ರಮೇಶ್ ಅರವಿಂದ್ ಮತ್ತು ಶಿವಶ್ರೀ ತೇಜಸ್ವಿ ಸೂರ್ಯ 
ಸಿನಿಮಾ ಸುದ್ದಿ

ರಮೇಶ್ ಅರವಿಂದ್ ನಟನೆಯ 'ದೈಜಿ' ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಶಿವಶ್ರೀ ತೇಜಸ್ವಿ ಸೂರ್ಯ ಪದಾರ್ಪಣೆ!

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಕಥಾಹಂದರಕ್ಕೆ ಸಂಗೀತವೇ ಬೆನ್ನೆಲುಬಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರು: ಆಕಾಶ್ ಶ್ರೀವತ್ಸ ನಿರ್ದೇಶನದ 'ದೈಜಿ' ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ದಿಗಂತ್, ಅವಿನಾಶ್, ಕೆ.ಎಸ್. ಶ್ರೀಧರ್, ಅಲೆಕ್ಸಾಂಡ್ರಾ ಟೇಲರ್, ರಮೇಶ್ ಪಂಡಿತ್ ಮತ್ತು ನಿಧಿ ಹೆಗಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಕಥಾಹಂದರಕ್ಕೆ ಸಂಗೀತವೇ ಬೆನ್ನೆಲುಬಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರೀಕರಣ ಮುಗಿದಿದೆ. ಸದ್ಯ ಸಣ್ಣಪುಟ್ಟ ದೃಶ್ಯ ಪರಿಣಾಮಗಳು ಮತ್ತು ಸೌಂಡ್ ಮಿಕ್ಸಿಂಗ್ ಕೆಲಸಗಳು ನಡೆಯುತ್ತಿದ್ದು, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. ದೈಜಿ ಯನ್ನು ವಿಶಿಷ್ಟವಾಗಿಸುವುದು ಅದರ ಸಂಗೀತ. ಇದರಲ್ಲಿ ವಿವಿಧ ಪ್ರಕಾರಗಳಿಗೆ ಸೇರಿದ ಏಳು ಹಾಡುಗಳಿವೆ. ಇವುಗಳಿಗೆ ಜೂಡಾ ಸ್ಯಾಂಡಿ, ನಕುಲ್ ಅಭ್ಯಂಕರ್ ಮತ್ತು ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ನನ್ನೊಂದಿಗೆ ಐದನೇ ಬಾರಿಗೆ ಕೈಜೋಡಿಸಿರುವ ಜೂಡಾ ಸ್ಯಾಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೂ ಸಂಯೋಜಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ) ಅವರು ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವುದು ಪ್ರಮುಖ ಆಕರ್ಷಣೆ.

ಚಿತ್ರದ ಒಂದು ನಿರ್ಣಾಯಕ ಹಾಗೂ ಪವಿತ್ರವಾದ ಹಾಡಿಗಾಗಿ ನಮಗೆ ಅತ್ಯಂತ ಶುದ್ಧ ಮತ್ತು ದೈವಿಕ ಎನಿಸುವಂತಹ ಧ್ವನಿಯ ಅಗತ್ಯವಿತ್ತು. ಸಿನಿಮಾದ ನಿರ್ಮಾಪಕರಾದ ರವಿ ಕಶ್ಯಪ್ ಅವರ ಪತ್ನಿ ಸುಧಾ ಕಶ್ಯಪ್ ಅವರು ಶಿವಶ್ರೀ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯನ್ನು ಹೊಂದಿರುವ ಕಾರಣ ಅವರ ಹೆಸರನ್ನು ಸೂಚಿಸಿದರು. ನಾನು ಅವರಿಗೆ ಹಾಡಿನ ಕಲ್ಪನೆ ಮತ್ತು ಅದರ ಆಳವಾದ ಅರ್ಥವನ್ನು ವಿವರಿಸಿದೆ, ತಕ್ಷಣವೇ ಅದಕ್ಕೆ ಮನಸೋತು ಹಾಡಲು ಒಪ್ಪಿಕೊಂಡರು ಎಂದು ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.

ಈ ಹಾಡಿನ ಮತ್ತೊಂದು ಆವೃತ್ತಿಯನ್ನು 'ಕಾಂತಾರ: ಚಾಪ್ಟರ್ 1' ಖ್ಯಾತಿಯ ಗಾಯಕ ಅಬ್ಬಿ ವಿ ಹಾಡಿದ್ದಾರೆ. ಇನ್ನು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳಿಗೆ ನಟ ಧನಂಜಯ ಸಾಹಿತ್ಯ ಬರೆದಿದ್ದಾರೆ. ಅದರಲ್ಲಿ ಒಂದು ಹಾಡನ್ನು ಸೋನು ನಿಗಮ್ ಹಾಡಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಇದರೊಂದಿಗೆ, ಚಿತ್ರದಲ್ಲಿ ಅಪ್ಪಟ ಪಾಶ್ಚಿಮಾತ್ಯ ಶೈಲಿಯ ಹಾಡು ಮತ್ತು 'ಇಂಡೀ-ಫ್ಯೂಷನ್' ಶೈಲಿಯ ಸಂಗೀತ ತುಣುಕು ಕೂಡ ಇದ್ದು, ಚಿತ್ರದ ವೈವಿಧ್ಯತೆಯನ್ನು ಹೆಚ್ಚಿಸಿವೆ. "ನಮ್ಮಲ್ಲಿ ಜೂಡಾ ಅವರು ರಚಿಸಿ, ಸಂಯೋಜಿಸಿರುವ ಒಂದು ಇಂಗ್ಲಿಷ್ ಹಾಡಿದೆ, ಇದಕ್ಕೆ 14 ವರ್ಷದ ವಿಭಾ ಕಶ್ಯಪ್ ಧ್ವನಿ ನೀಡಿದ್ದಾರೆ, ಇವರು ಈ ಹಾಡಿನ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇದರ ಜೊತೆಗೆ, ಬೆಂಗಳೂರಿನ ಸಂಗೀತ ವಲಯದಲ್ಲಿ ತಮ್ಮ ಭಕ್ತಿಗೀತೆ ಆಧಾರಿತ 'ರ್ಯಾಪ್' (rap) ಮತ್ತು ಭಜನೆಗಳ ಸಮ್ಮಿಶ್ರ ಶೈಲಿಗೆ ಜನಪ್ರಿಯರಾಗಿರುವ ಕಲಾವಿದ ಹರ್ಷದ್ ಧ್ವನಿ, ಚಿತ್ರದ ಸನ್ನಿವೇಶವೊಂದಕ್ಕೆ ಪೂರಕವಾದ ಹಾಡೊಂದನ್ನು ಹಾಡಿದ್ದಾರೆ. ಸಿನಿಮಾ ಬಿಡುಗಡೆಯಾಗುವ ಮುನ್ನವೇ ಈ ಹಾಡುಗಳು ಒಂದೊಂದಾಗಿ ರಿಲೀಸ್ ಆಗಲಿವೆ ಎಂದು ಆಕಾಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವ ಬೆಂಗಳೂರು ನಿರ್ಮಾಣದತ್ತ ಡಿಕೆಶಿ ದೃಢ ಹೆಜ್ಜೆ: ₹1 ಲಕ್ಷ ಕೋಟಿ ಯೋಜನೆ; ಟನಲ್ ರೋಡ್ ಸೇರಿ 500 ಕಿ.ಮೀ ಹೊಸ ರಸ್ತೆ ನಿರ್ಮಾಣ!

CEC ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಾರ್ವಜನಿಕ ದೋಷಾರೋಪಣೆ: ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ!

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ; ಅಧಿಕಾರದಿಂದ ನೆತನ್ಯಾಹು ಕಿತ್ತೆಸೆಯಲು ಪ್ಲಾನ್!