ಕಾಂಗರೂ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

ಕಾಂಗರೂ ಸಿನಿಮಾ ವಿಮರ್ಶೆ: ಮನೋವ್ಯಾಧಿಗೆ ಹಾರರ್ ಟಚ್; ಭಾವನೆಗಳ ಜೊತೆಗೆ ಥ್ರಿಲ್ಲರ್ ಮಿಕ್ಸ್; ಆದಿತ್ಯ, ರಂಜನಿ ನಟನೆಗೆ ಫುಲ್ ಮಾರ್ಕ್ಸ್!

Shilpa D

ಭ್ರೂಣಹತ್ಯೆಯಂತ ಸೂಕ್ಷ ಅಂಶವನ್ನು ಕಥೆಯನ್ನಾಗಿ ಕಿಶೋರ್ ಮೇಗಳಮನೆ ಸಿನಿಮಾ ಮಾಡಿದ್ದಾರೆ. ಭಾವನಾತ್ಮಕ ಅಂಶಗಳಿಗೆ ಥ್ರಿಲ್ಲರ್ ಮತ್ತು ಹಾರರ್ ಟಚ್ ನೀಡಿದ್ದಾರೆ. ಸಿನಿಮಾ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಬಹುತೇಕ ಹಾರರ್ ಸಿನಿಮಾಗಳು ತನ್ನ ಕತೆಯ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ, ಹಾರರ್ ಜೊತೆಗೆ ಭಾವಾನಾತ್ಮಕ ಅಂಶಗಳು ಸೇರಿಕೊಂಡಾಗ ಸಿನಿಮಾ ಕತೆ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ. ಇಂಥದ್ದೊಂದು ಸಸ್ಪೆನ್ಸ್, ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ ಕಾಂಗರೂ. ಕಿಶೋರ್ ಮೇಗಳಮನೆ ನಿರ್ದೇಶಿಸಿ ಆದಿತ್ಯ ಮತ್ತು ರಂಜನಿ ರಾಘವನ್ ಅಭಿನಯಿಸಿರುವ ಕಾಂಗರೂ ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಸರ್ಪ್ರೈಸ್ ಮೂಡಿಸುತ್ತದೆ.

ಸಿನಿಮಾ ಪ್ರಾರಂಭದಲ್ಲಿ ಒಂದು ರೀತಿಯ ಸಸ್ಪೆನ್ಸ್ ಅನುಭವ ನೀಡುತ್ತದೆ, ಕಥೆ ಸಾಗಿದಂತೆ ಎಮೋಶನಲ್ ಡ್ರಾಮಾವಾಗಿ ಬದಲಾಗುತ್ತದೆ. ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕನ ಉತ್ಸಾಹವನ್ನು ಅದೇ ಮಟ್ಟದಲ್ಲಿ ಉಳಿಸಿಕೊಂಡು ಹೋಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಸಸ್ಪೆನ್ಸ್‌ನ ಅಂಶ ಬಹಿರಂಗವಾದಾಗ, ಚಿತ್ರದ ನಿಜವಾದ ಭಾವನಾತ್ಮಕ ನೆಲೆಯನ್ನು ಬಿಚ್ಚಿಡಲಾಗುತ್ತದೆ. ಕ್ರೈಮ್ ಮತ್ತು ಹಾರರ್ ಹಾಗೂ ಎಮೋಶನಲ್ ಅಂಶಗಳನ್ನು ಒಟ್ಟಿಗೆ ಜೊತೆಗೂಡಿಸಿ ಕತೆ ಹೇಳುವಲ್ಲಿ ಕಿಶೋರ್ ಪ್ರಯತ್ನ ಮೆಚ್ಚುವಂತದ್ದು.

ಬೆಂಗಳೂರಿನಲ್ಲಿ ಕೆಲಸ ಮಾಡುವ ಇನ್ಸ್ ಪೆಕ್ಟರ್ ಪೃಥ್ವಿ(ಆದಿತ್ಯ) ಗೆ ಚಿಕ್ಕಮಗಳೂರು ಪೊಲೀಸ್‌ ಠಾಣೆಗೆ ಟ್ರಾನ್ಸ್ ಫರ್ ಆಗುತ್ತದೆ. ಪೃಥ್ವಿ ಪತ್ನಿ ಮೇಘನಾ(ರಂಜನಿ ರಾಘವನ್‌) ಆಸ್ಪತ್ರೆಯೊಂದರಲ್ಲಿ ಮನಃಶಾಸ್ತ್ರಜ್ಞೆ. ಚಿಕ್ಕಮಗಳೂರಿನ ಆಂಟನಿ ಕಾಟೇಜ್‌ ಎಂಬ ಹೋಂಸ್ಟೇಯಲ್ಲಿ ನಡೆಯುವ ಆತ್ಮಹತ್ಯೆಯ ಘಟನೆ ಕಥೆಗೆ ಟ್ವಿಸ್ಟ್ ಕೊಡುತ್ತದೆ. ಆದಾದ ಮೇಲೆ ಈ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ ದಂಪತಿಗಳಿಗೆ ದೆವ್ವದ ಕಾಟ ಶುರುವಾಗುತ್ತದೆ. ದೆವ್ವ ನೋಡಿದವರು ತಮ್ಮ ಸ್ಥಳಗಳಿಗೆ ವಾಪಾಸಾದ ಕೆಲವೇ ದಿನಗಳಲ್ಲಿ ನಾಪತ್ತೆಯಾಗುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ 70 ಪ್ರಕರಣಗಳ ತನಿಖಾಧಿಕಾರಿಯಾಗಿ ಅವುಗಳ ಜಾಡು ಹಿಡಿದು ಹೊರಟ ಪೃಥ್ವಿ ಅವುಗಳನ್ನು ಬೇಧಿಸುತ್ತಾನೆಯೇ ಎಂಬುದಕ್ಕೆ ಸಿನಿಮಾ ನೋಡಬೇಕು. `ಕೊನೆಗೆ ತಿಳಿಯುವ ಸತ್ಯ ಎನು ಎಂಬುದು ಸಿನಿಮಾದ ಸಸ್ಪೆನ್ಸ್

