ಚಿತ್ರೀಕರಣ ವೇಳೆ ನಟ ವಿಶಾಲ್ ಗೆ ಗಾಯ 
ಸಿನಿಮಾ ಸುದ್ದಿ

ಗೋವಾದಲ್ಲಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ; ನಟ ವಿಶಾಲ್ ಗೆ ಗಾಯ! Video

ಗಾಯದ ಬಳಿಕ ವೈದ್ಯರು ವಿಶಾಲ್ ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದು, ಚೇತರಿಕೆಗೆ ಮೂರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಪಣಜಿ: ಗೋವಾದಲ್ಲಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದ್ದು, ಖ್ಯಾತ ತಮಿಳು ನಟ ವಿಶಾಲ್`ಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಚಿತ್ರತಂಡದ ಮೂಲಗಳ ಪ್ರಕಾರ ನಟ ವಿಶಾಲ್ ಅಭಿನಯದ ಮತ್ತು ಸುಂದರ್ ಸಿ ನಿರ್ದೇಶನದ ಬಹು ನಿರೀಕ್ಷಿತ ಪುರುಷನ್ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ದುರ್ಘಟನೆಯಲ್ಲಿ ನಟ ವಿಶಾಲ್ ಅವರ ಬೆನ್ನಿಗೆ ಗಾಯವಾಗಿದ್ದು, ಸ್ಟಂಟ್ ಪ್ರದರ್ಶನ ಮಾಡುತ್ತಿದ್ದಾಗ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಮೂರು ವಾರಗಳ ಕಡ್ಡಾಯ ವಿಶ್ರಾಂತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಟ ಹೇಳಿದ್ದೇನು?

ಇನ್ನು ಈ ಕುರಿತು ಹೇಳಿಕೆ ನೀಡಿರುವ ವಿಶಾಲ್, ತಾವು ಈವರೆಗೆ ಹಲವು ಸ್ಟಂಟ್‌ಗಳನ್ನು ಮಾಡಿದ್ದರೂ, ಈ ಬಾರಿ ನಡೆದದ್ದು ಅನಿರೀಕ್ಷಿತ ಅವಘಡವಾಗಿದೆ ಎಂದು ಹೇಳಿದ್ದಾರೆ.

ಗಾಯದ ಬಳಿಕ ವೈದ್ಯರು ವಿಶಾಲ್ ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದು, ಚೇತರಿಕೆಗೆ ಮೂರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಹೀಗಾಗಿ, ನಟರ ಸಂಘ (ನಡಿಗರ್ ಸಂಗಂ) ಎಂದೂ ಕರೆಯಲಾಗುವ ಸೌತ್ ಇಂಡಿಯನ್ ಆರ್ಟಿಸ್ಟ್ಸ್ ಅಸೋಸಿಯೇಷನ್‌ (SIAA)ನ ಮುಂಬರುವ ವಾರ್ಷಿಕ ಸಾಮಾನ್ಯ ಸಭೆ (AGM)ಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ವಿಶಾಲ್ ತಿಳಿಸಿದ್ದಾರೆ.

"ಇದು ಕಠಿಣ ವಾರವಾಗಿತ್ತು. ಬೆನ್ನು ನೋವಿನಿಂದಾಗಿ ನಡಿಗರ್ ಸಂಗಂನ ಅತ್ಯಂತ ಮಹತ್ವದ AGMನಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ಬೇಸರ ಹಾಗೂ ಕಿರಿಕಿರಿ ಉಂಟುಮಾಡಿದೆ" ಎಂದು ವಿಶಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ್ತಷ್ಟು ಜಾಗತಿಕ ಬೆಂಬಲ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತದ ಬೆನ್ನಿಗೆ ನಿಂತ ಪೋರ್ಚುಗಲ್, ಮಾರಿಷಸ್!

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್

Mangaluru: ವಿದ್ಯಾರ್ಥಿ ಸಂಘದ ಕಾರ್ಯಕ್ರಮದ ವೇಳೆ ತಡೆ ಗೋಡೆ ಕುಸಿತ; ವಿದ್ಯಾರ್ಥಿ ಬ್ರೇನ್‌ಡೆಡ್‌, ನಾಲ್ವರಿಗೆ ಗಾಯ, Video

'ಅವರು ನನ್ನನ್ನು ಕೊಲ್ಲುತ್ತಾರೆ, ಅಮ್ಮ': ಹೋಮ್‌ಸ್ಟೇನಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ; ಮುಸ್ಲಿಂ ಬಾಯ್‌ ಫ್ರೆಂಡ್‌‌ ಬಂಧನ!