ಕಿಚ್ಚಾ ಸುದೀಪ್ ಮತ್ತು ಸ್ಪರ್ಧಿ ಮಂಜು 
ಸಿನಿಮಾ ಸುದ್ದಿ

'ಅಣ್ಣಾ ಅನ್ನಿಸ್ಕೋಬೇಕು ಅಂದ್ರೆ ತಮ್ಮನಿಗೆ ಕೆಲ ಬೆಲೆ ಇರಬೇಕು': 'ಮಾಡ್ರನ್ ಮಹಾಕವಿ' ಮಂಜುಗೆ 'ಕಿಚ್ಚ' ಫುಲ್ ಕ್ಲಾಸ್

ಪ್ರೋಮೋದಲ್ಲಿ ಸುದೀಪ್, ಮಂಜು ಬಿಗ್‌ಬಾಸ್ ಮನೆಯಲ್ಲಿ ಕಳೆದ ವಾರ ನಡೆದುಕೊಂಡ ರೀತಿಯ ಬಗ್ಗೆ ಖಾರವಾಗಿ ಪ್ರಶ್ನಿಸಿರುವುದು ಕಂಡುಬಂದಿದೆ. ಸಹ ಸ್ಪರ್ಧಿಗಳೊಂದಿಗೆ ಮಂಜು ನಡೆಸಿಕೊಂಡ ರೀತಿಯ ಬಗ್ಗೆಯೂ ಸುದೀಪ್ ನೇರ..

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಬಹುನಿರೀಕ್ಷಿತ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಹೌದು.. ಪ್ರಸ್ತುತ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ನಿರೂಪಕ ಕಿಚ್ಚ ಸುದೀಪ್ ಹಾಗೂ ಸ್ಪರ್ಧಿ Modern Mahakavi ಮಂಜು ನಡುವೆ ಮಾತಿನ ಚಕಮಕಿ ನಡೆಯುವ ಸುಳಿವು ಸಿಕ್ಕಿದೆ.

ಪ್ರೋಮೋದಲ್ಲಿ ಸುದೀಪ್, ಮಂಜು ಬಿಗ್‌ಬಾಸ್ ಮನೆಯಲ್ಲಿ ಕಳೆದ ವಾರ ನಡೆದುಕೊಂಡ ರೀತಿಯ ಬಗ್ಗೆ ಖಾರವಾಗಿ ಪ್ರಶ್ನಿಸಿರುವುದು ಕಂಡುಬಂದಿದೆ. ಸಹ ಸ್ಪರ್ಧಿಗಳೊಂದಿಗೆ ಮಂಜು ನಡೆಸಿಕೊಂಡ ರೀತಿಯ ಬಗ್ಗೆಯೂ ಸುದೀಪ್ ನೇರವಾಗಿಯೇ ಕಿಡಿಕಾರಿದ್ದಾರೆ.

ಪ್ರೋಮೋ ಆರಂಭದಲ್ಲಿ ಸುದೀಪ್, ಮಂಜುರನ್ನು ‘Modern Mahakavi Manju’ ಎಂದು ಕರೆಯುತ್ತಾ, ಅವರದೇ ಶೈಲಿಯನ್ನು ಅನುಕರಿಸುತ್ತಾರೆ. ಈ ವೇಳೆ ಮಂಜು ಸುದೀಪ್ ಅವರನ್ನು ‘ಅಣ್ಣ’ ಎಂದು ಸಂಬೋಧಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ನನ್ನ ಅಣ್ಣಾ ಅಂತ ಕರೆಯೋದಾದ್ರೆ, ತಮ್ಮನಿಗೂ ಒಂದಿಷ್ಟು ಬೆಲೆ ಇರಬೇಕು” ಎಂದು ಸುದೀಪ್ ಖಡಕ್ ಮಾತು ಹೇಳಿದ್ದಾರೆ.

