ಸಾಂಕೇತಿಕ ಚಿತ್ರ online
ಅಂಕಣಗಳು

ಉಳಿತಾಯದ ಜೊತೆಗೆ ನಮಗಾಗಿ ಖರ್ಚು ಮಾಡುವುದರ ನಡುವಿನ ಸಮತೋಲನಕ್ಕೆ 5 ಸೂತ್ರಗಳು (ಹಣಕ್ಲಾಸು)

ನಾವು ಇಂದಿಗೂ ಸೇವಿಂಗ್ ಸೊಸೈಟಿ. ಖರ್ಚು ಮಾಡುವವರನ್ನು ಇಂದಿಗೂ ನಾವು ನೋಡುವ ದೃಷ್ಟಿ ಬೇರೆ. ಕಾಲ ಬದಲಾಗುತ್ತಿದೆ, ನಮ್ಮ ಸಮಾಜ ಕೂಡ ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಪಡೆದು ಖರ್ಚು ಮಾಡುವ ಮಟ್ಟಕ್ಕೆ ಬದಲಾಗುತ್ತಿದೆ. (ಹಣಕ್ಲಾಸು-425)

ಮನುಷ್ಯನ ಬದುಕಿನ ಅತಿ ದೊಡ್ಡ ಗೊಂದಲ ಹಣವನ್ನು ಖರ್ಚು ಮಾಡಬೇಕೋ ಅಥವಾ ಅದನ್ನು ಉಳಿಸಬೇಕೋ ಎನ್ನುವುದು. ಈ ಪ್ರಶ್ನೆ ಇಂದು ನಿನ್ನೆಯದಲ್ಲ. ಅದರಲ್ಲೂ ಭಾರತೀಯ ಸಮಾಜದಲ್ಲಿ ನಾಳೆಗಾಗಿ ಎಂದು ಉಳಿಸುವುದು ರಕ್ತಗತವಾಗಿ ಬಂದಿದೆ. ನಾವು ಇಂದಿಗೂ ಸೇವಿಂಗ್ ಸೊಸೈಟಿ. ಖರ್ಚು ಮಾಡುವವರನ್ನು ಇಂದಿಗೂ ನಾವು ನೋಡುವ ದೃಷ್ಟಿ ಬೇರೆ. ಕಾಲ ಬದಲಾಗುತ್ತಿದೆ , ನಮ್ಮ ಸಮಾಜ ಕೂಡ ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಪಡೆದು ಖರ್ಚು ಮಾಡುವ ಮಟ್ಟಕ್ಕೆ ಬದಲಾಗುತ್ತಿದೆ. ಇದು ಒಳ್ಳೆಯದೇ? ಅಥವಾ ಕೆಟ್ಟದ್ದೇ? ಎನ್ನುವುದು ಕೂಡ ಇಂದಿಗೆ ಡಿಬೆಟಬಲ್.

ರಂಗರಾಜು ಅವರಿಗೆ 70 ವರ್ಷ. ಪೂರ್ಣಾವಧಿ ಬ್ಯಾಂಕಿನಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ದಶಕವಾಗಿದೆ. ಆದರೆ ಇಂದಿಗೂ ಅದೇ ಶಿಸ್ತಿನ ಜೀವನವನ್ನು ಪಾಲಿಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವವರ ರೀತಿಯಲ್ಲಿ ಅವರ ತಯಾರಿ ನಡೆಯುತ್ತದೆ. ಒಂದು ದಿನವೂ ಇಸ್ತ್ರಿ ಇಲ್ಲದ ಬಟ್ಟೆಯನ್ನು ಅವರು ಹಾಕಿಲ್ಲ. ಶಿಸ್ತಿನ ಸಿಪಾಯಿ ರಂಗರಾಜು ಅವರಿಗೆ ಬೆಳಿಗ್ಗೆ ತಿಂಡಿ ಎಂಟೂವರೆಗೆ ತಿಂದು ಅಭ್ಯಾಸ. ಜೀವನದ ಬಹುಪಾಲು ಸಮಯ ಅದನ್ನು ಪಾಲಿಸಿಕೊಂಡು ಬಂದದ್ದರ ಫಲವದು. ಮಗ, ಸೊಸೆ ಮೊಮ್ಮಕ್ಕಳು ಬೆಳಿಗ್ಗೆ ಮನೆ ಬಿಡುವ ಧಾವಂತದಲ್ಲಿ ಇರುತ್ತಾರೆ. ರಂಗರಾಜು ಅವರಿಗೆ ಬೆಳಿಗ್ಗೆ ಎಂಟುವರೆಗೆ ತಿಂಡಿ ಸಿಗುವುದು ಬಹಳ ಕಷ್ಟವಾಗಿದೆ.

