ಶ್ರೀದೇವಿ ಭೈರಪ್ಪ - ಯುವ ರಾಜ್‌ಕುಮಾರ್ 
ಸಿನಿಮಾ ಸುದ್ದಿ

'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!

ತಾವು ಹಂಚಿಕೊಂಡಿರುವ ಎಲ್ಲ ಫೋಟೊಗಳನ್ನು ತಮ್ಮ ಗಂಡ ಯುವ ರಾಜ್‌ಕುಮಾರ್ ಅವರು ತಮ್ಮ ಫೋನಿನಲ್ಲಿ ಕ್ಲಿಕ್ಕಿಸಿದ್ದು ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ನಟ ಯುವ ರಾಜ್​ಕುಮಾರ್ ಅವರ ವಿಚ್ಛೇದನದ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನಕ್ಕೆ ಯುವ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆ ನಡೆಯುತ್ತಿದೆ. ಸದ್ಯ ವಿದೇಶದಲ್ಲಿರುವ ಶ್ರೀದೇವಿ ಭೈರಪ್ಪ ಅವರು ಅಲ್ಲಿಂದಲೇ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

ಶ್ರೀದೇವಿ ಭೈರಪ್ಪ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗಷ್ಟೇ ಹಾಕಿರುವ ಪೋಸ್ಟ್‌ವೊಂದು ಇದೀಗ ಕುತೂಹಲ ಮೂಡಿಸಿದೆ. ತಮ್ಮದೇ ಫೋಟೊಗಳನ್ನು ಹಂಚಿಕೊಂಡಿರುವ ಅವರು ಫೋಟೊ ತೆಗೆದವರು 'ಡಿಯರ್ ಹಸ್ಬೆಂಡ್' ಎಂದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

'ಅವನ ಫೋನ್‌ನಲ್ಲಿ ನನ್ನ ಇಂತಹ ಸಾವಿರಾರು ಫೋಟೊಗಳಿದ್ದವು; ಅವುಗಳನ್ನು ನೋಡಿ ನಾನೇನೋ ತುಂಬಾ 'ಸ್ಪೆಷಲ್' ಎಂದುಕೊಂಡಿದ್ದೆ. ಆದರೆ, ಒಂದು ದಿನ ಅವನ ಗ್ಯಾಲರಿಯಲ್ಲಿ ಮತ್ತೊಬ್ಬ ಹುಡುಗಿಯ ಇದೇ ರೀತಿಯ ಫೋಟೊಗಳನ್ನು ನೋಡುವವರೆಗೂ ಮಾತ್ರ ಆ ನಂಬಿಕೆ ಇತ್ತು! ಎಂದು ಬರೆದಿದ್ದಾರೆ.

ಮುಂದುವರಿದು, 'ನಾನು ಆಕೆಗೆ ಇಷ್ಟನ್ನು ಹೇಳಲು ಬಯಸುತ್ತೇನೆ: 'ನೀನು ಕೂಡ ಸ್ಪೆಷಲ್ ಏನೂ ಅಲ್ಲ'. ಆ ಫೋಟೊಗಳ ಮೇಲೆ ದೃಷ್ಟಿಬೊಟ್ಟಿಟ್ಟು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನವಿಲ್ಲ. ಅಷ್ಟೇ' ಎಂದು ಶ್ರೀದೇವಿ ಬರೆದಿದ್ದಾರೆ.

ತಾವು ಹಂಚಿಕೊಂಡಿರುವ ಎಲ್ಲ ಫೋಟೊಗಳನ್ನು ತಮ್ಮ ಗಂಡ ಯುವ ರಾಜ್‌ಕುಮಾರ್ ಅವರು ತಮ್ಮ ಫೋನಿನಲ್ಲಿ ಕ್ಲಿಕ್ಕಿಸಿದ್ದು ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.

ಶ್ರೀದೇವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವಾರು ನೆಟ್ಟಿಗರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 'ನೀವು 'ಅಬ್ಸೆಷನ್' (Obsession) ಅನ್ನು ನೋಡಿ ಅದನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಬೇಕಿತ್ತು, ಆದರೆ ನೀವು ಅದನ್ನು ಅತಿಯಾಗಿ ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕಾಗಿಯೇ ನಿಮಗೆ ಯುವ ಬಗ್ಗೆ ಅತಿಯಾದ ಪ್ರೀತಿ ಇರುವುದು' ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಅಪ್ಪು ಸರ್ ಇದ್ದಿದ್ರೆ ನಿಮ್ಮ ಜೊತೆ ನಿಲ್ಲುತ್ತಿದ್ದರು ಅಲ್ವಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀದೇವಿ, 100000 ಪರ್ಸೆಂಟ್ ಎಂದು ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ.

ಅವರಿನ್ನೂ ಆಕೆಯೊಂದಿಗೆ ಅಫೇರ್ ಹೊಂದಿದ್ದಾರೆಯೇ ಎಂದು ಕೇಳಿದ್ದಕ್ಕೆ, ಯೆಸ್ ಎಂದು ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!