ಮಂಜು ತಮ್ಮ ನಡೆ-ನುಡಿಯನ್ನು ಸಮರ್ಥಿಸಿಕೊಳ್ಳಲು ಇತರ ಸ್ಪರ್ಧಿಗಳ ವಿಚಾರವನ್ನು ಪ್ರಸ್ತಾಪಿಸಲು ಮುಂದಾದಾಗ ಸುದೀಪ್ ಮಧ್ಯಪ್ರವೇಶಿಸಿದಂತೆ ಪ್ರೋಮೋದಲ್ಲಿ ಕಾಣಿಸುತ್ತದೆ. ಕಳೆದ ವಾರ ಮಂಜು ಇತರ ಸ್ಪರ್ಧಿಗಳೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ, ಬಿಗ್‌ಬಾಸ್ ಕಾರ್ಯಕ್ರಮದ ಪ್ರೇಕ್ಷಕರ ಮಹತ್ವವನ್ನೂ ಸುದೀಪ್ ಒತ್ತಿ ಹೇಳಿದ್ದಾರೆ. ವೀಕ್ಷಕರು ಕಾರ್ಯಕ್ರಮವನ್ನು ನಿರಂತರವಾಗಿ ಬೆಂಬಲಿಸುತ್ತಿರುವುದರಿಂದಲೇ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದಾರೆ.

12 ವರ್ಷಗಳ ಗೌರವವನ್ನು ನಾಲ್ಕು ಜನರಿಗಾಗಿ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ

‘ಕಳೆದ 12 ವರ್ಷಗಳಲ್ಲಿ ನಾವು ಪ್ರೇಕ್ಷಕರನ್ನು ಸಂಪಾದಿಸಿದ್ದೇವೆ. ಕೇವಲ ನಾಲ್ಕು ಜನರಿಗಾಗಿ ಆ ಪ್ರೇಕ್ಷಕರನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ’ ಎಂಬರ್ಥದಲ್ಲಿ ಸುದೀಪ್ ಮಾತನಾಡಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.

ಮಂಜು ಬಿಸಿ ಮುಟ್ಟಿಸಿದ್ರಾ ಕಿಚ್ಚಾ ಸುದೀಪ್?

ಸುದೀಪ್ ಅವರ ಖಡಕ್ ಮಾತುಗಳಿರುವ ಈ ಪ್ರೋಮೋ ಇದೀಗ ಬಿಗ್‌ಬಾಸ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮಂಜು ಸುದೀಪ್ ಅವರ ಪ್ರಶ್ನೆಗಳಿಗೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ? ಇತ್ತೀಚಿನ ವಿವಾದಗಳ ಬಗ್ಗೆಯೂ ಕಿಚ್ಚ ನೇರವಾಗಿ ಪ್ರಶ್ನಿಸಲಿದ್ದಾರೆಯೇ ಎಂಬುದು ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಸಂಬಂಧ, ಮಂಜು ಅವರ ನಡೆ-ನುಡಿ ಹಾಗೂ ಪ್ರೇಕ್ಷಕರ ನಿರೀಕ್ಷೆಗಳ ಬಗ್ಗೆ ಸುದೀಪ್ ಗಂಭೀರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಈ ವಾರದ ಎಪಿಸೋಡ್ ಪ್ರಮುಖ ಘಟ್ಟವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

ದೀದಿಗೆ ದಿನಕ್ಕೊಂದು ಶಾಕ್; ನಂದೀಗ್ರಾಮದ ಬಳಿಕ ಕೈಕೊಟ್ಟ ರೆಜಿನಗರ ಉಪಚುನಾವಣೆ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ; ನಾಮಪತ್ರ ವಾಪಸ್

ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್‌ ಅಧ್ಯಕ್ಷ ವೀರಮಣಿ ಸೆಕ್ಸ್ ಹಗರಣ: ಮತಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಲೋಕಲ್ ‘Epstein filesʼ ಎಂದ ನೆಟ್ಟಿಗರು!

ವಿದೇಶಿ ನೌಕರರ ನೇಮಕಾತಿಗೆ ಅಮೆರಿಕ ಕತ್ತರಿ: H-1B ವೀಸಾ ನಿರ್ಬಂಧ ಮತ್ತೊಂದು ವರ್ಷಕ್ಕೆ ವಿಸ್ತರಣೆ..!

UPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಇನ್ನು ಮುಂದೆ ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಬಂದ್!