ಇದು ವಾರದ ದಿನಗಳ ಕಥೆಯಾದರೆ, ಇನ್ನು ವಾರಾಂತ್ಯದಲ್ಲಿ ಎಲ್ಲರೂ ಏಳುವುದು ಎಂಟರ ಮೇಲೆ, ವಾರಾಂತ್ಯ ಕೂಡ ರಂಗರಾಜು ರವರು ಬೆಳಿಗ್ಗೆ ಬೇಗ ಎಂದು ದೈನಂದಿನ ಕ್ರಿಯೆಗಳನ್ನು ಮುಗಿಸಿ ಮಗ, ಸೊಸೆ ಮೊಮ್ಮಕ್ಕಳು ಏಳುವುದನ್ನು ಕಾಯುತ್ತಾರೆ. ತಿಂಡಿ ಯಾವಾಗ ಸಿಗುತ್ತದೆ ಎಂದು ಅಡುಗೆಮನೆಯ ಕಡೆಗೆ ಅವರ ದೃಷ್ಟಿ ಇರುತ್ತದೆ. ಹಳೆಕಾಲದ ಭಾರತೀಯ ಪುರುಷನಾದ ಕಾರಣ ಗ್ಯಾಸ್ ಹತ್ತಿಸುವುದಕ್ಕೆ ಬರುವುದಿಲ್ಲ, ಇನ್ನು ತಿಂಡಿ ಮಾಡಿಕೊಳ್ಳುವುದರ ಮಾತು ಬಹಳ ದೂರ. ಈ ಬೆಳಗ್ಗಿನ ತಿಂಡಿ ಸಮಸ್ಯೆ ಬಿಟ್ಟರೆ ಬೇರಾವ ತೊಂದರೆಯೂ ಇಲ್ಲದ ಸುಖವಾಗಿದ್ದಾರೆ.

ರಂಗರಾಜು ಅವರಿಗೆ 70 ವರ್ಷ. ಪೂರ್ಣಾವಧಿ ಬ್ಯಾಂಕಿನಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ದಶಕವಾಗಿದೆ. ಆದರೆ ಇಂದಿಗೂ ಅದೇ ಶಿಸ್ತಿನ ಜೀವನವನ್ನು ಪಾಲಿಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವವರ ರೀತಿಯಲ್ಲಿ ಅವರ ತಯಾರಿ ನಡೆಯುತ್ತದೆ. ಒಂದು ದಿನವೂ ಇಸ್ತ್ರಿ ಇಲ್ಲದ ಬಟ್ಟೆಯನ್ನು ಅವರು ಹಾಕಿಲ್ಲ. ಶಿಸ್ತಿನ ಸಿಪಾಯಿ ರಂಗರಾಜು ಅವರಿಗೆ ಬೆಳಿಗ್ಗೆ ತಿಂಡಿ ಎಂಟೂವರೆಗೆ ತಿಂದು ಅಭ್ಯಾಸ. ಜೀವನದ ಬಹುಪಾಲು ಸಮಯ ಅದನ್ನು ಪಾಲಿಸಿಕೊಂಡು ಬಂದದ್ದರ ಫಲವದು. ಮಗ, ಸೊಸೆ ಮೊಮ್ಮಕ್ಕಳು ಬೆಳಿಗ್ಗೆ ಮನೆ ಬಿಡುವ ಧಾವಂತದಲ್ಲಿ ಇರುತ್ತಾರೆ. ರಂಗರಾಜು ಅವರಿಗೆ ಬೆಳಿಗ್ಗೆ ಎಂಟುವರೆಗೆ ತಿಂಡಿ ಸಿಗುವುದು ಬಹಳ ಕಷ್ಟವಾಗಿದೆ.

