ್ರುವ ಕೆಮಿಸ್ಟ್ರಿ

ಡೈಲಾಗ್‌‌ಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ಧ್ರುವ ಸರ್ಜಾ. ಆದರೆ ಈ ಬಾರಿ ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಲು ಆ್ಯಕ್ಷನ್ ಪ್ರಿನ್ಸ್ ಸಜ್ಜಾಗಿದ್ದಾರೆ. ಇದುವರೆಗೂ ಬಿಡುಗಡೆಯಾದ ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳು ಮತ್ತು ಮಾಸ್ ಅಂಶಗಳೇ ಪ್ರಮುಖವಾಗಿದ್ದವು. ಆದರೆ ತಮ್ಮ ಮುಂಬರುವ ಕೆಮಿಸ್ಟ್ರಿ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ, ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನ 'ಪಟಾಕ ಹುಡುಗಿ' ನಭಾ ನಟೇಶ್ ದೀರ್ಘಕಾಲದ ಬಳಿಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡುತ್ತಿದ್ದಾರೆ. ವಿಶೇಷವೆಂದರೆ, ಧ್ರುವ ಸರ್ಜಾ ಮತ್ತು ನಭಾ ನಟೇಶ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಇವರ ರೋಮ್ಯಾಂಟಿಕ್ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.

ಮುಂದುವರೆದು, ತತ್ಸಮ ತದ್ಭವ ಸಿನಿಮಾ ಮೂಲಕ ಗಮನ ಸೆಳೆದಿದ್ದ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಪ್ರೊಡಕ್ಷನ್ ಹೌಸ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ವಸುದೈವ ಕುಟುಂಬಕಂಗಾಗಿ ಒಂದಾದ ಪೊಗರು ಜೋಡಿ

ಕೆಮಿಸ್ಟ್ರಿಜೊತೆಗೆ ಧ್ರುವ ಸರ್ಜಾ ಅವರ ವಸುದೈವ ಕುಟುಂಬಕಂ ಎಂಬ ಮತ್ತೊಂದು ಚಿತ್ರ ಸಹ ಘೋಷಣೆಯಾಗಿದೆ. ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರವು ಹಳ್ಳಿ ಸೊಗಡಿನ ಹಿನ್ನೆಲೆಯನ್ನು ಹೊಂದಿರಲಿದ್ದು, ಕೌಟುಂಬಿಕ ಮೌಲ್ಯಗಳು, ಭಾವನೆಗಳು ಮತ್ತು ಸಂಬಂಧಗಳ ಸುತ್ತ ಸಾಗುವ ತೂಕದ ಕಥೆಯನ್ನು ಒಳಗೊಂಡಿದೆ. ಇದರಲ್ಲಿ ಧ್ರುವ ಸರ್ಜಾ ಮತ್ತೊಂದು ವಿಭಿನ್ನ ಹಾಗೂ ಪವರ್‌ಫುಲ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಸಿನಿಮಾವನ್ನ ಪೊಗರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ನಂದಕಿಶೋರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!