ನಟಿ ಸಮಂತಾ ಹಾಗೂ ರಾಜ್ ನಿಡಿಮೋರು online desk
ಸಿನಿಮಾ ಸುದ್ದಿ

ನಾನು, ರಾಜ್ ಆ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ: ಗರ್ಭಿಣಿಯಾಗಿದ್ದು ಅಚ್ಚರಿ ಅನಿಸಿತ್ತು- ನಟಿ ಸಮಂತಾ

ತಾವು ಗರ್ಭಿಣಿಯಾಗಿದ್ದು ತಮಗೆ ಆಶ್ಚರ್ಯದ ಸಂಗತಿಯಾಗಿತ್ತು ಎಂದು ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಟಿ ಸಮಂತಾ ಡಿಸೆಂಬರ್ ವೇಳೆಗೆ ತಮ್ಮ ಮೊದಲ ಮಗುವಿನ ನಿರೀಕ್ಷಿಸುತ್ತಿದ್ದಾರೆ. ಈಗ ನಟಿ ಖಾಸಗಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಹಲವು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಕ್ಕಿನೇನಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ, ಕಳೆದ ಡಿಸೆಂಬರ್‌ನಲ್ಲಿ ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಸಮಂತಾ, ʻಮಾ ಇಂಟಿ ಬಂಗಾರಂʼ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಾವು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು.

ತಾವು ಗರ್ಭಿಣಿಯಾಗಿದ್ದು ತಮಗೆ ಆಶ್ಚರ್ಯದ ಸಂಗತಿಯಾಗಿತ್ತು ಎಂದು ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಥಸ್ಸಾಡಿಯಾ ಚಿತ್ರೀಕರಣದ ಸಮಯದಲ್ಲಿ ತಾನು ಗರ್ಭಿಣಿ ಎಂಬುದು ತಿಳಿಯಿತು ಎಂದು ಸಮಂತಾ ಹೇಳಿದ್ದಾರೆ. ಚಿತ್ರೀಕರಣದ ವೇಳೆ ಡ್ಯಾನ್ಸ್ ಮಾಡುವಾಗ ಸ್ವಲ್ಪ ಸುಸ್ತಾಗುತ್ತಿತ್ತು. ಅಸಹಜ ಎನ್ನಿಸುತ್ತಿತ್ತು. ಬಳಿಕ ತಾನು ಗರ್ಭಿಣಿ ಎಂಬುದು ತಿಳಿಯಿತು ಎಂದು ಅವರು ತಿಳಿಸಿದ್ದಾರೆ. ರಾಜ್ ಹಾಗೂ ತಾವು ಮಕ್ಕಳ ಕುರಿತು ಹೆಚ್ಚು ಯೋಚನೆ ಮಾಡಿರಲಿಲ್ಲ. ಆದರೆ, ಗರ್ಭಧಾರಣೆಯ ವಿಚಾರ ತಮಗೆ ನಿಜಕ್ಕೂ ಆಶ್ಚರ್ಯ ತಂದಿತ್ತು ಎಂದು ಸಮಂತಾ ಹೇಳಿದ್ದಾರೆ.

ಮಗುವಿನ ಆಗಮನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು ಎಂದು ಅನೇಕರು ಹೇಳುತ್ತಾರೆ. ಆ ಬದಲಾವಣೆಗಳನ್ನು ಎದುರಿಸಲು ತಾನು ಸಿದ್ಧಳಾಗಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!

ಕೊನೆಗೂ ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ಬಳಸಿದ್ದ ಮೊಬೈಲ್‌ ಜಾಲ ಪತ್ತೆ: ಮೂವರು ಸಿಬ್ಬಂದಿ ಸೇರಿ 9 ಮಂದಿ ಬಂಧನ

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