ಇದು ವಾರದ ದಿನಗಳ ಕಥೆಯಾದರೆ, ಇನ್ನು ವಾರಾಂತ್ಯದಲ್ಲಿ ಎಲ್ಲರೂ ಏಳುವುದು ಎಂಟರ ಮೇಲೆ, ವಾರಾಂತ್ಯ ಕೂಡ ರಂಗರಾಜು ರವರು ಬೆಳಿಗ್ಗೆ ಬೇಗ ಎಂದು ದೈನಂದಿನ ಕ್ರಿಯೆಗಳನ್ನು ಮುಗಿಸಿ ಮಗ, ಸೊಸೆ ಮೊಮ್ಮಕ್ಕಳು ಏಳುವುದನ್ನು ಕಾಯುತ್ತಾರೆ. ತಿಂಡಿ ಯಾವಾಗ ಸಿಗುತ್ತದೆ ಎಂದು ಅಡುಗೆಮನೆಯ ಕಡೆಗೆ ಅವರ ದೃಷ್ಟಿ ಇರುತ್ತದೆ. ಹಳೆಕಾಲದ ಭಾರತೀಯ ಪುರುಷನಾದ ಕಾರಣ ಗ್ಯಾಸ್ ಹತ್ತಿಸುವುದಕ್ಕೆ ಬರುವುದಿಲ್ಲ, ಇನ್ನು ತಿಂಡಿ ಮಾಡಿಕೊಳ್ಳುವುದರ ಮಾತು ಬಹಳ ದೂರ. ಈ ಬೆಳಗ್ಗಿನ ತಿಂಡಿ ಸಮಸ್ಯೆ ಬಿಟ್ಟರೆ ಬೇರಾವ ತೊಂದರೆಯೂ ಇಲ್ಲದ ಸುಖವಾಗಿದ್ದಾರೆ.

ಮೊಮ್ಮಕ್ಕಳಿಗೆ ತಾತ ಎಂದರೆ ಅಚ್ಚುಮೆಚ್ಚು. ಮಗ, ಸೊಸೆ ಕೂಡ ಗೌರವವಾಗಿ ನಡೆದುಕೊಳ್ಳುತ್ತಾರೆ. ರಂಗರಾಜು ಅವರ ಬ್ಯಾಂಕ್ ಬ್ಯಾಲೆನ್ಸ್ ಕೇಳಿದರೆ ಅಚ್ಚರಿ ಪಡುವಷ್ಟಿದೆ. ಅವರು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ತಮ್ಮ ಪೆನ್ಷನ್ ಹಣವನ್ನು ಜೋಡಿಸಿ ಇಡುತ್ತಿದ್ದಾರೆ. ಅಷ್ಟೆಲ್ಲಾ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಕೊಂಡು ಪ್ರತಿನಿತ್ಯ ಬೆಳಗ್ಗಿನ ಉಪಹಾರ ಸರಿಯಾದ ಸಮಯಕ್ಕೆ ಸೇವಿಸದೆ ಹಸಿವಿನಲ್ಲಿ ಕಳೆಯುತ್ತಾರೆ.