ಭ್ರೂಣ ಹತ್ಯೆಯಂತ ಸಾರ್ವಕಾಲಿಕ ಸಮಸ್ಯೆ, ಇಂತಹ ವಿಷಯವನ್ನು ತೆಗೆದುಕೊಂಡು ಕಿಶೋರ್ ಮೇಗಳಮನೆ ಉತ್ತಮ ಸಂದೇಶ ರವಾನಿಸಿದ್ದಾರೆ. ಕಾಂಗರೂವಿನಂತೆ ಒಡಲಲ್ಲಿರುವ ಮಗುವನ್ನು ಹೆಣ್ಣುಮಗಳೊಬ್ಬಳು ಜೋಪಾನವಾಗಿಸುವ ಕಥೆಯೇ ‘ಕಾಂಗರೂ’, ಕತೆಗೆ ಹಾರರ್, ಹಾಗೂ ಥ್ರಿಲ್ಲರ್ ಸ್ಪರ್ಶ ನೀಡಲಾಗಿದೆ. ಸಿನಿಮಾದ ಮೊದಲರ್ಧ ಭಾಗದಲ್ಲಿ ಎಲ್ಲಿಯೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತದೆ, ಎರಡನೇ ಭಾಗದಲ್ಲಿ ಕಥೆ ವೇಗ ಪಡೆದುಕೊಂಡು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಪೊಲೀಸ್ ಪಾತ್ರಗಳಿಗೆ ಫಿಕ್ಸ್ ಆಗಿರುವಂತೆ ಕಾಣುವ ನಟ ಆದಿತ್ಯ ಕಾಂಗರೂ ನಲ್ಲೂ ಇನ್ಸ್ ಪೆಕ್ಟರ್ ಪೃಥ್ವಿ ಪಾತ್ರದಲ್ಲಿ ಜೀವಿಸಿದ್ದಾರೆ. ಎದೆಗಾರಿಕೆ ಸಿನಿಮಾದ ಖಡಕ್ ಪೊಲೀಸ್ ಅಧಿಕಾರಿಯಂತೆ ಇಲ್ಲಿಯೂ ತಮ್ಮ ಮನೋಜ್ಞ ಅಭಿನಯದಿಂದ ಎಲ್ಲರನ್ನು ರಂಜಿಸಿದ್ದಾರೆ, ಸಿನಿಮಾದಲ್ಲಿ ಅತಿರಂಜಿತ ಹೊಡೆದಾಟಗಳಿಲ್ಲ, ಅಬ್ಬರಿಸುವ ಸಂಭಾಷಣೆಗಳಿಲ್ಲ, ಸೂಕ್ಷ್ಮವಾಗಿ ಸಿನಿಮಾವನ್ನು ನಿರೂಪಿಸಲಾಗಿದೆ.

ಮನೋವೈದ್ಯೆಯಾಗಿ ರಂಜನಿ ರಾಘವನ್ ತಮ್ಮ ನಟನಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾರೆ. ಕಥೆಗೆ ರಂಜನಿ ರಾಘವನ್ ಆತ್ಮವಾಗಿದ್ದಾರೆ, ಎರಡೂ ಶೇಡ್ ಗಳಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ, ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ. ಇಬ್ಬರು ಕಲಾವಿದರ ನಟನಾ ಸಾಮರ್ಥ್ಯವನ್ನು ಹೊರ ತೆಗೆದಿರುವ ಕ್ರೆಡಿಟ್ ನಿರ್ದೇಶಕ ಕಿಶೋರ್ ಮೇಗಳ ಮನೆ ಅವರಿಗೆ ಸಲ್ಲುತ್ತದೆ. ಇನ್ನೂ ಸಾಧು ಕೋಕಿಲಾ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ.

ಸಿನಿಮಾ: ಕಾಂಗರೂ

ನಿರ್ದೇಶನ: ಕಿಶೋರ್ ಮೇಗಳಮನೆ

ಕಲಾವಿದರು: ಆದಿತ್ಯ, ರಂಜನಿ ರಾಘವನ್, ನಾಗೇಂದ್ರ ಅರಸ್, ಕರಿ ಸುಬ್ಬು, ಮತ್ತು ಅಶ್ವಿನ್ ಹಾಸನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT