ಸಿನಿಮಾ ವಿಮರ್ಶೆ

ರಂಜನೀಯ ಕಾಂತ

ಚಿತ್ರದ ಹಾಡೊಂದರಲ್ಲಿ ನಾಯಕ ವಿಜಯ್ ಜೊತೆ ಕಾಣಿಸಿಕೊಳ್ಳುವ ನಿರ್ದೇಶಕ ಪ್ರದೀಪ್ ರಾಜ್, ನಂತರ ಟ್ರಾಫಿಕ್ ಪೊಲೀಸ್ನ ಚಿಕ್ಕ ಪಾತ್ರದಲ್ಲೂ ಬಂದು ಹೋಗುತ್ತಾರೆ. ಹಾಗಾಗಿ, 'ಆ ಹಾಡಿನಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಯಾಕೆ ಬಂದಿದ್ರು?' ಎಂದು ಕೇಳಿದರೆ, ಅದು ಚಿತ್ರಕ್ಕೆ ಸೇರಿಸಬಹುದಾಗಿದ್ದ ಇನ್ನೊಂದು ಕಾಮಿಡಿ ಡೈಲಾಗ್ ಆಗಬಹುದು. ಝೀರೋ ಸೈಜ್ನ ಐಂದ್ರಿತಾ ರೇ ಮತ್ತು ಕಿಂಗ್ ಸೈಜ್ನ ವಿಲನ್, ಅಣ್ಣ ತಂಗಿ ಎನ್ನುವ ವಿಷಯವನ್ನೂ ಕಾಮಿಡಿಯಾಗಿಯೇ ತೆಗೆದುಕೊಳ್ಳುವ ಅನಿವಾರ್ಯತೆ ಪ್ರೇಕ್ಷಕನಿಗೆ. ಇದು ರಜನಿ ಕಾಂತನ ಸ್ಪೆಷಲ್. ಹಾಗಂತ ಇದು ಸಂಪೂರ್ಣ ಕಾಮಿಡಿ ಸಿನಿಮಾ ಅಲ್ಲ. ಚಿತ್ರದುದ್ದಕ್ಕೂ ಲೈಟ್ ಕಾಮಿಡಿಯಂತೆ ಸಾಗುವ ರಜಿನಿಕಾಂತ ಚಿತ್ರದ ಕಥೆ ಕೊನೆಯಲ್ಲಿ ತೆಗೆದುಕೊಳ್ಳುವ ವಿಶೇಷ ತಿರುವಿನೊಂದಿಗೆ ಮುಗಿದು  ರಂಜನೀಯ ಕಾಂತ ಎನಿಸಿಕೊಳ್ಳುತ್ತದೆ.
ಇಲ್ಲಿಯವರೆಗೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಪ್ರದೀಪ್ರಾಜ್ ಅವರ ರಜಿನಿಕಾಂತ ಕೂಡಾ ಹೆಚ್ಚು ಕಡಿಮೆ ಅವರ ಶೈಲಿಯಲ್ಲೇ ಇರುವ ಚಿತ್ರ. ಲಾಜಿಕ್ ಅನ್ನು ಅಷ್ಟಾಗಿ ನಂಬಿಕೊಳ್ಳದ ಪ್ರದೀಪ್ರಾಜ್ ಚಿತ್ರದ ಮೊದಲಾರ್ಧದಲ್ಲಿ ಅದೇ ಸೂತ್ರ ಬಳಸಿದ್ದಾರೆ.
ದುನಿಯಾ ವಿಜಯ್ ಆಗಾಗ ಟೈಗರ್ ಪ್ರಭಾಕರ್ ಅವರ ಮ್ಯಾನರಿಸಂಗಳನ್ನು ಅನುಕರಿಸುವುದನ್ನು ಎಲ್ಲರೂ ನೋಡಿದ್ದಾರೆ. ಅದೇ ಕಾರಣಕ್ಕೋ ಏನೋ ಟೈಗರ್ ಪ್ರಭಾಕರ್ ಅವರ ಚಿತ್ರದ ಎಳೆಯೊಂದನ್ನು ಹಿಡಿದುಕೊಂಡು ವಿಜಿಗೊಂದು ಸಿನಿಮಾ ಮಾಡಿದರೆ ಹೇಗೆ ಎಂಬ ಉದ್ದೇಶದಿಂದಲೋ ಏನೋ, ಪ್ರಭಾಕರ್ ಅಭಿನಯದ 'ತಾಯಿಯ ಮಮತೆ' ಚಿತ್ರದ ಪ್ಲಾಟ್ ಅನ್ನು ಹೋಲುವ ರಜಿನಿಕಾಂತ ತಯಾರಾಗಿದೆ. ಆದರೆ ಅದು ವಿಜಯ್ ಅವರ ಪಾತ್ರಕ್ಕೆ ಮಾತ್ರ ಸೀಮಿತವಾಗಿದೆ.