ಮನೆಯಿಂದ ಹತ್ತೆಜ್ಜೆ ದೂರದಲ್ಲಿರುವ ಹೋಟೆಲ್ನಲ್ಲಿ ಎರಡು ಬಿಸಿ ಇಡ್ಲಿ ತಿಂದರೆ ಮುಗಿದು ಹೋಗುವ ಕೆಲಸಕ್ಕೆ ವರ್ಷಗಳಿಂದ ಅದೊಂದು ಸಮಸ್ಯೆ ಎನ್ನುವಂತೆ ಉಳಿಸಿಕೊಂಡಿದ್ದಾರೆ. ಇದು ಮನಸ್ಥಿತಿ ಸಮಸ್ಯೆ. ಕೆಲವರಿಗೆ ದಿನನಿತ್ಯ ಎರಡು ಇಡ್ಲಿ ತಿನ್ನುವುದು ಹಣ ಪೋಲು ಎನ್ನಿಸುತ್ತದೆ. ಕೆಲವರಿಗೆ ಬಟ್ಟೆಯ ಮೇಲೆ ಖರ್ಚು ಮಾಡುವುದು, ಇನ್ನೂ ಕೆಲವರಿಗೆ ಸ್ಕೂಟರ್ಗೆ ಹಾಕುವ ಪೆಟ್ರೋಲ್ ಹಣವನ್ನು ಪೋಲು ಮಾಡಿದಂತೆ ಎನ್ನಿಸುತ್ತದೆ.

ನಮ್ಮ ಹಿರಿಯರು ಕೈಯನ್ನು ಹಿಡಿತ ಮಾಡಿ ಬದುಕಿದುದರ ಬಳುವಳಿಯದು. ಚಿಕ್ಕವರಿಂದ ಹಣವನ್ನು ಪೋಲು ಮಾಡಬಾರದು, ಅನವಶ್ಯಕ ಖರ್ಚು ಮಾಡಬಾರದು ಇತ್ಯಾದಿ ಮಾತುಗಳನ್ನು ಕೇಳಿಕೊಂಡು ಬೆಳೆದುದರ ಫಲ, ಅಲ್ಲದೆ ನಮ್ಮ ಸುತ್ತಮುತ್ತಲಿನ ಸಮಾಜ ಕೂಡ ಹೆಚ್ಚು ಕಡಿಮೆ ಅದೇ ರೀತಿ ವರ್ತಿಸುತ್ತಿತ್ತು. ಹಣದ ನಿಜವಾದ ಖುಷಿ ಇರುವುದು ಅದನ್ನು ಖರ್ಚು ಮಾಡುವುದರಲ್ಲಿ!

ಐವತ್ತರ ನಂತರ ಬದುಕನ್ನು ಅದೆಷ್ಟು ಸರಾಗವಾಗಿ ತೆಗೆದುಕೊಳ್ಳುತ್ತೇವೆ ಅಷ್ಟೂ ನಮಗೆ ಒಳ್ಳೆಯದು. ಅರವತ್ತರ ನಂತರವಂತೂ ಇರುವ ಪ್ರತಿ ಕ್ಷಣವನ್ನೂ ಆಸ್ವಾದಿಸಬೇಕು. ಅನವಶ್ಯಕ ಚಿಂತೆಯಲ್ಲಿ, ಹೊಸ ಜವಾಬ್ದಾರಿಗಳಲ್ಲಿ ಸಿಲುಕಿಕೊಳ್ಳಬಾರದು. ಮನಸ್ಸಿಗೆ ಖುಷಿ ನೀಡುವ ಹವ್ಯಾಸವನ್ನು ವೃದ್ಧಿಸಿಕೊಂಡು ಅದರಲ್ಲಿ ನೆಮ್ಮದಿಯನ್ನು ಕಾಣಬೇಕು. ನಮ್ಮ ಅವಶ್ಯಕತೆಗೂ ಖರ್ಚು ಮಾಡದೆ ಉಳಿಸುವುದು ನಿಜಕ್ಕೂ ಮೂರ್ಖತನ. ಅರವತ್ತರ ನಂತರ ನೆನಪಿನಲ್ಲಿ ಇಟ್ಟು ಕೊಳ್ಳಬೇಕಾದ ಅಂಶಗಳು ಹೀಗಿವೆ.

