ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ 'ಪ್ರೇಮದ ಊರಲಿ' ಸಿನಿಮಾ ನಾಡಿನಾದ್ಯಂತ ಭರ್ಜರಿ 25 ನೇ ದಿನವನ್ನು ಪೂರ್ಣಗೊಳಿಸಿದ್ದು, 100 ಕೋಟಿ ರೂ ಕಲೆಕ್ಷನ್ ನತ್ತ ದಾಪುಗಾಲು ಹಾಕಿದೆ.
ಹಳ್ಳಿ ಸೊಗಡು, ಕೌಟುಂಬಿಕ ಕಥಾ ಹಂದರದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬೆಂಬಲಕ್ಕೆ ಚಂದನವನದ ಸ್ಟಾರ್ ನಟರು ಕೂಡಾ ಫಿದಾ ಆಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ನಟರಾದ ರಮೇಶ್ ಅರವಿಂದ್, ನಟಿಯರಾದ ರಚಿತಾ ರಾಮ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಮಂದಿ ಸಿನಿಮಾ ಮತ್ತು ತಂಡವನ್ನು ಶ್ಲಾಘಿಸಿದ್ದಾರೆ. ಈಗ ಚಿತ್ರತಂಡ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದೆ.
ಶ್ರೀಮುತ್ತು ನಿವಾಸದಲ್ಲಿ ಚಿತ್ರದ ನಿರ್ದೇಶಕ ಮನೋಜ್ ಕುಮಾರ್,ನಟಿಯರಾದ ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಮತ್ತಿತರರು ಶಿವಣ್ಣನನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ನಟ ಶ್ರೀರಾಮ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಮುತ್ತಣ್ಣನ ಸಿಹಿ ಮುತ್ತು ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ, ಡಾ. ಶಿವರಾಜ್ ಕುಮಾರ್ ಸರ್ ಅವರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಪಡೆದಿರುವುದು ನನಗೆ ಗೌರವ ಮತ್ತು ಭಾಗ್ಯದ ವಿಷಯ. ಧನ್ಯವಾದಗಳು ಶಿವಣ್ಣ ಎಂದಿದ್ದಾರೆ.