ಒಂದೇ ರೂಪದ ರಜಿನಿ ಮತ್ತು ಕಾಂತ ಎಂಬ ಅಣ್ಣ ತಮ್ಮಂದಿರಲ್ಲಿ ಒಬ್ಬನದು ಸೀಳು ತುಟಿ, ತೊದಲು ಮಾತು. ಇನ್ನೊಬ್ಬ ನಮ್ಮ ಎಂದಿನ ಚಿತ್ರಗಳ ಸೂಪರ್ ಸ್ಟಾರ್. ಕಾಂತನ ವಿಷ್ಯ ಬ್ಯಾಡಮ್ಮ ಶಿಷ್ಯ ಎನ್ನುವವರನ್ನೂ ಕೂಡ ರಜಿನಿಯ ಪಾತ್ರ ಮಾತ್ರ ಅಯಸ್ಕಾಂತದಂತೆ ಸೆಳೆಯುತ್ತದೆ.  ಆದರೆ ತಾಯಿಯ ಮಮತೆಯಲ್ಲಿ ನನಗೆ ಕಡಿಮೆ ಪಾಲಿದೆ ಎಂಬುದನ್ನು ಆಗಾಗ ವ್ಯಕ್ತಪಡಿಸುವ ಕಾಂತ ಕೂಡ ಅಲ್ಲಲ್ಲಿ ಮಿಂಚುತ್ತಾರೆ.
ದೈಹಿಕ ನ್ಯೂನತೆ ಇರುವ ಮಗನ ಮೇಲೆ ತಾಯಿಗೆ ಅತಿ ಕಾಳಜಿ. ಅದಕ್ಕಾಗಿ ತಾಯಿಯ ಮೇಲೆ ಮುನಿಸಿರುವ ಇನ್ನೊಬ್ಬ ಮಗ. ಇದರ ಮಧ್ಯೆ ಒಂದು ತ್ರಿಕೋನ ಪ್ರೇಮ. ಕತೆಗೊಂದಿಷ್ಟು ಕ್ರಿಮಿನಲ್ ಹಿನ್ನೆಲೆ. ಮೊದಲಾರ್ಧದಲ್ಲಿ ಏನೂ ಕತೆ ಇಲ್ಲ ಎನಿಸಿದರೂ ನಂತರ ಸ್ಟೇಜ್ ಸಿದ್ಧವಾಗುತ್ತದೆ. ಚಿತ್ರದುದ್ದಕ್ಕೂ ಕಾಮಿಡಿ ಟ್ರ್ಯಾಕ್ನಂತೆ ಬಳಸಲಾದ ಕಾನ್ಸೆಪ್ಟ್ ಅನ್ನು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸೀರಿಯಸ್ಸಾಗಿ ತೆಗೆದುಕೊಂಡು ಪ್ರೇಕ್ಷಕರಿಗೆ ಶಾಕ್ ನೀಡುವಲ್ಲಿ ಚಿತ್ರಕಥೆ ಗೆಲ್ಲುತ್ತದೆ.
ಕರಿಚಿರತೆಯ ನಂತರ ಮತ್ತೊಂದು ವಿಭಿನ್ನ ಪಾತ್ರದಲ್ಲಿ ವಿಜಯ್ ಗಮನಸೆಳೆಯುತ್ತಾರೆ. ಅವರ ತೊದಲು ಮಾತುಗಳು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು. ಹಾಗಾಗಿ, ಮಾಸ್ಗಳು 'ಐ ಲೈಕ್ ಇಟ್ ಕಾಂತ' ಎಂದರೆ, ಕ್ಲಾಸ್ಗಳು 'ಐ ಲೈಕ್ ಇಟ್ ರಜಿನಿ' ಎನ್ನಬಹುದು. ಆದರೆ, ಇವೆರಡರ ಜೊತೆ ಜೊತೆಗೇ ಪ್ರೇಕ್ಷಕ 'ಐ ಲೈಕ್ ಇಟ್ ಬುಲೆಟ್' ಎಂದರೆ ಆಶ್ಚರ್ಯವಿಲ್ಲ. ಬುಲೆಟ್ ಪ್ರಕಾಶ್ ಎಂದರೆ ಕೇವಲ ಸಿಲ್ಲಿ ಕಾಮಿಡಿ ಮಾಡುವ ಹಾಸ್ಯನಟ ಎನ್ನುವವರ ಮಾತಿಗೆ, 'ಬುಲೆಟ್' ಇಲ್ಲಿ 'ಸೈಲೆನ್ಸರ್' ಅಳವಡಿಸಿ ಅಚ್ಚರಿ ಹುಟ್ಟಿಸುತ್ತಾರೆ. ಬುಲೆಟ್ನ ಖದರ್ ನೋಡಿ, 'ಬುದ್ಧಿಮಾಂದ್ಯ ಹುಡುಗನ ಪಾತ್ರದಲ್ಲಿ ನಿಮ್ಮ ಅಭಿನಯ ಸೂಪರ್ ಬುದ್ಧಿ' ಎನ್ನುತ್ತಾನೆ ಪ್ರೇಕ್ಷಕ. ಐಂದ್ರಿತಾ ರೇ ಅಭಿನಯದಲ್ಲಿ ಸೈಜ್ ಝೀರೋಗಿಂತ ಒಂದಿಷ್ಟು ಹೆಚ್ಚು ಎನ್ನಬಹುದಷ್ಟೇ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂರು ಹಾಡುಗಳು ಖುಷಿಕೊಡುತ್ತವೆ.
- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!