  1. ನಿವೃತ್ತಿ ವೇತನ ಎಷ್ಟು ಬರುತ್ತದೆ ಅದರಲ್ಲಿ ಒಂದಷ್ಟು ಅಂಶವನ್ನು ಮಗ ಅಥವಾ ಮಗಳು, ಯಾರ ಜೊತೆಯಲ್ಲಿರುತ್ತಾರೆ ಅವರಿಗೆ ನೀಡುವುದು. ಅವರ ಮೇಲೆ ಅವಲಂಬಿತರಾಗುವ ಅವಶ್ಯಕತೆಯಿಲ್ಲ.

  2. ಬದುಕಿಗೆ ಅವಶ್ಯಕ ಎನ್ನಿಸಿದ ಯಾವುದೇ ವಸ್ತು ಅಥವಾ ವಿಷಯದ ಮೇಲೆ ಖರ್ಚು ಮಾಡಲು ಹಿಂಜರಿಕೆ ಬೇಡ.

  3. ಮಕ್ಕಳ ಅಥವಾ ಮೊಮ್ಮಕ್ಕಳ ಭವಿಷ್ಯ ನಿಧಿ, ಶಿಕ್ಷಣ ನಿಧಿ ಕೂಡಿಡುವುದು ನಿಮ್ಮ ಕೆಲಸವಲ್ಲ. ಮಕ್ಕಳು ದೊಡ್ಡವರರಾಗಿದ್ದರೆ ಅವರಿಗೆ ಬೇಕಾದ ಸಂಪತ್ತು ಸೃಷ್ಟಿ ಅವರು ಮಾಡಿಕೊಳ್ಳುತ್ತಾರೆ.

  4. ಅವರಿಗಾಗಿ ಎಂದು ಕಷ್ಟಪಟ್ಟು ಉಳಿಸುವುದು ಬೇಡ. ಹಾಗೊಮ್ಮೆ ಎಲ್ಲಾ ಅವಶ್ಯಕತೆ ಮುಗಿದು ಹಣ ಉಳಿದ ಪಕ್ಷದಲ್ಲಿ ಅದನ್ನು ಮಕ್ಕಳಿಗೆ ಅಥವಾ ಮೊಮ್ಮಕಳಿಗೆ ಅವರ ಹುಟ್ಟುಹಬ್ಬದ ದಿನ ಅಥವಾ ಇನ್ನ್ಯಾವುದೋ ಶುಭ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಬಹುದು. ಆದರೆ ಅವರಿಗಾಗಿ ಎಂದು ದೊಡ್ಡ ಮೊತ್ತದ ಹಣವನ್ನು ನಿಧಿಯ ರೂಪದಲ್ಲಿ ಕೊಡಿಡುವುದು ತಪ್ಪು.

  5. ಬದುಕಿನಲ್ಲಿ ಕೊನೆತನಕ ನಮ್ಮ ಜೊತೆ ಬರುವುದು ಅನುಭವಗಳು ಮಾತ್ರ. ಈ ಸಮಯದಲ್ಲಿ ಕೈಲಾಗುವ ಪ್ರದೇಶಗಳಿಗೆ ಪ್ರವಾಸ ಹೋಗುವುದು, ಸಂಗೀತ ಕಚೇರಿಗೆ ಹೋಗುವುದು, ಒಳ್ಳೆಯ ಸಾಹಿತ್ಯದ ಪುಸ್ತಕಳನ್ನು ಕೊಂಡು ಓದುವುದು. ಒಳ್ಳೆಯ ಹೋಟೆಲ್ನಲ್ಲಿ ಊಟ ಮಾಡುವುದು , ಪರಿವಾರವನ್ನು ಕರೆದುಕೊಂಡು ಹೋಗಿ ಬಿಲ್ ನಾವೇ ಕೊಡುವುದು ಮಾಡುವುದು.

