ರಾಮಾಯಣ ಪೋಸ್ಟರ್ 
ಸಿನಿಮಾ ಸುದ್ದಿ

'ರಾಮಾಯಣ' ಮುಂಗಡ ಬುಕಿಂಗ್: ಅಮೆರಿಕದಲ್ಲಿ ಉತ್ತಮ ಪ್ರತಿಕ್ರಿಯೆ; ವಿದೇಶಗಳಲ್ಲಿ 2.58 ಮಿಲಿಯನ್ ಡಾಲರ್ ದಾಟಿದ ಗಳಿಕೆ!

ರಣಬೀರ್ ಕಪೂರ್, ಯಶ್ ನಟನೆಯ 'ರಾಮಾಯಣ' ಚಿತ್ರ ದೀಪಾವಳಿ ಪ್ರಯುಕ್ತ ನವೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಸುಮಾರು 16 ದಿನಗಳ ಮೊದಲು ತಯಾರಕರು ಮುಂಗಡ ಬುಕಿಂಗ್‌ಗಾಗಿ ಅನುವು ಮಾಡಿಕೊಟ್ಟಿದ್ದರು...

ರಣಬೀರ್ ಕಪೂರ್, ಯಶ್ ನಟನೆಯ 'ರಾಮಾಯಣ' ಚಿತ್ರ ದೀಪಾವಳಿ ಪ್ರಯುಕ್ತ ನವೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಸುಮಾರು 16 ದಿನಗಳ ಮೊದಲು ತಯಾರಕರು ಮುಂಗಡ ಬುಕಿಂಗ್‌ಗಾಗಿ ಅನುವು ಮಾಡಿಕೊಟ್ಟಿದ್ದರು. ದಸರಾದಂತಹ ಪ್ರಮುಖ ದಿನವನ್ನು ಪೂರ್ವ-ಬಿಡುಗಡೆಗೆ ಆಯ್ಕೆ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಅಕ್ಟೋಬರ್ 27ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ರಾಮಾಯಣ ಚಲನಚಿತ್ರದ ವಿಶ್ವ ಪ್ರಥಮ ಪ್ರದರ್ಶನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಆಹ್ವಾನಿತರಿಗೆ ಮಾತ್ರ 3D ಪ್ರದರ್ಶನವು ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿರುವ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ನಡೆಯಿತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಥಮ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಚಿತ್ರವನ್ನು ನೋಡಿದ ಪ್ರಥಮ ಪ್ರೇಕಕ್ಷರು ದೃಶ್ಯಗಳು, ಆಕ್ಷನ್ ಮತ್ತು ನಿರ್ಮಾಣ ವಿನ್ಯಾಸವನ್ನು ಶ್ಲಾಘಿಸಿದರು. ಕೆಲವರು DNEG ಯ ದೃಶ್ಯ ಪರಿಣಾಮಗಳನ್ನು ಹೈಲೈಟ್ ಮಾಡಿದ್ದು ದಿ ಲಾರ್ಡ್ ಆಫ್ ದಿ ರಿಂಗ್ಸ್‌ಗೆ ಹೋಲಿಸಿದರು.

ದೇಶೀಯ ಮುಂಗಡ ಬುಕಿಂಗ್

ರಾಮಾಯಣದ ಮುಂಗಡ ಬುಕಿಂಗ್‌ಗಳು ಅದರ ಮೊದಲ ಮೂರು ದಿನ 14.94 ಕೋಟಿಗೆ ತಲುಪಿದೆ. ಫಿಲ್ಮ್ಸ್ ಡಿಸ್ಕೋರ್ಸ್ ಈ ಅಂಕಿಅಂಶಗಳನ್ನು ಅಕ್ಟೋಬರ್ 28ರಂದು ಬೆಳಿಗ್ಗೆ 11:17ಕ್ಕೆ ದಾಖಲಿಸಿತು. ಒಟ್ಟು ಬ್ಲಾಕ್ ಮಾಡಿದ ಸೀಟುಗಳನ್ನು ಹೊರತುಪಡಿಸಿ ನವೆಂಬರ್ 5, 6 ಮತ್ತು 7 ರಂದು ಒಟ್ಟು ಟಿಕೆಟ್ ಮಾರಾಟವಾಗಿದೆ. 183 ನಗರಗಳಲ್ಲಿ 15,239 ಪ್ರದರ್ಶನಗಳಲ್ಲಿ 2,60,173 ಟಿಕೆಟ್ ಮಾರಾಟವಾಗಿದೆ. ಟ್ರ್ಯಾಕ್ ಮಾಡಿದ ಪ್ರದರ್ಶನಗಳು 8.8% ಭರ್ತಿಯಾಗಿದ್ದು, ಸರಾಸರಿ ಟಿಕೆಟ್ ಬೆಲೆ ₹574. ಬ್ಲಾಕ್ ಮಾಡಿದ ಸೀಟುಗಳನ್ನು ಒಳಗೊಂಡಂತೆ, ಒಟ್ಟು ಮೊತ್ತ 26.84 ಕೋಟಿ. ಬ್ಲಾಕ್ ಮಾಡಿದ ಸೀಟುಗಳನ್ನು ಹೊರತುಪಡಿಸಿ ನಿವ್ವಳ ಸಂಗ್ರಹ 12.63 ಕೋಟಿ ತಲುಪಿದೆ.

ದೆಹಲಿ-ಎನ್‌ಸಿಆರ್ ನಗರ ಬುಕಿಂಗ್‌ನಲ್ಲಿ 33,612 ಟಿಕೆಟ್‌ ಮಾರಾಟವಾಗಿದ್ದು 2.55 ಕೋಟಿ ಗಳಿಸಿದೆ. ಮುಂಬೈ ನಂತರ 2.33 ಕೋಟಿ ಮೌಲ್ಯದ 31,732 ಟಿಕೆಟ್‌ಗಳು ಬುಕ್ ಆಗಿದೆ. ಬೆಂಗಳೂರು 23,485 ಟಿಕೆಟ್‌ಗಳನ್ನು ದಾಖಲಿಸಿದ್ದು, 1.96 ಕೋಟಿ ಗಳಿಸಿದೆ. ಹೈದರಾಬಾದ್ 74.90 ಲಕ್ಷ ಮೌಲ್ಯದ 20,637 ಟಿಕೆಟ್‌ಗಳು ಮಾರಾಟವಾಗಿದ್ದು, 41.3% ಪ್ರದರ್ಶನಗಳು ಭರ್ತಿಯಾಗಿವೆ. ಮಹಾರಾಷ್ಟ್ರವು 54,466 ಟಿಕೆಟ್‌ಗಳೊಂದಿಗೆ ಮುಂಚೂಣಿಯಲ್ಲಿದೆ, ನಂತರ ಕರ್ನಾಟಕವು 36,034 ಟಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪುಣೆಯಲ್ಲಿ 88.43 ಲಕ್ಷ ಮೌಲ್ಯದ 13,019 ಟಿಕೆಟ್‌ಗಳು ಮಾರಾಟವಾದರೆ, ಕೋಲ್ಕತ್ತಾದಲ್ಲಿ 64.02 ಲಕ್ಷ ಮೌಲ್ಯದ 12,455 ಟಿಕೆಟ್‌ಗಳು ಮಾರಾಟವಾಗಿವೆ.

PVR, INOX ಮತ್ತು ಸಿನಿಪೋಲಿಸ್ (Cinepolis) ಒಟ್ಟಾಗಿ 2,62,744 ಟಿಕೆಟ್‌ಗಳನ್ನು ಮಾರಾಟ ಮಾಡಿವೆ, ಇದು ಒಟ್ಟು ಮಾರಾಟದ 77% ರಷ್ಟಿದೆ. ಇವುಗಳ ಒಟ್ಟು ಗಳಿಕೆಯು ₹12.56 ಕೋಟಿ (ಒಟ್ಟು ಮೊತ್ತ/gross) ಮತ್ತು ₹10.62 ಕೋಟಿ (ನಿವ್ವಳ ಮೊತ್ತ/net) ತಲುಪಿದೆ. 'ರಾಮಾಯಣ' ಚಲನಚಿತ್ರಕ್ಕೆ ವಿದೇಶಗಳಲ್ಲಿ 1,38,986 ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದ್ದು, ಇದರ ಮೌಲ್ಯ $2.58 ಮಿಲಿಯನ್ (₹24.5 ಕೋಟಿ) ಆಗಿದೆ. ಹಿಂದಿನ ವರದಿಯ ನಂತರ ಈ ಮೊತ್ತವು $391,700 ರಷ್ಟು ಹೆಚ್ಚಾಗಿದೆ. ಈ ಅಂಕಿಅಂಶಗಳು ಎಲ್ಲಾ ದಿನಗಳಿಗೆ ಸಂಬಂಧಿಸಿದ ಮುಂಗಡ ಮಾರಾಟವನ್ನು ಒಳಗೊಂಡಿವೆ.

ಉತ್ತರ ಅಮೆರಿಕವು 1,00,715 ಟಿಕೆಟ್‌ಗಳ ಮಾರಾಟದೊಂದಿಗೆ $1.91 ಮಿಲಿಯನ್ (₹18 ಕೋಟಿಗೂ ಹೆಚ್ಚು) ಗಳಿಸಿ ಅಗ್ರಸ್ಥಾನದಲ್ಲಿದೆ. ಅಮೆರಿಕ ಮತ್ತು ಕೆನಡಾವನ್ನು ಒಳಗೊಂಡ ಈ ಪ್ರದೇಶವು, ವಿದೇಶಿ ಮುಂಗಡ ಬುಕಿಂಗ್‌ಗಳಲ್ಲಿ ಸುಮಾರು 74% ರಷ್ಟು ಪಾಲನ್ನು ಹೊಂದಿದೆ. ಯುಕೆ (UK) ಮತ್ತು ಐರ್ಲೆಂಡ್‌ನಲ್ಲಿ 15,022 ಟಿಕೆಟ್‌ಗಳ ಮಾರಾಟದಿಂದ $268,800 ಸಂಗ್ರಹವಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ 14,685 ಟಿಕೆಟ್‌ಗಳ ಮಾರಾಟದ ಮೂಲಕ $248,300 ಗಳಿಕೆಯಾಗಿದೆ. ಜರ್ಮನಿಯಲ್ಲಿ 4,486 ಟಿಕೆಟ್‌ಗಳ ಮಾರಾಟದಿಂದ $86,400 ಸಂಗ್ರಹವಾಗಿದೆ. ಇತರ ವಿದೇಶಿ ಮಾರುಕಟ್ಟೆಗಳಲ್ಲಿ 4,078 ಟಿಕೆಟ್‌ಗಳು ಮಾರಾಟವಾಗಿದ್ದು, ಇದರಿಂದ $62,800 ಗಳಿಕೆಯಾಗಿದೆ. ಹಿಂದಿನ ವರದಿಯ ನಂತರ ಉತ್ತರ ಅಮೆರಿಕದಲ್ಲಿ ಬುಕಿಂಗ್ ಮೊತ್ತವು $214,500 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಯುಕೆ ಮತ್ತು ಐರ್ಲೆಂಡ್‌ನಲ್ಲಿ $86,400 ಮೌಲ್ಯದ ಹೆಚ್ಚುವರಿ ಬುಕಿಂಗ್‌ಗಳು ನಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಈ ಫಲಿತಾಂಶ ಆಶ್ಚರ್ಯವೇನಲ್ಲ, ಮೋದಿಗೂ ಇದು ಎಚ್ಚರಿಕೆ ಸಂಕೇತ': MLC ಚುನಾವಣೆಯಲ್ಲಿ 'ಕೈ' ಶೂನ್ಯ ಸಾಧನೆ ಬಗ್ಗೆ BK ಹರಿಪ್ರಸಾದ್

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

'ಸಾವಿರಾರು ಪೋಸ್ಟ್‌ಗಳು ಮಾಯ': 'ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ'; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!

'ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ನಟಿಯರ ಮೈ ಬಣ್ಣದ ಗೀಳು; ಬಾಲಿವುಡ್‌ಗೆ ವಿದೇಶಿಯರೇ ಬೇಕು'!

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