ಒಟ್ಟಾರೆ ಹಣವನ್ನು ಈ ವಯಸ್ಸಿನಲ್ಲಿ ಹೆಚ್ಚು ಉಳಿಸಿ ಮಕ್ಕಳಿಗೆ , ಮೊಮ್ಮಕ್ಕಳಿಗೆ, ನಾಳೆಗೆ ಎಂದು ಉಳಿಸುವ ಅಗತ್ಯವಿಲ್ಲ. ಇದು ಹೇಳಿದಷ್ಟು ಸುಲಭವಲ್ಲ. ನಮ್ಮ ಸಮಾಜ ಈ ರೀತಿ ಆರಾಮಾಗಿ ಖರ್ಚು ಮಾಡಿಕೊಂಡು ಇರುವರನ್ನು ಕೆಟ್ಟವರು ಎನ್ನುವಂತೆ ಕಾಣುತ್ತದೆ. ಆದರೆ ಸಮಾಜ ಕೂಡ ಬದಲಾಗುತ್ತಿದೆ. ಪ್ರಥಮ ದಿನಗಳಲ್ಲಿ ಒಂದಷ್ಟು ಸಮಾಜದ ಕೆಂಗಣ್ಣಿಗೆ ಗುರಿಯಾಗುವುದು ಸಾಮಾನ್ಯ. ಆದರೆ ನಾವು ಬಯಸಿದ ಬದುಕನ್ನು ಬದುಕುವ ಹಕ್ಕು ಎಲ್ಲರಿಗೂ ಇರುತ್ತದೆ.

ಹೋಗುವ ಮುನ್ನ: ಬದುಕು ಪೂರ್ತಿ ಹಾವು ಏಣಿ ಆಟದಲ್ಲಿ ಪಾಲ್ಗೊಂಡು ನಿಮ್ಮೆಲ್ಲಾ ಜವಾಬ್ದಾರಿಗಳನ್ನು ಪೂರೈಸಿ ಈ ವಯಸ್ಸಿಗೆ ಕಾಲಿಟ್ಟಿದ್ದೀರಿ. ಈ ದಿನಗಳನ್ನು ಆಸ್ವಾದಿಸುವ ಹಕ್ಕು ಪಡೆದುಕೊಂಡಿದ್ದೀರಿ. ಹೀಗಾಗಿ ಹೆಚ್ಚು ಚಿಂತಿಸದೆ ಅದನ್ನು ಎಂಜಾಯ್ ಮಾಡುವುದು ಆದ್ಯತೆಯಾಗಬೇಕು. ಮಕ್ಕಳು ತೀರಾ ಕೆಟ್ಟ ಪರಿಸ್ಥಿತಿಯಲ್ಲಿದ್ದರೆ ಆಗ ಬೇರೆ ಮಾತು.

ಒಟ್ಟಾರೆ ಜೀವನದ ಸಂಧ್ಯೆಯಲ್ಲಿ ಅನ್ನಿಸಿದ್ದ ಮಾಡುವ ಮಕ್ಕಳ ಸಹಜ ಕುತೂಹಲ ಮೂಡಿದರೆ ಅದಕ್ಕಿಂತ ಅದೃಷ್ಟ ಬೇರಿಲ್ಲ. ನೆನಪಿರಲಿ ಮುಖ್ಯವಾಹಿನಿಯಲ್ಲಿ ಬದುಕಿನ ಹೊಡೆದಾಟದ ದಿನಗಳು ನಿಮ್ಮ ಪಾಲಿಗೆ ಮುಗಿದಿವೆ. ಮುಂದಿನದು ಮಕ್ಕಳು , ಮೊಮ್ಮಕ್ಕಳದ್ದು. ಅವರ ಜೀವನವನ್ನು ಅವರೇ ಜೀವಿಸಬೇಕು. ನಾವು ಜೀವಿಸಲಾಗದು. ಹೀಗಾಗಿ ನಾವು ನಮ್ಮ ಜೀವನವನ್ನು ಜೀವಿಸೋಣ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT